ಪ್ರಮುಖ ರಾಜ್ಯ ಶಿಕ್ಷಣ

ಎಸ್ಎಸ್ಎಲ್‌ಸಿ ಪರೀಕ್ಷಾಭಿಮುಖವಾದ ಪಠ್ಯ ಬೋಧನೆಗೆ ಒತ್ತು: ಸುರೇಶ್ ಕುಮಾರ್

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ತರಗತಿಗೆ ಸಂಬಂಧಿಸಿದಂತೆ ಮುಂದಿನ ಪದವಿಪೂರ್ವ ಶಿಕ್ಷಣಕ್ಕೆ ಅವಶ್ಯಕವಾಗುವ ಕನಿಷ್ಟ ಜ್ಞಾನ ಹಾಗೂ ಪರೀಕ್ಷಾಭಿಮುಖವಾಗಿ ಅವಶ್ಯಕ‌ವಾಗುವ ಪಠ್ಯವನ್ನು ನಿರ್ಧರಿಸಿ ಬೋಧನೆಗೆ ನಿರ್ಣಯಿಸಲಾಗಿದೆ. ಬೋಧನೆಗೆ ಲಭ್ಯವಾಗುವ ಸಮಯದ ಆಧಾರದಲ್ಲಿ ರೂಪರೇಷೆಗಳನ್ನು ಮುಂದಿನ ಒಂದು ವಾರದ ಅವಧಿಯಲ್ಲಿ ಪ್ರಕಟಿಸಲಾಗುತ್ತದೆ‌ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಜ.1 ಶಾಲಾರಂಭ:
ಮುಖ್ಯಮಂತ್ರಿಗಳು ಈಗಾಗಲೇ‌ ಘೋಷಿಸಿರುವಂತೆ ಜನವರಿ ಒಂದಕ್ಕೆ ಶಾಲೆಗಳು ಆರಂಭವಾಗಲಿವೆ. ತಾಂತ್ರಿಕ‌ ಸಲಹಾ‌ ಸಮಿತಿಯ ಅಭಿಪ್ರಾಯ ಹಾಗೂ ಈ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ‌ ಶಾಲಾರಂಭಕ್ಕೆ‌ ಅಗತ್ಯ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತಿದೆ‌ ಎಂದು‌ ಅವರು ಹೇಳಿದ್ದಾರೆ.

ಜನವರಿ ಒಂದಕ್ಕೆ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದ್ದು, ಅದರ‌ ಯಶಸ್ಸಿನ‌ ಆಧಾರದಲ್ಲಿ ಜನವರಿ‌ 15, 2021ಕ್ಕೆ ಉಳಿದ ತರಗತಿಗಳ ಪ್ರಾರಂಭಕ್ಕೆ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು. ಈಗಾಗಲೇ ತಿಳಿಸಲಾದ ರೀತಿಯಲ್ಲಿ ಜನವರಿ‌ ಒಂದರಿಂದ ಆಯ್ದ ತರಗತಿಗಳ‌ ವಿದ್ಯಾಗಮ ಕಾರ್ಯಕ್ರಮವೂ ಆರಂಭವಾಗಲಿದೆ‌ ಎಂದು‌ ಅವರು ಖಚಿತಪಡಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಭಾರಿ ಮಳೆ ಗೆ; ವಿ.ವಿ ಸ್ನಾತಕೋತ್ತರ ಪರೀಕ್ಷೆ ಮುಂದೂಡಿಕೆ

Harshitha Harish

ಪ್ರಧಾನಿ ಮೋದಿ ಕುರಿತ ಶ್ಲಾಘನೆ: ಜೈರಾಮ್ ರಮೇಶ್, ಶಶಿ ತರೂರ್ ವಿರುದ್ಧ ಮೊಯ್ಲಿ ಕಿಡಿ

Upayuktha

ಕಾಶ್ಮೀರಿ ಪಂಡಿತರು ತಮ್ಮ ಮೂಲ ನೆಲೆಗೆ ಮರಳುವುದನ್ನು ವಿಶ್ವದ ಯಾವುದೇ ಶಕ್ತಿ ತಡೆಯಲಾಗದು: ರಾಜನಾಥ್ ಸಿಂಗ್‌

Upayuktha