ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ: ಸಂತ ಫಿಲೋಮಿನಾ ಕಾಲೇಜಿಗೆ ಪ್ರಶಸ್ತಿ

ಪುತ್ತೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು ವತಿಯಿಂದ ಮಾರ್ಚ್ 1 ಮತ್ತು 2 ರಂದು ಬೆಂಗಳೂರು ಸಿಟಿ ಯುನಿರ್ವಸಿಟಿ (ಸೆಂಟ್ರಲ್ ಕಾಲೇಜು, ಬೆಂಗಳೂರು) ಆಯೋಜಿಸಿದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಗಳನ್ನೊಳಗೊಂಡ ಸಹನಾ ಪಿ ಜಿ ಮತ್ತು ಶರಣ್ಯ ಇವರ ತಂಡವು ಪ್ರದರ್ಶಿಸಿದ ‘ಆಹಾರ, ಆರೋಗ್ಯ ಮತ್ತು ನೈರ್ಮಲ್ಯ’ ಶಿರ್ಷಿಕೆಯ ವಿಜ್ಞಾನ ಮಾದರಿಯು ನಗದು ಮೂರು ಸಾವಿರ ರೂಪಾಯಿ ಮತ್ತು ಪ್ರಶಸ್ತಿ ಫಲಕದೊಂದಿಗೆ ಪ್ರೋತ್ಸಾಹಕ ಬಹುಮಾನವನ್ನು ಪಡೆದುಕೊಂಡಿದೆ.

ರಾಜ್ಯದ ಆರು ವಲಯಗಳಿಂದ 30 ತಂಡಗಳು ಪಾಲ್ಗೊಂಡಿದ್ದ ಈ ಸ್ಪರ್ಧೆಯಲ್ಲಿ ಕಾಲೇಜಿನ ಪ್ರಥಮ ವರ್ಷದ ಬಿಎಸ್ಸಿಯ ಕಾರ್ತಿಕ್ ಮತ್ತು ದೀಪಾಶ್ರೀ ಇವರನ್ನೊಳಗೊಂಡ ತಂಡವು ಭಾಗವಹಿಸಿ, ಉತ್ತಮ ಪ್ರದರ್ಶನವನ್ನು ನೀಡಿತ್ತು. ವಿಜ್ಞಾನ ವೇದಿಕೆಯ ನಿರ್ದೇಶಕರಾದ ಎಡ್ವಿನ್ ಡಿ’ಸೋಜ ಇವರು ತಂಡವನ್ನು ಮುನ್ನಡೆಸಿದ್ದರು.

ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮತ್ತು ವಿಜ್ಞಾನ ವಿಭಾಗದ ಡೀನ್ ಪ್ರೊ. ಉದಯ ಕೆ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಧರ್ಮಸ್ಥಳದಲ್ಲಿ ಪುರಾಣ ವಾಚನ- ಪ್ರವಚನ ಪ್ರಾರಂಭ

Upayuktha

ಕ್ರೀಡಾ ಪತ್ರಕರ್ತ ಯೋಗೇಶ್ ಗರುಡ ನಿಧನ

Upayuktha

ಬಿಜೆಪಿ ಜಿಲ್ಲಾ ಪ್ರಕೋಷ್ಠ: ದ.ಕ.ಜಿಲ್ಲಾ ಪ್ರಕೋಷ್ಠದ ಸದಸ್ಯರಾಗಿ ಮೋಹನದಾಸ ಅಳದಂಗಡಿ ನೇಮಕ

Sushmitha Jain