ಬೆಂಗಳೂರು: ಕೊರೊನಾ ಮತ್ತು ಲಾಕ್ಡೌನ್ನಿಂದಾಗಿ ಶಾಲೆಗಳ ಬಾಗಿಲು ಬಂದ್ ಆಗಿ ಸುಮಾರು 1 ವರ್ಷದ ನಂತರ ಇದೀಗ ಶಾಲೆಗಳು ಹಂತ ಹಂತವಾಗಿ ಪುನರಾರಂಭವಾಗುತ್ತಿವೆ. ಕೊರೊನಾ ಹರಡುವಿಕೆ ಕಡಿಮೆ ಆಗಿದ್ದರಿಂದ ಹಾಗೂ ಕೊರೊನಾಗೆ ನಿರೋಧಕ ಲಸಿಕೆ ಈಗ ಲಭ್ಯವಾಗಿರುವುದರಿಂದ ಹಂತ ಹಂತವಾಗಿ ಶಾಲೆಗಳ ಬಾಗಿಲು ತೆರೆಯಲಾಗುತ್ತಿದೆ.
ಈಗಾಗಲೇ 9, 10, ಪ್ರಥಮ ಮತ್ತು ದ್ವಿತೀಯ ಪಿಯು ತರಗತಿಗಳು ಆರಂಭವಾಗಿವೆ. ಇಂದಿನಿಂದ 6, 7, 8ನೇ ತರಗತಿಗಳು ಪ್ರಾರಂಭವಾಗಲಿವೆ. 6, 7, 8ನೇ ತರಗತಿಗಳನ್ನು ಆರಂಭಿಸಲು ನಿರ್ಧರಿಸಿರುವ ಶಿಕ್ಷಣ ಇಲಾಖೆ, ಮಾರ್ಗಸೂಚಿಗಳನ್ನೂ ಪ್ರಕಟಿಸಿದೆ. ಆ ಗೈಡ್ಲೈನ್ಸ್ನ್ನು ಕಡ್ಡಾಯವಾಗಿ ಪಾಲಿಸಬೇಕು ಅಂತ ಕಡ್ಡಾಯ ಸೂಚನೆ ನೀಡಿದೆ.
ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಡ್ಡಾಯವಲ್ಲವೆಂದು ಶಿಕ್ಷಣ ಇಲಾಖೆ ಮಾರ್ಗಸೂಚಿಯಲ್ಲಿ ಹೇಳಿದೆ.
ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ವಿದ್ಯಾರ್ಥಿಗಳಿಗೆ ತರಗತಿಗೆ ಬರಲು ಅವಕಾಶ ಇರುತ್ತದೆ. ಕೊರೊನಾ ಲಕ್ಷಣಗಳು ಇರುವವರಿಗೆ ಅವಕಾಶ ಇಲ್ಲ.
ಇದರ ಜೊತೆಗೆ ವಿದ್ಯಾರ್ಥಿಗಳು ಆನ್ಲೈನ್ನಲ್ಲೂ ಪಾಠ ಕೇಳಬಹುದು.
ಶಾಲೆಗೆ ಬರುವ ಮಕ್ಕಳಿಗೆ ಪೋಷಕರ ಅನುಮತಿ ಕಡ್ಡಾಯವಾಗಿರಬೇಕು ಅಂತ ಶಿಕ್ಷಣ ಇಲಾಖೆ ಗೈಡ್ಲೈನ್ಸ್ನಲ್ಲಿ ತಿಳಿಸಿದೆ.
ರಾಜ್ಯದಲ್ಲಿನ 6ರಿಂದ 8ನೇ ತರಗತಿ ಆರಂಭವಾಗುತ್ತಿವೆ. ಆದರೆ, ಬೆಂಗಳೂರಿಗೆ ಮಾತ್ರ ಈ ಆದೇಶ ಅನ್ವಯ ಆಗುವುದಿಲ್ಲ.. ಯಾಕೆಂದರೆ, ಬೆಂಗಳೂರು ನಗರವನ್ನು ವಿಶೇಷವಾಗಿ ಪರಿಗಣಿಸಿ, ರಾಜಧಾನಿಯಲ್ಲಿ 6 ಮತ್ತು 7ನೇ ತರಗತಿ ಆರಂಭಕ್ಕೆ ಅನುಮತಿ ನೀಡಿಲ್ಲ. ಕೇವಲ 8ನೇ ತರಗತಿ ಮಾತ್ರ ಆರಂಭವಾಗುತ್ತಿದೆ.