ಪ್ರಮುಖ ರಾಜ್ಯ

ಬೆಳೆ ಸಾಲದ ಮರುಪಾವತಿ ಅವಧಿ ವಿಸ್ತರಣೆ ಸಾಧ್ಯವಿಲ್ಲ

ಬೆಳ್ತಂಗಡಿ: ರೈತರು ತಾವು ಮಾಡಿದ ಬೆಳೆ ಸಾಲದ ಮೊತ್ತವನ್ನು ನಿಗದಿತ ದಿನದೊಳಗೆ ಮರುಪಾವತಿ ಮಾಡತಕ್ಕದ್ದು, ಸಾಲ ಮರುಪಾವತಿಸಿದ 15 ದಿನಗಳಲ್ಲಿ ಮರು ಸಾಲ ವಿತರಿಸಲಾಗುವುದು. ಅಲ್ಲದೆ ರೈತರು ಮಾಡಿರುವ ಬೆಳೆ ಸಾಲದ ಮರುಪಾವತಿ ಅವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು  ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ರಾಜ್ಯಾದ್ಯಂತ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ಮಧ್ಯೆಯೂ ಬೆಳೆ ಸಾಲ ಮರುಪಾವತಿ ಅನಿವಾರ್ಯವಾಗಿದ್ದು, ರೈತರ ಮೇಲಿನ ಸಾಲ ಮರುಪಾವತಿ ಭಾರವನ್ನು ಇಳಿಸುವ ನಿಟ್ಟಿನಲ್ಲಿ ಶೀಘ್ರವೇ ಸರ್ಕಾರ ಚಿಂತಿಸಬೇಕಾಗಿದೆ.

ಸಾಲ ಮರುಪಾವತಿ ಅವಧಿ ವಿಸ್ತರಣೆ ಮಾಡುವುದು ರಾಜ್ಯ ಸರ್ಕಾರದ ಕೈಯ್ಯಲ್ಲಿಲ್ಲ. ಒಂದು ವೇಳೆ ನಬಾರ್ಡ್ ಅನುಮತಿ ನೀಡಿದರೆ ಮಾತ್ರ ಅವಧಿ ವಿಸ್ತರಣೆ ಸಾಧ್ಯ ಎಂದು ಅವರು ಹೇಳಿಕೆ ನೀಡಿದ್ದಾರೆ.

Related posts

ದಕ್ಷಿಣ ಕನ್ನಡ ಕೇರಳ ಸಂಚಾರಕ್ಕೆ ಗಡಿ ಓಪನ್, ಷರತ್ತುಗಳು ಅನ್ವಯ

Harshitha Harish

ದೇವಾಲಯಗಳ ಇತಿಹಾಸ, ಶಾಸನಗಳ ಪ್ರಾಚೀನತೆ ಬಿಂಬಿಸಿದ ಗೋಷ್ಠಿ

Upayuktha

ಕೊರೊನಾ ನಿರ್ಬಂಧ ಹಿನ್ನೆಲೆ: ವಿವಿವಿ ವಿದ್ಯಾಂಕುರ ಮುಂದೂಡಿಕೆ

Upayuktha