ಪ್ರಮುಖ ವಾಣಿಜ್ಯ

ಮುಂಬೈ ಶೇರುಪೇಟೆಯಲ್ಲಿ ಭಾರಿ ಕುಸಿತ: ಹೂಡಿಕೆದಾರರ 4.23 ಲಕ್ಷ ಕೋಟಿ ಹೂಡಿಕೆ ನಷ್ಟ

ಮುಂಬೈ: ಜಾಗತಿಕ ಷೇರು ಮಾರುಕಟ್ಟೆಗಳ ಕುಸಿತದ ಹಿನ್ನೆಲೆಯಲ್ಲಿ ಮುಂಬೈ ಶೇರುಪೇಟೆಯಲ್ಲಿ (BSE) ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, ಸೋಮವಾರ 812 ಅಂಶಗಳ ಭಾರಿ ಕುಸಿತವಾಗಿದೆ.

ಪರಿಣಾಮ ಹೂಡಿಕೆದಾರರ 4.23 ಲಕ್ಷ ಕೋಟಿ ರೂಪಾಯಿಗಳಷ್ಟು ಷೇರು ಸಂಪತ್ತು ನಷ್ಟವಾಗಿದೆ. ಬಿಎಸ್ಇಯಲ್ಲಿ ಇದು ಸತತ ಮೂರನೇ ದಿನದ ಭಾರೀ ಕುಸಿತವಾಗಿದೆ. ಇದು ಹೂಡಿಕೆದಾರರನ್ನು ಕಳವಳಕ್ಕೀಡು ಮಾಡಿದೆ.

ರಾಷ್ಟ್ರೀಯ ಶೇರುಪೇಟೆ ಎನ್ಎಸ್ಇಯಲ್ಲೂ 255 ಅಂಶಗಳ ನಷ್ಟವಾಗಿದೆ. ಎನ್ಎಸ್ಇ ನಿಫ್ಟಿ 11,250 ಅಂಶಗಳಲ್ಲಿ ಅಂತ್ಯ ಕಂಡಿದೆ. ಬಿಎಸ್ಇ ಸೆನ್ಸೆಕ್ಸ್ 38,034 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ.

ಯುರೋಪ್ ದೇಶಗಳಲ್ಲಿ ಕೊರೊನಾ 2ನೆ ಸುತ್ತು ದಾಳಿ ಆರಂಭಿಸಿರುವುದು ಜಾಗತಿಕ ಷೇರು ಮಾರುಕಟ್ಟೆಯ ಕುಸಿತಕ್ಕೆ ಕಾರಣ. ಅದರ ಋಣಾತ್ಮಕ ಪರಿಣಾಮ ಭಾರತದ ಶೇರುಪೇಟೆ ಮೇಲೆಯೂ ಆಗಿದೆ ಎಂದೇ ವಿಶ್ಲೇಷಿಸಲಾಗಿದೆ.

ಇಂಡಸ್ ಇಂಡ್ ಬ್ಯಾಂಕ್ ಷೇರು ಕುಸಿತ ಕಂಡ ಷೇರುಗಳ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿದೆ. ಭಾರ್ತಿ ಏರ್‌ಟೆಲ್, ಟಾಟಾ ಸ್ಟೀಲ್, ICICI Bank, Mahindra and Mahindra, maruti ಷೇರುಗಳು ನಷ್ಟದ ಪಟ್ಟಿಯಲ್ಲಿವೆ.

ಕೋಟಕ್ ಬ್ಯಾಂಕ್, ಇನ್ಫೋಸಿಸ್, ಟಿಸಿಎಸ್ ಸೇರಿದಂತೆ ಕೆಲವೇ ಕಂಪನಿಗಳ ಶೇರುಗಳಿಗೆ
ಸೋಮವಾರದ ವಹಿವಾಟಿನಲ್ಲಿ ಲಾಭವಾಗಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಫೇಸ್‌ಬುಕ್‌ನಿಂದ 540 ಕೋಟಿ ನಕಲಿ ಖಾತೆಗಳು ಡಿಲಿಟ್

Upayuktha

ಐಪಿಎಲ್ 2020: ಕೊಹ್ಲಿಯ ಸಿಡಿಲಬ್ಬರಕ್ಕೆ ಧೋನಿ ಪಡೆ ತತ್ತರ

Upayuktha News Network

ದೇಶದ ಭದ್ರತೆಯಲ್ಲಿ ವಾಯುಪಡೆ ಮಹತ್ವದ ಪಾತ್ರವಹಿಸಲಿದೆ: ಏರ್‌ಚೀಫ್ ಮಾರ್ಷಲ್

Upayuktha

Leave a Comment