ಮನ್ ಕೀ ಬಾತ್ನಲ್ಲಿ ಬಹಿರಂಗಪಡಿಸಿದ ಪ್ರಧಾನಿ ಮೋದಿ
ಹೊಸದಿಲ್ಲಿ: ಶತಮಾನದ ಹಿಂದೆ ವಾರಾಣಸಿಯ ದೇವಾಲಯದಿಂದ ಕಳವಾಗಿದ್ದು ಅನ್ನಪೂರ್ಣೇಶ್ವರಿ ದೇವಿಯ ಪುರಾತನ ವಿಗ್ರಹ ಶೀಘ್ರವೇ ಮರಳಿ ಭಾರತಕ್ಕೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ತಮ್ಮ ಮನ್ ಕೀ ಬಾತ್ ಪ್ರಸಾರದಲ್ಲಿ ಆರಂಭದಲ್ಲೇ ಈ ವಿಷಯ ಪ್ರಕಟಿಸಿದ ಅವರು, 1913ರಲ್ಲಿ ಈ ವಿಗ್ರಹವನ್ನು ಭಾರತದಿಂದ ಕಳ್ಳಸಾಗಣೆ ಮಾಡಲಾಗಿತ್ತು. ಇತ್ತೀಚೆಗೆ ಅದು ಕೆನಡಾದಲ್ಲಿ ಪತ್ತೆಯಾಗಿದ್ದು, ಭಾರತದ ಪ್ರಾಚೀನ ಪರಂಪರೆಯ ಪ್ರತೀಕವಾಗಿರುವ ಅಮೂಲ್ಯ ಸಂಪತ್ತನ್ನು ಮರಳಿಸಲು ಕೆನಡಾ ಸರಕಾರ ಸಮ್ಮತಿಸಿದೆ. ಇದಕ್ಕಾಗಿ ಕೆನಡಾ ಸರಕಾರಕ್ಕೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಈ ವಿಗ್ರಹದಂತೆ ಇನ್ನೂ ಹಲವಾರು ಪುರಾತನ ವಿಗ್ರಹಗಳು ಬೆಲೆ ಕಟ್ಟಲಾಗದಷ್ಟು ಅಮೂಲ್ಯವಾಗಿದ್ದು, ಅವುಗಳನ್ನು ಕಳ್ಳಸಾಗಣೆ ಮಾಡಿ ವಿದೇಶಿ ಮಾರುಕಟ್ಟೆಗಳಲ್ಲಿ ಅತ್ಯಧಿಕ ಬೆಲೆಗೆ ಮಾರಾಟ ಮಾಡುವ ದೊಡ್ಡ ಜಾಲವೇ ಇದೆ. ಅಂತಹವುಗಳನ್ನು ಹಂತ ಹಂತವಾಗಿ ಮಟ್ಟಹಾಕಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು.
ತಮ್ಮ ಸರಕಾರ ಆರಂಭಿಸಿರುವ ಕೃಷಿ ಸುಧಾರಣೆ ಕ್ರಮಗಳು ರೈತರಿಗೆ ಹೆಚ್ಚಿನ ಅವಕಾಶಗಳು ಮತ್ತು ಆದಾಯವನ್ನು ತಂದುಕೊಡಬಲ್ಲವುಗಳಾಗಿವೆ. ಇಂತಹ ಇನ್ನಷ್ಟು ಸುಧಾರಣೆಗಳನ್ನು ಜಾರಿಗೊಳಿಸುವಂತೆ ದೇಶದ ರೈತ ಸಮುದಾಯ ಬೇಡಿಕೆ ಇರಿಸಿದೆ ಎಂದು ಅವರು ಹೇಳಿದರು.
ಮನ್ ಕೀ ಬಾತ್ ಪೂರ್ಣ ಪಾಠ ಓದಲು ಇಲ್ಲಿ ಕ್ಲಿಕ್ ಮಾಡಿ;
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ