ಕತೆ-ಕವನಗಳು

ಸಣ್ಣ ಕಥೆ: ಹೆಣ್ಣು ಅಬಲೆಯೇ?

ಅಂದು ವಿಶ್ವ ಮಹಿಳಾ ದಿನ, ಹೆಣ್ಣು ಅಬಲೆ, ಅಬಲೆ ಕೇಳಿ ಕೇಳಿ ಸಾಕಾಗಿತ್ತು ಸಂಧ್ಯಾಳಿಗೆ. ಹೆಣ್ಣು ಅಬಲೆಯಲ್ಲ ಮನಸ್ಸಲ್ಲೇ 100 ಸಾರಿ ಹೇಳಿಕೊಂಡಳು ಅಂದು.

ಸಾಧಿಸಿ ತೋರಿಸಬೇಕು ಎಂದುಕೊಂಡಿದ್ದಳು. ರಸ್ತೆಯಲ್ಲಿ ಹೋಗುತ್ತಿರುವಾಗ ಅಲ್ಲೊಬ್ಬ ಕಳ್ಳ, ಹೆಂಗಸಿನ ಪರ್ಸ್ ಕದ್ದು ಓಡುತ್ತಿದ್ದ. ತನ್ನ ಎದುರಾಗಿ ಓಡುತ್ತಿದ್ದವನಿಗೆ ಗೊತ್ತಾಗದಂತೆ ಕಾಲು ಅಡ್ಡಲಾಗಿ ಇಟ್ಟಳು ಮುಗ್ಗರಿಸಿ ಬಿದ್ದಿದ್ದ. ತಡ ಮಾಡದೇ ಅಲ್ಲೇ ಇದ್ದ ದೊಡ್ಡ ಕಲ್ಲನ್ನು ಎತ್ತಿದ್ದಳು. ಚಂಡಿ ಅವತಾರದಲ್ಲಿದ್ದಳು. ಕಲ್ಲನ್ನು ಅವನ ಕಾಲ ಮೇಲೆ ಹಾಕಿ ಕಾಲು ಮುರಿಯಲೇ ಬೇಕು ಅಂದು ಕೊಂಡಳು. ಕಳ್ಳ ಹೆದರಿದ್ದ ಅವಳ ಚಂಡಿ ಅವತಾರ ನೋಡಿ ಕೈಮುಗಿದು ಕಣ್ಣು ಮುಚ್ಚಿ ಕೂತ ಇನ್ನೇನು ಕಲ್ಲು ಬೀಳುವುದರಲ್ಲಿತ್ತು.

ಯಾರೋ ಕಾಲು ಹಿಡಿದು ಬೇಡುತ್ತಿರುವುದು ಗೊತ್ತಾಯಿತು ಸಂಧ್ಯಾಳಿಗೆ. ಅದೇ ಹೆಂಗಸು ಸಂಧ್ಯಾಳ ಕಾಲ ಬಳಿ ಇತ್ತು. ಕಲ್ಲು ಬೇರೆಡೆಗೆ ಎಸೆದು ಪರ್ಸ್ ಅವನಿಂದ ಕಿತ್ತುಕೊಂಡು ಕೊಟ್ಟಳು ಅವಳಿಗೆ.

ಯಾಕಮ್ಮ ಇಂತಹ ಕಳ್ಳರ ಬಗ್ಗೆ ಇಷ್ಟು ಕನಿಕರ ನಿನಗೆ. ಇಂತವರ ಕಾಲು ಮುರಿಯಬೇಕು ಮತ್ತೆ ಕೂಗಿದಳು ಸಂಧ್ಯಾ. ಆ ಹೆಂಗಸು ಹೇಳಿದ್ದಿಷ್ಟೇ. ಹೌದು ಅಕ್ಕ ನಾನು ಹಾಗೆ ಎಷ್ಟೋ ಸಲ ಯೋಚಿಸಿದ್ದೆ. ಏನು ಮಾಡಲಿ ಆತ ನನ್ನ ಗಂಡ. ಮೇಲೆ ನೋಡಿ ಉಗಿದರೆ ನಮ್ಮ ಮುಖವೇ ತಾನೆ ಹೊಲಸಾಗುವುದು ಅಲ್ಲವೇ”?

ಈ ಬಾರಿ ಉತ್ತರವಿರಲಿಲ್ಲ ಸಂಧ್ಯಾ ಬಳಿ. ಹೆಣ್ಣು ದೈಹಿಕವಾಗಿ ಅಬಲೆ ಅಲ್ಲ ಎಂದು ತೋರಿಸಬೇಕು ಎಂದುಕೊಂಡಿದ್ದಳು. ಈ ಹೆಂಗಸು ಮಹಿಳೆ ಮಾನಸಿಕವಾಗಿಯೂ ಅಬಲೆ ಅಲ್ಲ ಎಂದು ತೋರಿಸಿ ಕೊಟ್ಟಿದ್ದಳು.

-ಡಾ.ಶಶಿಕಿರಣ್ ಶೆಟ್ಟಿ, ಉಡುಪಿ
9945130630

Related posts

ಕವನ: ಬ್ರಹ್ಮಾಂಡ

Upayuktha

ಕವನ: ಯಾರವನು?

Upayuktha

ಕವನ: ಧೀರ – ವೀರ

Upayuktha