ಅಪರಾಧ ದೇಶ-ವಿದೇಶ ನಿಧನ ಸುದ್ದಿ

ನೀಟ್ ಪರೀಕ್ಷೆ ಫಲಿತಾಂಶ ಯಡವಟ್ಟಿಂದ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ನವದೆಹಲಿ: ನೀಟ್‌ ಪರೀಕ್ಷೆ ಫಲಿತಾಂಶ ದಿಂದಾದ ಯಡವಟ್ಟಿಂದ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಜೀವ ಕಳೆದಯ ಹೋಗುವಂತೆ ಮಾಡಿದೆ.

ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದ ಮಧ್ಯಪ್ರದೇಶದ ವಿಧಿ ಸೂರ್ಯವಂಶಿ ನೀಟ್ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಕಾದಿದ್ದಳು. ಹಾಗೆ ಅಕ್ಟೋಬರ್ 16 ರಂದು ಫಲಿತಾಂಶ ಪ್ರಕಟಗೊಂಡಿದ್ದು, ಫಲಿತಾಂಶ ವೀಕ್ಷಿಸಿದಾಗ ಕಡಿಮೆ ಅಂಕ ಕಂಡು ಮನ ನೊಂದು ಆತ್ಮಹತ್ಯೆ ಮಾಡಿದ್ದಾಳೆ.

ತನ್ನ ಹೆಸರಿನ ಮುಂದೆ ಕೇವಲ 6 ಸಂಖ್ಯೆ ಇರುವುದು ಕಂಡು ಇಷ್ಟು ಕಡಿಮೆ ಅಂಕ ಬಂದಿರುವುದನ್ನು ವಿಧಿಯ ಪೋಷಕರು ಕೂಡ ನಂಬಲು ಸಾಧ್ಯವಾಗಿಲ್ಲ. ಇದರಿಂದ ಮಾನಸಿಕವಾಗಿ ಆಘಾತಕ್ಕೊಳಗಾದ ವಿಧಿ ಕೂಡಲೇ ತನ್ನ ರೂಮಿನ ಕೊಠಡಿ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹಾಗೆಯೇ ವಿಧಿ ಸೂರ್ಯವಂಶಿ ಯವಳ ನೀಟಿ ಪರೀಕ್ಷೆ ಒಎಂಆರ್ ಶೀಟ್ ಪರಿಶೀಲನೆ ನಡೆಸಿದಾಗ ಆಕೆ ಗೆ 590 ಅಂಕ ಬಂದಿರುವುದು ಕಂಡು ಬಂದಿದೆ. ವಿದ್ಯಾರ್ಥಿನಿ ದುಡುಕಿ ನಿರ್ಧಾರ ಕೈಗೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

Related posts

ಖ್ಯಾತ ಉದ್ಯಮಿ ಬಿ.ಎ ಅಹ್ಮದ್‌ ಹಾಜಿ ನಿಧನ: ಡಾ. ಡಿ ವೀರೇಂದ್ರ ಹೆಗ್ಗಡೆ ಸಂತಾಪ

Upayuktha

ಜುಗಾರಿ ಅಡ್ಡೆಗೆ ದಾಳಿ: 7 ಆರೋಪಿಗಳು ಪೊಲೀಸರ ವಶಕ್ಕೆ

Upayuktha

ಅಳಿಕೆ ಲೋಕಸೇವಾ ಟ್ರಸ್ಟ್ ಅಧ್ಯಕ್ಷ ಗಂಗಾಧರಣ್ಣ ಇನ್ನಿಲ್ಲ

Upayuktha News Network

Leave a Comment