ಅಪಘಾತ- ದುರಂತ

ಸಿಇಟಿ ಪರೀಕ್ಷೆ ಬರೆದು ಸ್ಕೂಟರ್ ನಲ್ಲಿ ಬರುತ್ತಿದ್ದ ವಿದ್ಯಾರ್ಥಿ ಅಪಘಾತ ದಲ್ಲಿ ಮೃತ್ಯು

 

ಪುತ್ತೂರು: ಅಂಬಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಶ್ರೇಯಸ್ ಆತನ ಊರು ಮಡಿಕೇರಿ. ಈ ವರ್ಷದ ವಿದ್ಯಾರ್ಥಿ ಯಾಗಿದ್ದು ಮೊನ್ನೆ ತಾನೇ ಪಿಯು ಫಲಿತಾಂಶ ಬಂದಿದ್ದು ಇದೀಗ ಅಲ್ಲಿಯೇ ಸಿಇಟಿ ಪರೀಕ್ಷೆ ಯನ್ನು ಬರೆದು ಬರುತ್ತಿದ್ದ ಯುವಕ. ಹಾಗೆಯೇ ಸಹ ಸವಾರನಾಗಿದ್ದ ಅದೇ ಕಾಲೇಜಿನ ವಿದ್ಯಾರ್ಥಿ ಆತನ ಸ್ನೇಹಿತ ಜೊತೆಯಲ್ಲಿ ಸ್ಕೂಟರ್ ನಲ್ಲಿ ಬರುತ್ತಿದ್ದ ವೇಳೆ ನಡೆದ ಘಟನೆ. ಮಡಿಕೇರಿ ಸಂಪಿಗೆ ಕಟ್ಟೆ ಎಂಬಲ್ಲಿ ಸ್ಕೂಟರ್ ಮತ್ತು ೮೦೦ ಕಾರು ಡಿಕ್ಕಿ ಯಾಗಿದ್ದು ಈ ನಡೆದ ಅಪಘಾತದಲ್ಲಿ ಶ್ರೇಯಸ್ ಮೃತಪಟ್ಟಿದ್ದು ಸಹ ಸವಾರನಾಗಿದ್ದ ಸಿಬಿನ್ ರವರು ಗಂಭೀರ ಗಾಯಗೊಂಡಿದ್ದು ಆತನನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ನಂತರ ಹೆಚ್ಚಿನ ಚಿಕಿತ್ಸೆ ಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಸಂಚಾರಿ ಪೋಲಿಸರು ಮಾಹಿತಿ ತಿಳಿಸಿದ್ದಾರೆ .

Related posts

ಪಂಪ್‌ವೆಲ್‌ ಫ್ಲೈಓವರ್‌ನಲ್ಲಿ ಮೊದಲ ಅಪಘಾತ: ಆಲ್ಟೋ- ಡಸ್ಟರ್‌ ಕಾರುಗಳ ಡಿಕ್ಕಿ, ಒಬ್ಬ ವ್ಯಕ್ತಿ ಸಾವು

Upayuktha

ಕಾರ್ಕಳ ಬಳಿ ಭೀಕರ ಅಪಘಾತ: ಬಂಡೆಗೆ ಅಪ್ಪಳಿಸಿದ ಬಸ್, 9 ಪ್ರವಾಸಿಗರ ದಾರುಣ ಸಾವು

Upayuktha

ದ.ಕ ಬಿಜೆಪಿ ಜಿಲ್ಲಾಧ್ಯಕ್ಷರ ಕಾರು ಅಪಘಾತ: ಅಪಾಯದಿಂದ ಪಾರು

Upayuktha
error: Copying Content is Prohibited !!