ರಾಜ್ಯ ಶುಭಾಶಯಗಳು

ಎಪ್ಪತ್ತರ ಸಂಭ್ರಮದಲ್ಲಿ ಸುಧಾಮೂರ್ತಿ

ಸಾಧನೆ ಮಾಡಲು ಸಾಧಿಸುವ ಛಲ ಬೇಕು. ಶ್ರೀಮಂತರೆಂಬ ಅಹಂ ಇರಬಾರದು. ಅಂತಹ ಕರ್ನಾಟಕ ದ ಶ್ರೇಷ್ಠ ಮಹಿಳೆ. ಧಾರವಾಡ ಜಿಲ್ಲೆಯ ‘ಶಿಗ್ಗಾಂವ್‌’ ಗ್ರಾಮದ ಕುಲಕರ್ಣಿ ಮನೆತನದಲ್ಲಿ 1950 ಆಗಸ್ಟ್ 19ರಂದು ಜನಿಸಿದರು.

ಇವರು ಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜಿನಿಂದ ಎಂಜನಿಯರಿಂಗ್‌ ಬಿ.ಇ.(ಎಲೆಕ್ಟ್ರಿಕಲ್‌)  ಹಾಗೂ ಬೆಂಗಳೂರಿನ ಟಾಟಾ ವಿಜ್ಞಾನ ಮಂದಿರದಿಂದ ಎಂ.ಇ. ಪದವಿ (1974) ಪಡೆದಿದ್ದಾರೆ.

ಬೆಂಗಳೂರಿನ ಟಾಟಾ ಇನ್ಸ್ಟಿ ಟ್ಯೂಟ್’ ನಲ್ಲಿ ಎಮ್.ಇ (ಕಂಪ್ಯೂಟರ್ ಸೈನ್ಸ್) ಪದವಿ ಮುಗಿಸಿ ಚಿನ್ನದ ಪದಕ ಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ.

ಬೆಂಗಳೂರಿನ ‘ಇನ್ಫೋಸಿಸ್ ಸಂಸ್ಥೆ’ಯನ್ನು ಇವರ ಪತಿ, ಹಾಗೂ ಅವರ ಜೊತೆಗಾರರ ಸಹಯೋಗದಿಂದ ಕಟ್ಟಿ ಬೆಳೆಸಿದವರು. ಸುಧಾರವರ  ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಲವು ಕೃತಿಗಳನ್ನು ಪ್ರಕಟಿಸಿ ಕೆಲವು ಕೃತಿಗಳು ಕನ್ನಡ ಪತ್ರಿಕೆಗಳಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾದದ್ದು.

70 ರ ಜನುಮ ದಿನದ ಸಂಭ್ರಮದಲ್ಲಿ ಸುಧಾ ಮೂರ್ತಿ ಯವರು. ಇವರಿಗೆ ಹಲವು ಗಣ್ಯ ವ್ಯಕ್ತಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದುಬಂದಿದೆ.

ಆರೋಗ್ಯ ಸಚಿವ ಶ್ರೀ ರಾಮುಲು ರವರು ಟ್ವಿಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ.

ಹಾಗೆಯೇ ಪದ್ಮಶ್ರೀ ಪ್ರಶಸ್ತಿ ,ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರ ಸಾಧನೆಯನ್ನು ಗುರುತಿಸಿ ಗೌರವ ಸಲ್ಲಿಸಿದೆ. 1996ರಲ್ಲಿ ಇವರ ಪತಿ ಶ್ರೀ ನಾರಾಯಣಮೂರ್ತಿಯವರ ಜೊತೆಗೂಡಿ ಇನ್ಫೋಸಿಸ್ ಫೌಂಡೇಶನ್ ನನ್ನು  ಪ್ರಾರಂಭಿಸಿದರು. ಇದರ ಮೂಲಕ ನೊಂದವರ,ಹಸಿದವರ,ಬಡವರ ಕಷ್ಟಗಳಿಗೆ ನೆರವಾಗುವುದು.

ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಒಬ್ಬರು ರೋಹನ್ ಮತ್ತೊಬ್ಬರು ಅಕ್ಷತಾ. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ. ಗೇಟ್ಸ್ ಪ್ರತಿಷ್ಠಾನದ ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಸದಸ್ಯರಾಗಿದ್ದಾರೆ.

ವಿಪ್ರೊ ಸಂಸ್ಥೆ ನಾರಾಯಣಮೂರ್ತಿ ಅವರಿಗೆ ಮೊದಲು ಕೆಲಸ ನೀಡಲು ನಿರಾಕರಿಸಿತ್ತು ಆದರೆ ಇಂದು ಅದೇ ವ್ಯಕ್ತಿ ಸಾವಿರಾರು ಕೋಟಿಯ ಒಡೆಯನಾಗಲು ಸುಧಾ ಅವರ ತ್ಯಾಗ ,ಪ್ರೀತಿ ಮತ್ತು ನಂಬಿಕೆಯೇ ಕಾರಣ ಎನ್ನುವುದನ್ನು ಮರೆಯುವಂತಿಲ್ಲ.

ಮಳೆಯಿಂದಾಗಿ ಮನೆ ಮಠ ಕಳೆದುಕೊಂಡವರಿಗೆ ಪ್ರವಾಹ ಸಂತ್ರಸ್ತರಿಗೆ ,ಕೊರೋನಾ ಪೀಡಿತರಿಗೆ ತಮ್ಮ ಸಂಸ್ಥೆಯಿಂದ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಮಾತೃ ಹೃದಯದ ಪ್ರೀತಿಯನ್ನು ಸಮಾಜಕ್ಕೆ ಪರಿಚಯಿಸಿ ಕೊಟ್ಟವರು.

ಶ್ರೀಮಂತ ರಾದರು ಇವರ ಸರಳತೆ ,ಸಜ್ಜನಿಕೆಯಿಂದ ಜನರ ಮನಸ್ಸಿಗೆ ಹತ್ತಿರವಾಗುತ್ತಾ ಆದರ್ಶ ವ್ಯಕ್ತಿಯಾಗಿದ್ದಾರೆ. ಇವರ ಈ ಸ್ವ ಪ್ರೇರಿತ ಕಾರ್ಯಗಳು ಹೀಗೆ ಮುಂದುವರೆಯಲಿ, ಮತ್ತಷ್ಟು ಜನರಿಗೆ ಮಾದರಿಯಾಗಲಿ. ಆಯಸ್ಸು ಇನ್ನೂ ವೃದ್ಧಿಯಾಗಲಿ. ದೇವರು ಒಳ್ಳೆಯದು ಮಾಡಲಿ.

Related posts

ರೋಗಿಗಳ ಸಂಕಷ್ಟಕ್ಕೆ ನೆರವಾಗಿ- ವೈದ್ಯಕೀಯ ಸಚಿವ ಟ್ವೀಟ್

Harshitha Harish

ಮಳೆ ಹಾನಿ ಸಂತ್ರಸ್ತರಿಗೆ ಗೋಸ್ವರ್ಗದಲ್ಲಿ ಉಚಿತ ಊಟ, ವಸತಿ ವ್ಯವಸ್ಥೆ

Upayuktha

ನಟಿ ರಾಗಿಣಿ ಮತ್ತು ಸಂಜನಾ ರವರ ಜಾಮೀನು ಅರ್ಜಿ ವಜಾ

Harshitha Harish