ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಸೂಯೆಜ್ ಕಾಲುವೆ ಸಂಚಾರ ಸ್ಥಗಿತದ ಪರಿಣಾಮಗಳು: ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಉಪನ್ಯಾಸ

ಸೂಯೆಜ್ ಕಾಲುವೆಯ ತಾತ್ಕಾಲಿಕ ಸಂಚಾರ ಸ್ಥಗಿತದಿಂದ ಆರ್ಥಿಕ ಸಮಸ್ಯೆ: ಡಾ. ಸನ್ಮತಿ ಕುಮಾರ್

ಉಜಿರೆ: ಕೆಂಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರದ ನಡುವೆ ಸಂಪರ್ಕ ಕಲ್ಪಿಸುವ ಸೂಯೆಜ್ ಕಾಲುವೆಗೆ ಐತಿಹಾಸಿಕ ಮಹತ್ವ ಇದೆ. ಈ ಕಾಲುವೆಯ ನಿರ್ಮಾಣದೊಂದಿಗೆ ಏಷ್ಯಾ ಮತ್ತು ಯುರೋಪ್ ಖಂಡಗಳ ನಡುವೆ ಸಾಗರೋದ್ಯಮ ವ್ಯಾಪಾರವು ಹೆಚ್ಚಲು ಕಾರಣವಾಯಿತು. ಅತ್ಯಂತ ಬಿಡುವಿಲ್ಲದ ಜಲಸಾರಿಗೆಯ ಹಾದಿಯಾಗಿರುವ ಸೂಯೆಜ್ ಕಾಲುವೆಯ ಪ್ರಸ್ತುತ ಸಂಚಾರ ಸ್ಥಗಿತವು ಆರ್ಥಿಕ ಸಮಸ್ಯೆಗಳನ್ನು ಹುಟ್ಟುಹಾಕಿದೆ ಎಂದು ಶ್ರೀ.ಧ.ಮಂ.ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ. ಸನ್ಮತಿ ಕುಮಾರ್ ಅಭಿಪ್ರಾಪಟ್ಟರು.

ಡಾ.ಸನ್ಮತಿ ಕುಮಾರ್ ಅವರು ಉಜಿರೆ ಶ್ರೀ.ಧ.ಮಂ.ಕಾಲೇಜಿನ ಅರ್ಥಶಾಸ್ತ್ರ ವಿಭಾಗವು ಆಯೋಜಿಸಿದ “ಸೂಯೆಜ್ ಕಾಲುವೆಯ ಸಂಚಾರ ಸ್ಥಗಿತದ ಆರ್ಥಿಕ ಪರಿಣಾಮಗಳು” ಎಂಬ ವಿಷಯದ ಮೇಲೆ ನಡೆದ ಚರ್ಚೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

(ಚಿತ್ರ ಕೃಪೆ: ರಾಯ್ಟರ್ಸ್‌)

ತೃತೀಯ ಬಿ.ಎ ವಿದ್ಯಾರ್ಥಿ ದೀಕ್ಷಿತ್ ಪ್ರಬಂಧ ಮಂಡನೆ ಮಾಡುತ್ತಾ, ಸೂಯೆಜ್ ಕಾಲುವೆ ನಿರ್ಮಾಣದಿಂದ ಎಲ್ಲಾ ದೇಶಗಳಿಗೂ ಸಾಗಾಣಿಕಾ ಅವಧಿ ಹಾಗೂ ಸಾಗಾಣಿಕೆಯ ವೆಚ್ಚದಲ್ಲಿ ಅಪಾರ ಪ್ರಮಾಣದ ಕಡಿತವಾಗಿದೆ. ಆದರೆ ಇತ್ತೀಚೆಗೆ ಘಟಿಸಿದ ಹಡಗಿನ ಸಂಚಾರ ಸ್ಥಗಿತದಿಂದಾಗಿ ಒಂದು ವಾರದ ಅವಧಿಯ ಸಾಗಾಣಿಕೆ ಸ್ಥಗಿತಗೊಂಡಿದ್ದರಿಂದ ಜಾಗತಿಕ ವ್ಯಾಪಾರಕ್ಕೆ ನಷ್ಟ ದಾಖಲಾಗಿದ್ದು ಪ್ರತಿ ದಿನ 9 ಶತಕೋಟಿ ಡಾಲರ್ ನಷ್ಟವಾಗಿದೆ ಎಂದು ತಿಳಿಸಿದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎ.ಜಯ ಕುಮಾರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಇಂದಿನ ಜಾಗತೀಕರಣದಿಂದಾಗಿ ಜಗತ್ತಿನ ಯಾವುದೇ ಭಾಗದಲ್ಲಿ ಏನಾದರೂ ಘಟಿಸಿದರೆ ಅದರ ಪರಿಣಾಮ ಜಗತ್ತಿನ ಎಲ್ಲಾ ರಾಷ್ಟ್ರಗಳ ಮೇಲಾಗುತ್ತದೆ. ಸೂಯೆಜ್ ಕಾಲುವೆಯಲ್ಲಿ ಘಟಿಸಿದ ತಾತ್ಕಾಲಿಕ ಸಂಚಾರ ಸ್ಥಗಿತ ಇದಕ್ಕೆ ಒಳ್ಳೆಯ ಉದಾಹರಣೆ ಎಂದರು.

ವೇದಿಕೆಯಲ್ಲಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ನಾಗರಾಜ್ ಹಾಗೂ ಅಭಿನಂದನ್ ಜೈನ್ ಉಪಸ್ಥಿತರಿದ್ದರು. ಕಾಲೇಜಿನ ತೃತೀಯ ಹಾಗೂ ದ್ವಿತೀಯ ಪದವಿಯ ಅರ್ಥಶಾಸ್ತ್ರ ಹಾಗೂ ಗ್ರಾಮೀಣಾಭಿವೃದ್ಧಿ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಯೋಜಕರಾದ ನರೇಶ ಶಾಸ್ತ್ರಿ ಸ್ವಾಗತಿಸಿ, ಧನ್ಯಾ ಪ್ರಭು ವಂದಿಸಿದರು.

ವರದಿ: ವಂದನ ಡಿ.ಜೆ,

ತೃತೀಯ ಬಿ.ಎ.ಪತ್ರಿಕೋದ್ಯಮ, ಉಜಿರೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಶ್ರೀರಾಮಚಂದ್ರ ನಮ್ಮ ಆದರ್ಶಗಳ ಪ್ರತಿರೂಪ: ಡಾ. ವಸಂತಕುಮಾರ ಪೆರ್ಲ

Upayuktha

ಹಕ್ಕಿ ಜ್ವರದ ಬಗ್ಗೆ ಆತಂಕಬೇಡ, ಜಾಗೃತಿ ಇರಲಿ: ದ.ಕ ಜಿಲ್ಲಾಧಿಕಾರಿ

Upayuktha

ಸುದ್ದಿಮಾಧ್ಯಮ ಹೊಸ ಮಾದರಿಗಳನ್ನು ರೂಪಿಸಲಿ: ಪ್ರಕಾಶ್ ಕುಗ್ವೆ

Upayuktha