ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯರಾದ ಕಾಂಗ್ರೆಸ್ ಮುಖಂಡ ಆರ್.ಪ್ರಸನ್ನ ಕುಮಾರ್ ಪುತ್ರ ಸುಹಾಸ್ (31) ಹೃದಯಾಘಾತದಿಂದ ನಿಧನರಾದರು.
ಇವರಿಗೆ ಭಾನುವಾರ ಮುಂಜಾನೆ ಎದೆನೋವು ಕಾಣಿಸಿಕೊಂಡಿದ್ದು ಕುಸಿದು ಬಿದ್ದ ಸುಹಾಸ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಪ್ರಸನ್ನ ಕುಮಾರ್ ಅವರಿಗೆ ಇಬ್ಬರು ಮಕ್ಕಳಿದ್ದು, ಇನ್ನು ಮೃತ ಸುಹಾಸ್ ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದರು.
ಪ್ರಸನ್ನ ಕುಮಾರ್ ಅವರಿಗೆ ಕೋವಿಡ್ ಸೋಂಕು ತಗುಲಿದ್ದು ಆ ಕಾರಣಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಕಡೆಯ ಬಾರಿಯೂ ಮಗನ ಮುಖವನ್ನೂ ನೋಡಲಾಗದ ಪರಿಸ್ಥಿತಿಯಲ್ಲಿದ್ದಾರೆ.
ಪಕ್ಷದ ನಾಯಕರು ಪ್ರಸನ್ನ ಕುಮಾರ್ ಅವರ ನಿವಾಸಕ್ಕೆ ಆಗಮಿಸಿ ಸುಹಾಸ್ ಅವರ ಅಂತಿಮ ದರ್ಶನ ಪಡೆದರು.