ಗ್ರಾಮಾಂತರ ಸ್ಥಳೀಯ

ಸುಳ್ಯ: ಕ್ಲಿನಿಕ್ ಉದ್ಘಾಟನೆ

ಸುಳ್ಯ: ಸುಳ್ಯ ಗಾಂಧಿನಗರ ಯೂನಿಯನ್ ಬ್ಯಾಂಕ್ ಎದುರುಗಡೆ ಗ್ಲೋಬಲ್ ಟ್ರೇಡ್ ಸೆಂಟರ್ ಕಟ್ಟಡದಲ್ಲಿ ಸಂಕಪಿತ್ಲು ಶಿವರಾಮ ಭಟ್ ಮತ್ತು ಸರಸ್ವತಿ ಎಸ್ ಭಟ್ ದಂಪತಿಗಳ ಪುತ್ರ ಡಾ|ವೆಂಕಟಕೃಷ್ಣ ಭಟ್ ಸಂಕಪಿತ್ಲುರವರ ಶಿವಂ ಕ್ಲಿನಿಕ್ ಮೇ 3ರಂದು ಶುಭಾರಂಭಗೊಂಡಿತು.

ಸುಳ್ಯದ ಖ್ಯಾತ ಮಕ್ಕಳ ತಜ್ಞ ಹಾಗೂ ಭಾರತೀಯ ವೈದ್ಯಕೀಯ ಸಂಘ-ಸುಳ್ಯದ ಅಧ್ಯಕ್ಷ ಡಾ. ಶ್ರೀಕೃಷ್ಣ ಭಟ್ ಬಿ ಎನ್ ಉದ್ಘಾಟಿಸಿದರು.

ಈ ಶುಭ ಸಂದರ್ಭದಲ್ಲಿ ಸರಸ್ವತಿ ಭಟ್ ಎಸ್, ಡಾ ರವಿಶಂಕರ್ ಎಸ್, ಡಾ ರವಿಪ್ರಕಾಶ್ ಕಜೆ, ಡಾ ಹರ್ಷಪ್ರಸಾದ್ ಎಲ್, ಡಾ. ಸುಬ್ರಹ್ಮಣ್ಯ ಪೈಲೂರು, ಬಾಲಕೃಷ್ಣ ಸಾರಡ್ಕ, ನ್ಯಾಯವಾದಿ ವೆಂಕಟ್ರಮಣ ಡಿ ಕೆದುಂಬಾಡಿ ಉಪಸ್ಥಿತರಿದ್ದರು.

ದಾವಣಗೆರೆ ಜೆಜೆಎಂ ವೈದ್ಯಕೀಯ ವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪಡೆದ ಡಾ. ವೆಂಕಟಕೃಷ್ಣ ಭಟ್ ಸಂಕಪಿತ್ಲುರವರು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಿಂದ ಎಂ.ಡಿ (ಮೆಡಿಸಿನ್) ಪದವಿ ಪಡೆದರು.

ಪ್ರಸ್ತುತ ಕೊಡಗು ವೈದ್ಯಕೀಯ ಮಹಾವಿದ್ಯಾಲಯ ಮಡಿಕೇರಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಚಿಕಿತ್ಸಾಲಯದಲ್ಲಿ ಬೆಳಗ್ಗೆ 8ರಿಂದ- 9 ಹಾಗೂ ಸಂಜೆ 5ರಿಂದ-8ರ ತನಕ ಸೇವೆಗೆ ಲಭ್ಯರಿರುತ್ತಾರೆ.

 

 

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ನೀರ್ಚಾಲು ಮಾರ್ಕೆಟಿಂಗ್ ಸೊಸೈಟಿ ಮಹಾಸಭೆ

Upayuktha

ಕಟೀಲು ದೇವಳದ ಸಮೀಪದ ಅಶ್ವತ್ಥ ಮರಗಳ ಸ್ಥಳಾಂತರ

Upayuktha

ಬೆಳ್ಳಾರೆ ಘಟಕದ ಗೃಹರಕ್ಷಕ ಹೂವಪ್ಪರಿಗೆ ಮುಖ್ಯಮಂತ್ರಿ ಸ್ವರ್ಣ ಪದಕದ ಗೌರವ

Upayuktha