ಚಂದನವನ- ಸ್ಯಾಂಡಲ್‌ವುಡ್ ದೇಶ-ವಿದೇಶ

ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯ ದಲ್ಲಿ ಏರುಪೇರು; ಆಸ್ಪತ್ರೆ ದಾಖಲು

ಹೈದರಾಬಾದ್: ಅಧಿಕ ರಕ್ತದೊತ್ತಡದಿಂದ ಸೂಪರ್ ಸ್ಟಾರ್ ರಜನಿಕಾಂತ್ ರವರು ಇಂದು ಬೆಳಗ್ಗೆ ಹೈದರಾಬಾದ್ ನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಜನಿಕಾಂತ್ ಅವರು ನಟಿಸುತ್ತಿರುವ ಅನ್ನತ್ತೆ ಚಿತ್ರತಂಡದಲ್ಲಿ ಹಲವರಿಗೆ ಕೋರೊನಾ ಸೋಂಕು ತಗುಲಿ ಪಾಸಿಟಿವ್ ಆಗಿತ್ತು, ಆದರೆ ರಜನಿಕಾಂತ್ ಅವರನ್ನು ಪರೀಕ್ಷೆಗೊಳಪಡಿಸಿದಾಗ ನೆಗೆಟಿವ್ ಬಂದಿತ್ತು.

ರಜನಿಕಾಂತ್ ಅವರು ದಾಖಲಾಗಿರುವ ಅಪೊಲೊ ಆಸ್ಪತ್ರೆ ಹೇಳಿಕೆ ಬಿಡುಗಡೆ ಮಾಡಿದ್ದು, ಇಂದು ಬೆಳಗ್ಗೆ ಆಸ್ಪತ್ರೆಗೆ ಅವರು ದಾಖಲಾಗಿದ್ದಾರೆ.

ಕಳೆದ 10 ದಿನಗಳಿಂದ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಚಿತ್ರೀಕರಣ ಸೆಟ್ ನಲ್ಲಿ ಕೆಲವರಿಗೆ ಪಾಸಿಟಿವ್ ಬಂದಿತ್ತು.

ಆದರೂ ಅವರು ಸ್ವ ನಿರ್ಬಂಧ ವಿಧಿಸಿ ಪ್ರತ್ಯೇಕವಾಗಿದ್ದರು. ಕೋವಿಡ್-19ನ ಲಕ್ಷಣ ಅವರಲ್ಲಿ ಕಂಡುಬರದಿದ್ದರೂ ಕೂಡ ಅವರ ರಕ್ತದೊತ್ತಡದಲ್ಲಿ ವಿಪರೀತ ಏರುಪೇರು ಆಗುತ್ತಿದೆ.

ಅವರನ್ನು ಇನ್ನಷ್ಟು ಪರೀಕ್ಷೆಗೊಳಪಡಿಸುವ ಅಗತ್ಯವಿದೆ, ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಉಳಿದೆಲ್ಲಾ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮಾಹಿತಿ ತಿಳಿಸಿದೆ.

 

Related posts

ಔರಂಗಾಬಾದ್: ಗೂಡ್ಸ್ ರೈಲು ಚಲಿಸಿ ಹಳಿಗಳ ಮೇಲೆ ಮಲಗಿದ್ದ 16 ವಲಸೆ ಕಾರ್ಮಿಕರ ಸಾವು

Upayuktha

ಸಾಮಾಜಿಕ ಅಂತರವೆಂದರೆ ಮಾನವೀಯತೆಯ ಅಂತರವಲ್ಲ, ಸಂಘಟಿತ ಹೋರಾಟದಿಂದ ಕೊರೊನಾ ತೊಲಗಿಸೋಣ: ಪ್ರಧಾನಿ ಮೋದಿ

Upayuktha

ಮಹಾರಾಷ್ಟ್ರ ಕ್ಷಿಪ್ರ ಕ್ರಾಂತಿ: ರಾತೋರಾತ್ರಿ ಶಿವಸೇನೆಗೆ ಚಳ್ಳೆ ಹಣ್ಣು ತಿನ್ನಿಸಿದ ಬಿಜೆಪಿ

Upayuktha