ನಗರ ವಾಣಿಜ್ಯ ಸ್ಥಳೀಯ

ಸುರಭಿ ಸಾರ- ದೇಶಿ ತಳಿ ಗೋಮೂತ್ರ ಪೌಡರ್ ಕ್ಯಾಪ್ಸೂಲ್ ಗೆ ಅತ್ಯುತ್ತಮ ಗ್ರಾಹಕರ ಆಯ್ಕೆ ವಿಭಾಗದಲ್ಲಿ ಅವಾರ್ಡ್

ಮಂಗಳೂರು: ದೇಶೀ ತಳಿ ಗೋಮೂತ್ರ ಪೌಡರ್ ಕ್ಯಾಪ್ಸ್ಯುಲ್ ‘ಸುರಭಿ ಸಾರ’ ಉತ್ಪನ್ನವನ್ನು ದಿ ಟೈಮ್ಸ್ ಗ್ರೂಪ್ ನವರು ಟೈಮ್ಸ್ ಬಿಸಿನೆಸ್ಸ್ ಅವಾರ್ಡ್ಸ್ 2021 ಗೆ ಆಯ್ಕೆ ಮಾಡಿ “Excellent Health Supplement- Consumer Choice Award” ನ್ನು ನೀಡಿರುತ್ತಾರೆ.

ಮಾರ್ಚ್ 31ರಂದು ಮಂಗಳೂರಿನ ಹೋಟೆಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಜರಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಉಪಸ್ಥಿತರಿದ್ದ ಪ್ರಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ಸುರಭಿಸಾರ ಉತ್ಪನ್ನದ ಉತ್ಪಾದಕರಾದ ಬಿ ರಾಘವೇಂದ್ರ ಹೆಮ್ಮಣ್ಣ ಅವರಿಗೆ ಅವಾರ್ಡನ್ನು ನೀಡಿದರು.

ಅವಾರ್ಡ್ ದೊರೆತ ಬಗ್ಗೆ ಶ್ರೀಮತಿ ಮತ್ತು ಶ್ರೀ ಬಿ ರಾಘವೇಂದ್ರ ಹೆಮ್ಮಣ್ಣ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. “ಈ ಸಂದರ್ಭದಲ್ಲಿ ನಾವು ನಮ್ಮೆಲ್ಲ ಗ್ರಾಹಕ ಬಂಧುಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಾ, ಮಾನವ ಕುಲಕ್ಕೆ ವರದಾನವಾದ ಈ ಉತ್ಪನ್ನದ ಆವಿಷ್ಕಾರಕ್ಕೆ ಕಾರಣಿಕರ್ತರಾಗಿರುವ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಶ್ರೀರಾಮಚಂದ್ರಾಪುರಮಠ ಇವರ ಚರಣ ಕಮಲಕ್ಕೆ ಈ ಗೌರವವನ್ನು ಸಮರ್ಪಿಸುತ್ತಿದ್ದೇವೆ” ಎಂಬುದಾಗಿ ತಿಳಿಸಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಮನಸ್ಸು, ವಯಸ್ಸು ಪರಿಪಕ್ವವಾದರೆ ಮಾನವ ಬಾಗುತ್ತಾನೆ: ಡಾ. ಕವಿತಾಕೃಷ್ಣ

Upayuktha

‘ನಿರ್ಮಲ ಕನಸುಗಳು’ ಕೃತಿ ಬಿಡುಗಡೆ

Upayuktha

ಟಿವಿ ವಾಹಿನಿಗಳ ಕಾರ್ಯಕ್ರಮಗಳ ಕುರಿತ ದೂರು: 24×7 ಸಹಾಯವಾಣಿ ಸ್ಥಾಪನೆ

Upayuktha