ಸುರತ್ಕಲ್: ಸುರತ್ಕಲ್ ಬ್ಲಾಕ್ ಕಾಂಗ್ರೆಸ್ನ ಮಾಸಿಕ ಕಾರ್ಯಕರ್ತರ ಸಭೆ ಮತ್ತು ಅಭಿನಂದನಾ ಕಾರ್ಯಕ್ರಮವು ಸುರತ್ಕಲ್ ಸುಪ್ರೀಂ ಮಹಾಲ್ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸದಾಶಿವ ಶೆಟ್ಟಿ ನೇತೃತ್ವದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಮೊಹಿದ್ದೀನ್ ಬಾವ ಅವರು ಮಾತನಾಡಿ, ಕಾರ್ಯಕರ್ತರು ಸಾಮಾಜಿಕ ಚಿಂತನೆಯೊಂದಿಗೆ ನಿಸ್ವಾರ್ಥ ಸಮಾಜ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಿಷ್ಠಗೊಳಿಸಬೇಕೆಂದು ಕರೆನೀಡಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮ.ನ.ಪಾ ಸದಸ್ಯರಾದ ಅನಿಲ್ ಕುಮಾರ್, ಪಕ್ಷದ ಉಸ್ತುವಾರಿಗಳಾದ ಮುರಳಿ ಶೆಟ್ಟಿ ಇಂದ್ರಾಳಿ, ಇಲ್ಯಾಸ್ ಕಡಬ, ಮಾಜಿ ಮ.ನ.ಪಾ ಸದಸ್ಯರಾದ ಪುರುಷೋತ್ತಮ್ ಚಿತ್ರಾಪುರ, ಬಶೀರ್ ಬೈಕಂಪಾಡಿ, ಪ್ರತಿಭಾ ಕುಳಾಯಿ, ಹಿಲ್ಡಾ ಆಳ್ವಾ, ಮುಂಚೂಣಿ ಘಟಕದ ಅಧ್ಯಕ್ಷರಾದ ಶಶಿಕಲಾ ಪದ್ಮನಾಭ, ಹಿದಾಯತ್, ಥಾಮಸ್, ಮಲ್ಲಿಕಾರ್ಜುನ್, ಜೈಸನ್ ಉಪಾಧ್ಯಕ್ಷರಾದ ಗೋವರ್ಧನ್ ಶೆಟ್ಟಿಗಾರ್, ಆನಂದ ಅಮೀನ್, ಮಾಧವ್ ಸುವರ್ಣ, ಹೇಮಂತ್ ಪೂಜಾರಿ, ಶಾಮರಾಯ್ ಸುವರ್ಣ ಪ್ರಧಾನ ಕಾರ್ಯದರ್ಶಿ ಗಳಾದ ರಾಜೇಶ್ ಕುಳಾಯಿ, ಅಬ್ದುಲ್ ಜಲೀಲ್, ಉಪಸ್ಥಿತರಿದರು.
ಜಿಲ್ಲಾ ಮತ್ತು ಬ್ಲಾಕ್ ನ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ನೂತನವಾಗಿ ಅಯ್ಕೆಯಾದ ಪಧಾದಿಕಾರಿಗಳನ್ನು ಮತ್ತು ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಶಂಶಾದ್ ಕುಂಜತ್ತಬೈಲ್ ಇವರನ್ನು ಅಭಿನಂದಿಸಲಾಯಿತು. ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮವನ್ನು ನಿರೂಪಿಸಿದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಉಪಯುಕ್ತ ನ್ಯೂಸ್ ಸಿಗ್ನಲ್ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್ ಬಳಸಿ