ಯೋಗ- ವ್ಯಾಯಾಮ ಲೈಫ್‌ ಸ್ಟೈಲ್- ಆರೋಗ್ಯ

ಸುಯೋಗ-ಯೋಗಾಸನ ಮಾಲಿಕೆ-4: ಅರ್ಧಚಕ್ರಾಸನ (Ardha Chakrasana)

ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗಾಸನ ಮಾಲಿಕೆ
ಬೆನ್ನು ಹುರಿಯ ಬಿಗಿತ ನಿವಾರಣೆಗೆ, ತಲೆಯಲ್ಲಿ ರಕ್ತ ಪರಿಚಲನೆ, ಎದೆಗೆ ವ್ಯಾಯಾಮ ದೊರಕುತ್ತದೆ

ಈ ಆಸನವು ನಿಂತುಕೊಂಡು ದೇಹವನ್ನು ಶಿಸ್ತು ಬದ್ಧವಾಗಿ ಸ್ವಲ್ಪ ಹಿಂದಕ್ಕೆ ಬಾಗಿಸುವ ಭಂಗಿಯಾಗಿದೆ. (Half wheel posture) ಈ ಆಸನದಲ್ಲಿ ನಿಂತುಕೊಂಡು ದೇಹವನ್ನು ಶಿಸ್ತು ಬದ್ಧವಾಗಿ ಹಿಂದಕ್ಕೆ ಬಾಗಿಸಿದಾಗ ಶ್ವಾಸಕೋಶದ ಭಾಗ ಎಳೆತಕ್ಕೆ ಒಳಗಾಗಿ ಹೆಚ್ಚಿನ ಪ್ರಮಾಣದಲ್ಲಿ ವಾಯು ಸಂಚಾರವಾಗುತ್ತದೆ.

ಅಭ್ಯಾಸ ಕ್ರಮ:
ಪ್ರಪ್ರಥಮವಾಗಿ ತಾಡಾಸನದಲ್ಲಿ ನೆಲೆಸಬೇಕು. ನಂತರ ಸೊಂಟದ ಹಿಂಬಾಗಕ್ಕೆ ಎರಡು ಕೈಗಳನ್ನು ಜೋಡಿಸಿ. ಆನಂತರ ಉಸಿರನ್ನು ತೆಗೆದುಕೊಂಡು ಸೊಂಟದ ಮೇಲ್ಭಾಗದಿಂದ ಹಿಂದಕ್ಕೆ ಬಾಗಿಸಿ. (ಮೊಣಕಾಲು ಬಾಗಿಸಬಾರದು). ಕುತ್ತಿಗೆ ಮತ್ತು ತಲೆಯನ್ನು ಸಡಿಲಿಸಿ. (Hanging Position) ಈ ಸ್ಥಿತಿಯಲ್ಲಿ 20 ಸೆಕೆಂಡು ಸಾಮಾನ್ಯ ಉಸಿರಾಟದಲ್ಲಿ ನೆಲೆಸಿ. ಆಮೇಲೆ ಉಸಿರನ್ನು ಬಿಡುತ್ತಾ ನಿಧಾನವಾಗಿ ಸ್ಥಿತಿಗೆ ಬರಬೇಕು. 2 ನಿಮಿಷ ವಿಶ್ರಾಂತಿ. ಈ ರೀತಿ ಎರಡು ಯಾ ಮೂರು ಬಾರಿ ಅಭ್ಯಾಸ ನಡೆಸಿ.

ಉಪಯೋಗಗಳು: ಬೆನ್ನಿನ ಹುರಿಯ ಬಿಗಿತ (Stiffness) ನಿವಾರಣೆಯಾಗುತ್ತದೆ. ತಲೆಯಲ್ಲಿ ರಕ್ತ ಪರಿಚಲನೆ ಚೆನ್ನಾಗಿ ಒದಗಿ ನರಮಂಡಲ ಸಚೇತನಗೊಳ್ಳುವುದು. ಎದೆಯ ಭಾಗಕ್ಕೆ ಮೃದುವಾದ ವ್ಯಾಯಾಮ ದೊರಕುತ್ತದೆ. ಅಸ್ತಮಾ ಸಮಸ್ಯೆ ನಿವಾರಣೆಯಾಗಲು, ಥೈರಾಯಿಡ್ ಗ್ರಂಥಿಯ ಆರೋಗ್ಯಕ್ಕೆ ಈ ಆಸನ ಉಪಯುಕ್ತವಾಗುವುದು.

ಸೂಚನೆ: ತೀವ್ರ ಕುತ್ತಿಗೆ ನೋವು ಇದ್ದವರು ಅಭ್ಯಾಸ ಬೇಡ. ಕೆಲವರಿಗೆ ಹಿಂದಕ್ಕೆ ಭಾಗುವಾಗ ತಲೆತಿರುಗಿದ ಅನುಭವವಾಗುತ್ತದೆ. ಅಭ್ಯಾಸದ ಮೂಲಕ ಸರಿ ಹೋಗುತ್ತದೆ. ನಿಧಾನವಾಗಿ ಅಭ್ಯಾಸ ನಡೆಸಿ.

-‘ಯೋಗರತ್ನ’ ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ಅಂತರರಾಷ್ಟ್ರೀಯ ತೀರ್ಪುಗಾರರು
ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್‌ಪೆಕ್ಟರ್‌ ಮಂಗಳೂರು -575 008
9448394987

;

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸುಯೋಗ- ಯೋಗಾಭ್ಯಾಸ ಮಾಲಿಕೆ 17-ಅರ್ಧ ಚಂದ್ರಾಸನ (Ardha Chandrasana)

Upayuktha

ದೇಲಂಪಾಡಿ ಯೋಗ ಕ್ಲಾಸ್‌: ಪ್ರತಿದಿನ ಉಚಿತ ಆನ್‌ಲೈನ್‌ ತರಗತಿಗಳು

Upayuktha

ನಿರಂತರ ಯೋಗದಿಂದ ಮಾನಸಿಕ ಒತ್ತಡ, ಅನಾರೋಗ್ಯ ಸಮಸ್ಯೆಗಳಿಗೆ ಮುಕ್ತಿ: ಡಾ. ಪ್ರಭಾಕರ ಭಟ್ ಕಲ್ಲಡ್ಕ

Upayuktha