ಯೋಗ- ವ್ಯಾಯಾಮ ಲೈಫ್‌ ಸ್ಟೈಲ್- ಆರೋಗ್ಯ

ಸುಯೋಗ-ಯೋಗಾಸನ ಮಾಲಿಕೆ 6: ಅರ್ಧಕಟಿ ಚಕ್ರಾಸನ (Ardhakati Chakrasana)

ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗಾಸನ ಮಾಲಿಕೆ
ಸೊಂಟದ ಬೊಜ್ಜು ಕರಗಲು ಸಹಾಯಕ; ಬೆನ್ನುಮೂಳೆ ಆರೋಗ್ಯ ಉತ್ತಮಗೊಳ್ಳುವುದು

ಕಟಿ ಎಂದರೆ ಸೊಂಟ, ಅರ್ಧ ಚಕ್ರದ ಆಕಾರದಲ್ಲಿ ಸೊಂಟವನ್ನು ಬಾಗಿಸುವ ವಿಧಾನ. ಆದ್ದರಿಂದ ಈ ಆಸನಕ್ಕೆ ಅರ್ಧಕಟಿ ಚಕ್ರಾಸನ ಎಂದು ಹೆಸರು. ಈ ಆಸನವನ್ನು ಸಾಮಾನ್ಯ ಎಲ್ಲರಿಗೂ ಅಭ್ಯಾಸ ಮಾಡಬಹುದು.

ಅಭ್ಯಾಸ ಕ್ರಮ: ಜಮಖಾನದ ಮೇಲೆ ಪ್ರಪ್ರಥಮವಾಗಿ ತಾಡಾಸನದಲ್ಲಿ ನಿಲ್ಲಿ. ಉಸಿರನ್ನು ತೆಗೆದುಕೊಳ್ಳುತ್ತಾ ಬಲಕೈಯನ್ನು ತಲೆಯ ಮೇಲೆ ನೇರವಾಗಿಸಿರಿ. ತೋಳುಗಳು ಬಲ ಕಿವಿಯನ್ನು ಸ್ಪರ್ಶಿಸಿ. ಎಡಕೈ ಎಡತೊಡೆಯ ಮೇಲೆ ನೇರವಾಗಿ ಇರಿಸಿ. ಅನಂತರ ಉಸಿರನ್ನು ಬಿಡುತ್ತಾ ನಿಧಾನವಾಗಿ ಎಡಬದಿಗೆ ಬಾಗಿಸಿ. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಾಮಾನ್ಯ ಉಸಿರಾಟ ನಡೆಸುತ್ತಾ ಅನಂತರ ವಿಶ್ರಮಿಸಿ. ಈ ರೀತಿ ಎರಡು ಯಾ ಮೂರು ಬಾರಿ ಅಭ್ಯಾಸ ನಡೆಸಿ. ಅಭ್ಯಾಸ ನಡೆಸುವಾಗ ಕಾಲುಗಳು ಆದಷ್ಟು ನೆರವಾಗಿಸಲು ಪ್ರಯತ್ನಿಸಿ. ಹಾಗೆ ಇನ್ನೊಂದು ಬದಿ ಅಭ್ಯಾಸ ಮಾಡಿರಿ.

ಉಪಯೋಗಗಳು:
ಕ್ರಮವಾಗಿ ಈ ಆಸನವನ್ನು ಮಾಡಿದರೆ ಮುಖ್ಯವಾಗಿ ಸೊಂಟದ ಬೊಜ್ಜು ಕರಗಲು ಸಹಾಯವಾಗುವುದು. ಈ ಆಸನದಲ್ಲಿ ಪಾರ್ಶ್ವಕ್ಕೆ ಬಾಗುವುದರಿಂದ ಬೆನ್ನು ಮೂಳೆಯ ಆರೋಗ್ಯ ಉತ್ತಮಗೊಳ್ಳುತ್ತದೆ. ಸೊಂಟದ ಬಿಗಿತ ನಿವಾರಣೆಯಾಗುತ್ತದೆ. ಪಿತ್ತಕೋಶದ ಕಾರ್ಯ ಸಮರ್ಪಕವಾಗಿ ನಿರ್ವಹಿಸುತ್ತದೆ. ಸೊಂಟಕ್ಕೆ ನಡುವಿಗೆ ಉತ್ತಮ ವ್ಯಾಯಾಮ ಒದಗಿಬರುತ್ತದೆ.

ಗಮನಿಸಿ:
ಯೋಗಾಸನವನ್ನು ಅಭ್ಯಾಸ ಮಾಡಲು ಸರಿಯಾದ ಸಿದ್ಧತೆಯೊಂದಿಗೆ ಸಮರ್ಪಕ ವಿಧಾನದಲ್ಲಿ ಮಾಡಿದಾಗ ಹೆಚ್ಚು ಪ್ರಯೋಜನ ದೊರಕುತ್ತದೆ.
ಆಸನಗಳನ್ನು ಅಭ್ಯಾಸ ಮಾಡುತ್ತಿರುವ ಯಾವುದೇ ಸಮಯದಲ್ಲಿ ಅಗತ್ಯವಿದ್ದರೆ (ಆಯಾಸವಾದಾಗ) ಶವಾಸನ ನಡೆಸಿ.

-ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ
2-72/5, ಪಾರಿಜಾತ
ಬಿಷಪ್ ಕಂಪೌಂಡ್, ಕೊಂಚಾಡಿ ಅಂಚೆ,
ಯೆಯ್ಯಾಡಿ ಪದವು, ಮಂಗಳೂರು-575008.
ಮೊಬೈಲ್ : 9448394987

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ಸ್ಥೂಲವನ್ನು ನಡುಗಿಸುವ ಸೂಕ್ಷ್ಮ-‘ಕೊರೋನ’: ಮಾನವನ ಅಹಂಕಾರಕ್ಕೆ ಪ್ರಕೃತಿಯ ಪಾಠ

Upayuktha

ಕೋವಿಡ್ ನಿರ್ವಹಣೆಯಲ್ಲಿ ಯೋಗದ ಪಾತ್ರ: ನಾಳೆ ಡಾ. ನಾರಾಯಣ ಪ್ರದೀಪರಿಂದ ಉಪನ್ಯಾಸ

Upayuktha

ಏನಿದು ಇರಿಟೇಬಲ್ ಬೊವೆಲ್ ಸಿಂಡ್ರೋಮ್?

Upayuktha