ಯೋಗ- ವ್ಯಾಯಾಮ ಲೈಫ್‌ ಸ್ಟೈಲ್- ಆರೋಗ್ಯ

ಸುಯೋಗ- ಯೋಗಾಸನ ಮಾಲಿಕೆ 10- ಪರಿವೃತ್ತ ತ್ರಿಕೋಣಾಸನ (Pariwratha Trikonasana)

ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗಾಸನ ಮಾಲಿಕೆ
ತೊಡೆಗಳಿಗೆ, ಕಾಲುಗಳಿಗೆ, ತೋಳುಗಳಿಗೆ ಉತ್ತಮ ವ್ಯಾಯಾಮ ದೊರೆತು ಬಲಗೊಳ್ಳುತ್ತದೆ.

ಪರಿವೃತ್ತವೆಂದರೆ ತಿರುಗಿಸುವುದು, ತ್ರಿಕೋಣವೆಂದರೆ ಮೂರು ಮೂಲೆಯ ಆಕಾರವಾಗಿದೆ. ತಿರುಗಿ ಸುತ್ತುವ ಮೂರು ಕೋನ ಅಥವಾ ತ್ರಿಕೋನ. ಇದೊಂದು ತ್ರಿಕೋಣಾಸನದ ಪ್ರತಿಯಾದ ಭಂಗಿಯಾಗಿದೆ. ಇದರಲ್ಲಿ ಮುಂದಕ್ಕೆ ಬಾಗುವುದು, ತಿರುಚುವಿಕೆ ಮಾಡಬೇಕಾಗುವುದು. ಇದರಲ್ಲಿ ಸ್ಥಿರತೆ ಮತ್ತು ಸಮತೋಲನ ಅಗತ್ಯ. ಇದರಲ್ಲಿ ದೇಹದ ಪ್ರತಿಯೊಂದು ಬಾವ ಒಂದಕ್ಕೊಂದು ಸಾಮರಸ್ಯದಿಂದ ಕೆಲಸ ಮಾಡುವುದು ಅಭ್ಯಾಸದಿಂದ ಅರಿವಿಗೆ ಬರುತ್ತದೆ.

ಅಭ್ಯಾಸ ಕ್ರಮ:
ಮೊದಲು ತಾಡಾಸನದಲ್ಲಿ ನಿಲ್ಲಿ. ಅನಂತರ ಕಾಲುಗಳನ್ನು 3ರಿಂದ ಮೂರುವರೆ ಅಡಿಗಳಷ್ಟು ಅಗಲಿಸಿ, ಕೈಗಳನ್ನು ನೇರವಾಗಿಸಿ, ಎಡ ಕಾಲಿನ ಪಾದವನ್ನು 90 ಡಿಗ್ರಿಗೆ ತಿರುಗಿಸಿ, ಬಲ ಕಾಲನ್ನು 60 ಡಿಗ್ರಿ ತಿರುಗಿಸಿ ಇಡಿ. ಆನಂತರ ಉಸಿರನ್ನು ಬಿಟ್ಟು ದೇಹವನ್ನು ತಿರುಗಿಸಿ ಎಡ ಕೈಯಿಂದ ಬಲ ಪಾದವನ್ನು ಮುಟ್ಟಬೇಕು. ಬಲ ಕೈಯನ್ನು ನೇರವಾಗಿಸಿ ಮೇಲಕ್ಕೆ ಮಾಡಿ. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಮ ಉಸಿರಾಟ ನಡೆಸಿ. ಇದೇ ರೀತಿ ಇನ್ನೊಂದು ಬದಿಯಿಂದ ಅಭ್ಯಾಸ ಮಾಡಿ. ನಂತರ ವಿಶ್ರಮಿಸಿ.

ಉಪಯೋಗಗಳು: ತೊಡೆಗಳಿಗೆ, ಕಾಲುಗಳಿಗೆ, ತೋಳುಗಳಿಗೆ ಉತ್ತಮ ವ್ಯಾಯಾಮ ದೊರೆತು ಬಲಗೊಳ್ಳುತ್ತದೆ. ಬೆನ್ನು, ಸೊಂಟ ನೋವು ಪರಿಹಾರವಾಗಲು ಸಹಕಾರವಾಗುತ್ತದೆ. ಹೊಟ್ಟೆಯ ಬೊಜ್ಜು ಕರಗುತ್ತದೆ. ಈ ಆಸನವನ್ನು ಅಭ್ಯಾಸ ನಡೆಸುವ ಮುಂಚೆ ಸರಳ ವ್ಯಾಯಾಮ ಹಾಗೂ ಸರಳ ಆಸನಗಳನ್ನು ಅಭ್ಯಾಸ ಮಾಡಿರಿ. ತೊಡೆಗಳಿಗೆ, ಕಾಲುಗಳಿಗೆ, ತೋಳುಗಳಿಗೆ ಉತ್ತಮ ವ್ಯಾಯಾಮ ದೊರೆತು ಬಲಗೊಳ್ಳುತ್ತದೆ. ಬೆನ್ನು, ಸೊಂಟ ನೋವು ಪರಿಹಾರವಾಗಲು ಸಹಕಾರವಾಗುತ್ತದೆ. ಹೊಟ್ಟೆಯ ಬೊಜ್ಜು ಕರಗುತ್ತದೆ.

ಸೂಚನೆ : ಬೆನ್ನು ಮೂಳೆಯ ಗಾಯ ಕಡಿಮೆ ರಕ್ತದೊತ್ತಡ, ಮೈಗ್ರೇನ್ ಅತಿಸಾರ ತಲೆನೋವು, ನಿದ್ರಾಹೀನತೆ ಸಮಸ್ಯೆ ಇರುವವರು ಈ ಆಸನವನ್ನು ಅಭ್ಯಾಸ ನಡೆಸುವುದು ಬೇಡ. ಆಸನ ಅಭ್ಯಾಸ ಮಾಡುವ ಮುಂಚೆ ಹೊಟ್ಟೆ, ಕರುಳು ಸ್ವಚ್ಛವಾಗಿರಬೇಕು.

-ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ,
ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್‌ಪೆಕ್ಟರ್,
ಅಂತರರಾಷ್ಟೀಯ ಯೋಗ ತೀರ್ಪುಗಾರರು,
“ಪಾರಿಜಾತ”, ಮನೆ ಸಂಖ್ಯೆ 2-72:5,
ಬಿಷಪ್ ಕಂಪೌಂಡು, ಕೊಂಚಾಡಿ, ಯೆಯ್ಯಾಡಿ ಪದವು,
ಮಂಗಳೂರು-575 008
ಮೊಬೈಲ್ ನಂಬ್ರ : 9448394987

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸುಯೋಗ- ಯೋಗಾಭ್ಯಾಸ ಮಾಲಿಕೆ- 14: ಸಮತೋಲನ ಮತ್ತು ಶಕ್ತಿ ನಿರ್ಮಾಣದ ಭಂಗಿ ವೀರಭದ್ರಾಸನ -3

Upayuktha

ಶ್ರೀಗಳೊಳಗೊಬ್ಬ ಅದ್ಭುತ ಯೋಗ ಸಾಧಕ

Upayuktha

ಅಷ್ಟಾಂಗ ಯೋಗ ಸಾಧನಾ ಮಾರ್ಗ…

Upayuktha