ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗಾಸನ ಮಾಲಿಕೆ
ಈ ಆಸನ ಅಭ್ಯಾಸದಿಂದ ಕಾಲಿನ ನರಗಳ ಸೆಳೆತ, ವಾತ ಇತ್ಯಾದಿಗಳು ನಿವಾರಣೆಯಾಗಲು ಸಹಕಾರಿಯಾಗುತ್ತದೆ.
ಈ ಆಸನದಲ್ಲಿ ನಿಂತುಕೊಂಡು ಕಾಲುಗಳನ್ನು ವಿಸ್ತರಿಸಿ, ದೇಹವನ್ನು ಮುಂದಕ್ಕೆ ಭಾಗಿಸಿ ಗಲ್ಲವನ್ನು ಪಾದದ ಅಂಗುಷ್ಠಕ್ಕೆ ಸ್ಪರ್ಶಿಸುವುದು.
ಅಭ್ಯಾಸ ಕ್ರಮ:
ಪ್ರಥಮವಾಗಿ ತಾಡಾಸನದಲ್ಲಿ ನಿಲ್ಲಿ. ಅನಂತರ ಕಾಲುಗಳನ್ನು 3 ರಿಂದ 4 ಅಡಿಗಳಷ್ಟು ಅಂತರದಲ್ಲಿ ನಿಲ್ಲಿ. ಬೆನ್ನ ಹಿಂದೆ ಕೈಗಳನ್ನು ಹಿಡಿದಿರಬೇಕು. ಆಮೇಲೆ ಬಲಕಾಲನ್ನು ಬಲಬದಿಗೆ 90 ಡಿಗ್ರಿಗಳಷ್ಟು ತಿರುಗಿಸಿ, ಎಡಕಾಲು ಸ್ವಲ್ಪ ಒಳಗಡೆ ಸರಿಸಿ ಉಸಿರನ್ನು ಬಿಡುತ್ತಾ ನಿಧಾನವಾಗಿ ಬಲಮಂಡಿಯನ್ನು ಭಾಗಿಸಿ ಎಡಕಾಲನ್ನು ನೇರವಾಗಿಸಿ, ಮುಂದಕ್ಕೆ ಬಾಗಿ ಗಲ್ಲವನ್ನು ಮಂಡಿಗೆ ಸ್ಪರ್ಶಿಸಿ. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಾಮಾನ್ಯ ಉಸಿರಾಟ ನಡೆಸುತ್ತಾ ಇದ್ದು ಅನಂತರ ಸಹಜ ಸ್ಥಿತಿಗೆ ಬರಬೇಕು. ಹಾಗೆಯೇ ಇನ್ನೊಂದು ಬದಿಯಲ್ಲಿ ಅಭ್ಯಾಸ ಮಾಡಿ. ಆರಂಭದಲ್ಲಿ ಅಭ್ಯಾಸ ಮಾಡುವಾಗ ಸಾಧ್ಯವಾಗುವಷ್ಟೇ ಮುಂದಕ್ಕೆ ಬಾಗಿ.
ಉಪಯೋಗಗಳು: ಈ ಆಸನ ಅಭ್ಯಾಸದಿಂದ ಕಾಲಿನ ನರಗಳ ಸೆಳೆತ, ವಾತ ಇತ್ಯಾದಿಗಳು ನಿವಾರಣೆಯಾಗಲು ಸಹಕಾರಿಯಾಗುತ್ತದೆ. ಹಾಗೂ ಸೊಂಟದ ಹೊಟ್ಟೆಯ ಬೊಜ್ಜು ಕರಗಲು ಸಹಾಯವಾಗುತ್ತದೆ. ಶಿರಸ್ಸಿಗೆ ರಕ್ತ ಪರಿಚಲನೆ ಒದಗಿ ಬರುತ್ತದೆ. ಆದರೆ ತುಂಬಾ ಸೊಂಟ ನೋವು ಇದ್ದವರು ಈ ಆಸನ ಅಭ್ಯಾಸ ಮಾಡುವುದು ಬೇಡ.
ವಿ.ಸೂ: ಆದರೆ ತುಂಬಾ ಸೊಂಟ ನೋವು ಇದ್ದವರು ಈ ಆಸನ ಅಭ್ಯಾಸ ಮಾಡುವುದು ಬೇಡ.
– ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ,
ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್, ಅಂತರರಾಷ್ಟೀಯ ಯೋಗ ತೀರ್ಪುಗಾರರು,
“ಪಾರಿಜಾತ”, ಮನೆ ಸಂಖ್ಯೆ 2-72:5, ಬಿಷಪ್ ಕಂಪೌಂಡು,
ಅಂಚೆ: ಕೊಂಚಾಡಿ, ಯೆಯ್ಯಾಡಿ ಪದವು,
ಮಂಗಳೂರು-575 008
ಮೊಬೈಲ್ ನಂಬ್ರ: 9448394987
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಉಪಯುಕ್ತ ನ್ಯೂಸ್ ಸಿಗ್ನಲ್ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್ ಬಳಸಿ