ಯೋಗ- ವ್ಯಾಯಾಮ ಲೈಫ್‌ ಸ್ಟೈಲ್- ಆರೋಗ್ಯ

ಸುಯೋಗ: ಪ್ರಸ್ತಾವನೆ- ಭಾಗ-3: ಅಷ್ಟಾಂಗ ಯೋಗ

ಮಹಾಮುನಿ ಪತಂಜಲಿಯ ಪ್ರಕಾರ ಯೋಗದಲ್ಲಿ ಎಂಟು ಮೆಟ್ಟಲುಗಳಿವೆ. ಅವು
1) ಯಮ 2) ನಿಯಮ 3) ಆಸನ 4) ಪ್ರಾಣಾಯಮ 5) ಪ್ರತ್ಯಾಹಾರ
6) ಧಾರಣ 7) ಧ್ಯಾನ ಮತ್ತು 8) ಸಮಾಧಿ

ಆರೋಗ್ಯ ಮತ್ತು ಸುಸ್ಥಿತಿಗೆ ಯೋಗದ ಅಭ್ಯಾಸಗಳು:-
ವ್ಯಾಪಕವಾಗಿ ತೊಡಗಿಸಿಕೊಂಡಿರುವ ಯೋಗಸಾಧನಗಳು ಇಂತಿವೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ ಸಮಾಧಿ, ಬಂಧುಗಳು, ಹಾಗೂ ಮುದ್ರೆಗಳು, ಷಟ್ಕರ್ಮಗಳು, ಯುಕ್ತಾಹಾರ, ಮಂತ್ರಜಪ, ಯುಕ್ತ ಕರ್ಮ ಇತ್ಯಾದಿ.

‘ಯಮ’ಗಳು ನಿರ್ಬಂಧನೆಗಳು, ‘ನಿಯಮಗಳು’ ನೀತಿಗಳು/ಮಾಡಬೇಕಾದವುಗಳು. ಮುಂದಿನ ಯೋಗಾಭ್ಯಾಸಕ್ಕೆ ಇವುಗಳು ಪೂರ್ವಾಗತ್ಯ ವಿಚಾರಗಳೆಂದು ಪರಿಗಣಿಸಲ್ಪಡುತ್ತವೆ. ‘ಕುರ್ಯಾತ್-ತದೆ-ಆಸನಮ್-ಸ್ಥೈರ್ಯಮ್’ ಎಂದು ಆಸನಗಳು ದೇಹ ಮತ್ತು ಮನಸ್ಸಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ವಿವಿಧ ಮನೋಶಾರೀರಿಕ ಭಂಗಿಗಳನ್ನು ಹೊಂದುವುದು, ಸಾಕಷ್ಟು ದೀರ್ಘ ಸಮಯದವರೆಗೆ ದೇಹದ ಸ್ಥಿತಿಯನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಕೊಡುವುದು ಅವಶ್ಯವಾಗಿದೆ.

ಪ್ರಾಣಾಯಾಮವು ವ್ಯಕ್ತಿಯ ಉಸಿರಾಟದ ಕ್ರಿಯೆಯ ಅರಿಯುವಿಕೆಯು ಪಕ್ವಗೊಳಿಸುವುದನ್ನು ಒಳಗೊಂಡಿದೆ. ಹಾಗೂ ವ್ಯಕ್ತಿಯ ಆಸ್ತಿತ್ವದ ಪ್ರಮುಖ ಕಾರ್ಯಾಂಗವಾಗಿ ಉಸಿರಾಟದ ಇಚ್ಚಾಪೂರ್ವಕ ನಿಯಂತ್ರಣ ಹೊಂದುವುದನ್ನು ಒಳಗೊಂಡಿದೆ. ಪ್ರಾಣಾಯಾಮವು ವ್ಯಕ್ತಿಯು ತಮ್ಮ ಮನಸ್ಸನ್ನು ಅರಿಯುವಲ್ಲಿ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಹೊಂದುವಲ್ಲಿ ಸಹಕಾರಿಯಾಗಿದೆ. ಮೊದಲ ಹಂತಗಳಲ್ಲಿ ಮೂಗಿನ ಹೊಳ್ಳೆಗಳ ಬಾಯಿ ಮತ್ತು ದೇಹದ ಇತರ ರಂಧ್ರಗಳ ಮೂಲಕ ದೇಹದ ಒಳಭಾಗದ ಹಾಗೂ ಹೊರಭಾಗದ ಮಾರ್ಗಗಲಲ್ಲಿ ಮತ್ತು ಗಮ್ಯ ಸ್ಥಾನಗಳಲ್ಲಿ ಉಸಿರನ್ನು ತೆಗೆದುಕೊಳ್ಳುವುದು ಹಾಗೂ ಉಸಿರು ಹೊರ ಹಾಕುವುದು ಇವುಗಳನ್ನು ಅರಿತುಕೊಳ್ಳುವುದು.

ನಂತರದ ಹಂತಗಳಲ್ಲಿ ಈ ಕ್ರಿಯೆಯನ್ನು ವ್ಯತ್ಯಾಸಗೊಳಿಸಿ ಖಾಲಿಯಾಗಿರುವ ದೇಹದ ಭಾಗಗಳು ತುಂಬುತ್ತಿವೆ ಎಂಬ ಅರಿವಿನೊಂದಿಗೆ (ಪೂರಕ) ಶ್ವಾಸವನ್ನು/ಉಸಿರನ್ನು ನಿಯಂತ್ರಿತವಾಗಿ ಒಳಗೆ ತೆಗೆದುಕೊಳ್ಳುವುದು (ಶ್ವಾಸ) ಜಾಗಗಳು ಭರ್ತಿಯಾಗಿವೆ ಎಂದು ಭಾವಿಸುವುದು (ಕುಂಭಕ) ಖಾಲಿಯಾಗುತ್ತಿದೆ ಎಂದು ಭಾವಿಸುವುದು (ರೇಚಕ) ನಿಯಂತ್ರಿತಗೊಂಡ (Regulate, controlled and monitored) ಪ್ರಶ್ವಾಸನೆ (ಪ್ರಶ್ವಾಸ).

‘ಪ್ರತ್ಯಾಹಾರ’ ಎಂದರೆ ಒಬ್ಬನ ಇಚ್ಛಾಪೂರ್ವಕವಾಗಿ ಇಂದ್ರಿಯ ಸಂಬಂಧಿ ಕ್ರಿಯೆಗಳಿಂದ ದೂರಗೊಳ್ಳುವುದು.

‘ಧಾರಣ’ ಎಂದರೆ ಒಬ್ಬನ ಸ್ಥೂಲವಾದ ಆಸಕ್ತ ಕ್ಷೇತ್ರದ ಮೇಲೆ (ದೇಹ ಮತ್ತು ಮನಸ್ಸಲ್ಲಿರುವ) ಕೇಂದ್ರೀಕರಣ ‘ಧ್ಯಾನ’ (Meditation) ಪೂರ್ಣವಾಗಿ ದೇಹ ಮತ್ತು ಮನಸ್ಸಿನ ಒಳಭಾಗದ ಮೇಲೆ ಏಕಾಗ್ರತೆ ಸಾಧಿಸುವುದು ಕೊನೆಯದಾಗಿ ‘ಸಮಾಧಿ’
ಬಂಧುಗಳು ಮತ್ತು ಮುದ್ರೆಗಳು ಪ್ರಣಾಯಾಮದೊಂದಿಗೆ ಸಂಬಂಧಪಟ್ಟ ಅಭ್ಯಾಸಗಳು ಇದನ್ನು ಉಚ್ಛ ಸ್ತರದ ಯೋಗಾಭ್ಯಾಸಗಳೆಂದು ಪರಿಗಣಿಸುತ್ತಾರೆ. ಉಸಿರಾಟದ ಮೇಲೆ ಹತೋಟಿ ಹೊಂದುತ್ತಾ ಕೆಲವೊಂದು ದೈಹಿಕ ಭಂಗಿಗಳೊಂದಿಗೆ ಇವನ್ನು ಮಾಡಬೇಕು. ಬಂಧುಗಳು ಮತ್ತು ಮುದ್ರೆಗಳು ಮನಸ್ಸಿನ ನಿಯಂತ್ರಣವನ್ನು ಇನ್ನಷ್ಟು ಹೆಚ್ಚಿಸಲು ಸಹಕರಿಸಿ, ಉಚ್ಚ ಹಂತದ ಯೋಗಸ್ಥಿತಿಯನ್ನು ತಲುಪಲು ದಾರಿ ಮಾಡಿಕೊಡುತ್ತವೆ. ಆದಾಗ್ಯೂ ‘ಧ್ಯಾನ’ವು ನಮ್ಮನ್ನು ಆತ್ಮಾನುಭವ (self realization) ದತ್ತ ಚಲಿಸುವಂತೆ ಮಾಡುತ್ತದೆ, ‘ದಿವ್ಯಾನುಭವ’ದತ್ತ (transcendence) ಕೊಂಡೊಯ್ಯುತ್ತದೆ. ಇದನ್ನೆ ಯೋಗ ಸಾಧನೆಯ ಮಹತ್ವ ಎಂದು ತಿಳಿಯುತ್ತಾರೆ.

‘ಸತ್ಕರ್ಮ’ಗಳು (satkarmas) ವಿಷ ನಿವಾರಕ/ನಂಜುನಿವಾರಕ ವಿಧಾನಗಳು ಇವು ವೈದ್ಯಕೀಯ ಗುಣವುಳ್ಳವರು (clinical in nature) ದೇಹದಲ್ಲಿ ನಂಜು /ವಿಷ ಶೇಖರಗೊಂಡಿದನ್ನು ಹೋಗಲಾಡಿಸುತ್ತವೆ. ‘ಯುಕ್ತಾಹಾರ’ ಸರಿಯಾದ/ಸಮರ್ಪಕವಾದ ಆಹಾರ ಮತ್ತು ಆಹಾರ ಸೇವನೆಯನ್ನು ಉತ್ತಮ ಆರೋಗ್ಯಕರ ಜೀವನಕ್ಕಾಗಿ ಪ್ರತಿಪಾದಿಸುತ್ತದೆ.

ಯೋಗಾಭ್ಯಾಸಕ್ಕೆ ಸಾಮಾನ್ಯ ಮಾರ್ಗಸೂಚಿಗಳು: (GENERAL GUIDELINESS FOR YOGA PRACTICE)

ಯೋಗಾಭ್ಯಾಸಿಯು ಯೋಗ ಮಾಡುವಾಗ ಕೆಳಗೆ ಕೊಟ್ಟಂತಹ ಮಾರ್ಗದರ್ಶನದ ಮಹತ್ವಗಳನ್ನು ಪಾಲಿಸಬೇಕು.
ಯೋಗಾಬ್ಯಾಸದ ಮೊದಲು
1. ‘ಶೌಚ’ ಎಂದರೆ ಶುಚಿತ್ವ, ಇದು ಯೋಗಾಭ್ಯಾಸಕ್ಕೆ ಪ್ರಮುಖ ಅವಶ್ಯಕತೆ, ಇದು ಪರಿಸರ, ದೇಹ ಮತ್ತು ಮನಸ್ಸನ್ನು ಒಳಗೊಂಡಿರುತ್ತದೆ.
2. ಯೋಗಾಭ್ಯಾಸವನ್ನು ಶಾಂತ ಹಾಗೂ ನಿಶ್ಯಬ್ದದ ವಾತಾವರಣದಲ್ಲಿ ವಿಶ್ರಾಂತಗೊಂಡ ದೇಹ ಮತ್ತು ಮನಸ್ಸಿನಿಂದ ಮಾಡಬೇಕು.
3. ಯೋಗಾಭ್ಯಾಸವನ್ನು ಖಾಲಿ ಯಾ ಹಗುರ ಹೊಟ್ಟೆಯಲ್ಲಿ ಮಾಡಬೇಕು. ನಿಶ್ಯಕ್ತಿ ತೋರಿದಲ್ಲಿ ಸ್ವಲ್ಪ ಜೇನನ್ನು ಉಗುರು ಬಿಸಿ ನೀರಲ್ಲಿ ಸೇವಿಸಬಹುದು.
4. ಯೋಗಾಭ್ಯಾಸದ ಮೊದಲು ಮೂತ್ರಕೋಶ ಮತ್ತು ಮಲ ಖಾಲಿಯಾಗಿರಬೇಕು.
5. ಚಾಪೆ, ಯೋಗದ ಚಾಪೆ, ಜಮಾಖಾನ ದಪ್ಪದ ಬಟ್ಟೆ ಅಥವಾ ಚಾದರ ಯಾ ಮಡಿಸಿದ ಮಲಗುವ ಬಟ್ಟೆಯ್ನನು ಯೋಗಾಭ್ಯಾಸಕ್ಕೆ ಉಪಯೋಗಿಸಿ.
6. ಹಗುರ ಹಾಗೂ ಹಿತಕರವಾದ ಹತ್ತಿಯ ಬಟ್ಟೆ ಅಪೇಕ್ಷಣೀಯ ಇದರಿಂದ ದೇಹದ ಚಾಲನೆ ಸುಲಭವಾಗುತ್ತದೆ.
7. ಆಯಾಸಗೊಂಡ ಪರಿಸ್ಥಿತಿ ಅಸೌಖ್ಯ ಅತಿ ಒತ್ತಡದಿಂದ ಬಳಲಿದ್ದಾಗ ಯೋಗ ಮಾಡಬಾರದು.
8. ದೀರ್ಘಕಾಲದಿಂದ ರೋಗ/ನೋವು/ಹೃದಯ ಸಂಬಂಧಿ ತೊಂದರೆಗಳಿದ್ದಲ್ಲಿ ಯೋಗಾಭ್ಯಾಸ ಆರಂಭಿಸುವ ಮೊದಲು ಸೂಕ್ತ ವೈದ್ಯರನ್ನು ಅಥವಾ ಯೋಗ ಥೆರಪಿಸ್ಟ್‍ರನ್ನು ಸಂದರ್ಶಿಸಿರಿ.
ಗರ್ಭವತಿಯಾದ ಮತ್ತು ಋತುಸ್ರಾವದ ಸಮಯದಲ್ಲಿ ಸ್ತ್ರೀಯರು ಯೋಗ ಮಾಡುವರೆ ಯೋಗ ತಜ್ಞರನ್ನು ಸಂಪರ್ಕಿಸಿಯೇ ಮಾಡಿರಿ.

‘ಯೋಗರತ್ನ’ ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ಅಂತರರಾಷ್ಟ್ರೀಯ ತೀರ್ಪುಗಾರರು
ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್‍ಪೆಕ್ಟರ್
ಮಂಗಳೂರು -575 008
9448394987

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

ಸುಯೋಗ: ಪ್ರಸ್ತಾವನೆ (ಭಾಗ 2)- ಯೋಗದ ವ್ಯಾಖ್ಯಾನಗಳು

Related posts

ವಯಸ್ಸಿಗೆ ತಕ್ಕಂತೆ ತಿನ್ನಿ; ಆರೋಗ್ಯವಾಗಿ ಬದುಕಿ

Upayuktha

ಸುಯೋಗ-ಯೋಗಾಸನ ಮಾಲಿಕೆ 8- ಉತ್ಕಟಾಸನ (Uthkatasana)

Upayuktha

ಸುಯೋಗ- ಯೋಗಾಸನ ಮಾಲಿಕೆ 9- ತ್ರಿಕೋಣಾಸನ (Thrikonasana)

Upayuktha