ಯೋಗ- ವ್ಯಾಯಾಮ ಲೈಫ್‌ ಸ್ಟೈಲ್- ಆರೋಗ್ಯ

ಸುಯೋಗ: ಭಾಗ-1: ಯೋಗ ಶಾಸ್ತ್ರ ಮತ್ತು ಯೋಗದ ವ್ಯಾಖ್ಯಾನ

ಭಾಗ-1:
ಯೋಗ ಶಾಸ್ತ್ರ ಮತ್ತು ಯೋಗ ಎಂದರೇನು? ಹಾಗೂ ಅದರ ಪ್ರಮುಖ ವ್ಯಾಖ್ಯಾನಗಳು

“ಯೋಗವು ಭಾರತದ ಪುರಾತನ ಸಂಪ್ರದಾಯದ ಒಂದು ಅಮೂಲ್ಯ ಕೊಡುಗೆ. ಇದು ದೇಹ ಮತ್ತು ಮನಸ್ಸನ್ನು ಚಿಂತನೆ ಮತ್ತು ಕಾರ್ಯವನ್ನು ನಿರ್ಬಂಧ ಮತ್ತು ಸಫಲತೆಯನ್ನು ಮನುಷ್ಯ ಮತ್ತು ಪ್ರಕೃತಿಯೊಂದಿಗೆ ಹೊಂದಿಕೆಯನ್ನು ಒಟ್ಟಾಗಿರಿಸುವುದನ್ನು ಒಳಗೊಂಡಿರುತ್ತದೆ. ಹಾಗೂ Holistic approach ಆರೋಗ್ಯ ಮತ್ತು ಸುಸ್ಥಿತಿಯಲ್ಲಿರಲು “ಯೋಗ ಎಂಬುದು ಶಾರೀರಿಕ ವ್ಯಾಯಾಮದ ಬಗ್ಗೆ ಅಲ್ಲ. ಇದು ನಮ್ಮೊಳಗೆ ಪ್ರಪಂಚ ಮತ್ತು ಪ್ರಕೃತಿಯೊಂದಿಗೆ ಹೊಂದಾಣಿಕೆಯ ಭಾವ ಕಾಣುವುದರ ಬಗ್ಗೆ. ನಮ್ಮ ಜೀವನದ ಶೈಲಿಯನ್ನು ಬದಲಿಸಿ ಮತ್ತು ಪ್ರಜ್ಞೆಯ್ನನು ಸೃಷ್ಟಿಸಿ ಯೋಗವು ಜಾಗತಿಕ ಹವಾಮಾನದ ಬದಲಾವಣೆಯನ್ನು ಹತೋಟಿಯಲ್ಲಿಡಲು ಸಹಕಾರ ನೀಡಬಲ್ಲುದು.

ಯೋಗ ಶಾಸ್ತ್ರ:
ಯೋಗ ಎನ್ನುವ ಪದ ಸಂಸ್ಕøತ ಮೂಲಧಾತುವಾದ “ಯುಜ್” ಎನ್ನುವುದರಿಂದ ಬಂದಿದ್ದು “ಕೂಡಿಸು ಚಿತ್ತವನ್ನು ನಿರ್ದೇಶಿಸಿ ಕೇಂದ್ರೀಕರಿಸು” ಎನ್ನುವ ಆಜ್ಞೆಗಳನ್ನು ಕೊಡುತ್ತದೆ. ಯುಜ್ಯತೇ ಸಮಾಧೀಯತೇನೇನ ಇತಿ ಯೋಗ: ಇದು ಯೋಗ ಶಬ್ದದ ಉತ್ಪತ್ತಿಯಾಗಿದೆ. ಇಲ್ಲಿ ಜೀವಾತ್ಮವನ್ನು ಯಾವುದು ಆತ್ಮ ಸಾಕ್ಷಾತ್ಕಾರದೆಡೆಗೆ (ಪರಮಾತ್ಮನೆಡೆಗೆ) ಒಯ್ಯುವುದೋ ಅದು ಯೋಗ ಜ್ಞಾನ ಯೋಗ, ಭಕ್ತಿಯೋಗ, ಕರ್ಮಯೋಗ ಮತ್ತು ರಾಜಯೋಗಗಳೆಂದು ನಾಲ್ಕು ವಿಧದ ಯೋಗಗಳಿವೆ.

ನಮಗೆ ದೊರಕಿರುವ ಯೋಗ ಶಾಸ್ತ್ರದ ಗ್ರಂಥಗಳಲ್ಲಿ ಪತಂಜಲಿ ಮಹಾ ಋಷಿಗಳ ಯೋಗಶಾಸ್ತ್ರವೇ ಅತ್ಯಂತ ವ್ಶೆಜ್ಞಾನಿಕವಾದುದು, ಪ್ರಾಚೀನವಾದುದು ಮತ್ತು ಅಧಿಕೃತವಾದುದು ಪತಂಜಲಿ ಮಹಾಋಷಿಗಳು 195 /196 ಸೂತ್ರಗಳನ್ನು ರಚಿಸಿರುತ್ತಾರೆ ಹಾಗೂ ಈ ಯೋಗ ಸೂತ್ರದಲ್ಲಿ: ನಾಲ್ಕು ಪಾದಗಳು ಅಥವಾ ಅಧ್ಯಾಯಗಳು ಇದೆ. ಹೀಗೆ ಅವರು ಸನಾತನವಾಗಿದ್ದ ಶಾಸ್ತ್ರವನ್ನು ಕ್ರೋಢೀಕರಿಸಿ ಅದಕ್ಕೊಂದು ನಿರ್ದಿಷ್ಟರೂಪ ನೀಡಿದ್ದಾರೆ.

ನಾಲ್ಕು ಪಾದಗಳು:
1) ಸಮಾಧಿ ಪಾದ (ಸೂತ್ರ-51)
2) ವಿಭೂತಿ ಪಾದ (ಸೂತ್ರ -55)
3) ಸಾಧನ ಪಾದ (ಸೂತ್ರ-55)
4) ಕೈವಲ್ಯ ಪಾದ(ಸೂತ್ರ-35)

ಪತಂಜಲಿ ಮಹರ್ಷಿ ಯೋಗದಲ್ಲಿ ಸುಖ/ದುಃಖ ತರುವ 5 ರೀತಿಯ ಚಿತ್ತವೃತ್ತಿಗಳನ್ನು ಪಟ್ಟಿ ಮಾಡಿದ್ದಾರೆ.
1) ಪ್ರಮಾಣ (ಅಳತೆ)
2) ವಿಪರ್ಯಯ (ತಪ್ಪಾಗಿ ತಿಳಿಯುವುದು)
3) ವಿಕಲ್ಪ (ತಪ್ಪು ಕಲ್ಪನೆ)
4) ನಿದ್ರಾ (ಯಾವುದೇ ರೀತಿಯ ಅನುಭವಗಳು ಇಲ್ಲದಿರುವಿಕೆ)
5) ವಿಸ್ಮೃತಿ (ಗೋಚರವಿಲ್ಲದಿರುವುದು)

ಯೋಗ ಸಾಧನೆಗೆ 5 ಬಗೆಯ ತೊಡಕುಗಳು
1) ಅವಿದ್ಯಾ (ವೇದವಿದ್ಯೆ ಇಲ್ಲದಿರುವುದು)
2) ಅಸ್ಮಿತ (ಅಹಂ ಭಾವನೆ)
3) ರಾಗ (ಆಸಕ್ತಿ, ಪ್ರೀತಿ
4) ದ್ವೇಷ (ಪ್ರೀತಿರಾಹಿತ್ಯ)
5) ಅಭಿನಿವೇಶ (ಪ್ರಾಪಂಚಿಕ ಜೀವನದಲ್ಲಿ ನಿರಾಸಕ್ತಿ)

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸುವಿಚಾರ: ಯೋಗ ಸಾಧನೆಗೆ ಮಾಡುವ ಕೆಲಸದಲಿ ಪ್ರೀತಿಯಿರಬೇಕು

Upayuktha

ಬೆಳಗ್ಗೆ ಬೇಗ ಏಳುವುದರಿಂದ ಏನು ಲಾಭ…?

Upayuktha

ಅಧಿಕ ರಕ್ತದೊತ್ತಡ ಎಂಬ ನಿಶ್ಯಬ್ಧ ಕೊಲೆಗಾರ… ಜೀವನಶೈಲಿ ಬದಲಾವಣೆಯೇ ಪರಿಹಾರ…

Upayuktha

Leave a Comment