ಯೋಗ- ವ್ಯಾಯಾಮ

ಸುಯೋಗ: ಪ್ರಸ್ತಾವನೆ (ಭಾಗ 2)- ಯೋಗದ ವ್ಯಾಖ್ಯಾನಗಳು

ಜಗದ್ಗುರುವೂ ಯೋಗಾಚಾರ್ಯನೂ ಆದ ಶ್ರೀಕೃಷ್ಣನು ಅರ್ಜುನನಿಗೆ ಉಪದೇಶಿಸಿದ ಭಗವದ್ಗೀತೆಯು ಯೋಗಕ್ಕೆ ಉತ್ತಮ ಉದಾಹರಣೆ. ಮಹಾತ್ಮಾ ಗಾಂಧೀಜಿಯವರು “ಶರೀರದ ಮನಸ್ಸಿನ ವiತ್ತು ಆತ್ಮದ ಸರ್ವಶಕ್ತಿಗಳನ್ನು ಭಗವಂತನೊಡನೆ ಸಂಯೋಜಿಸುವುದೇ ಯೋಗ” ಎನ್ನುತ್ತಾರೆ.

ಯೋಗದ ಪ್ರಮುಖ ವ್ಯಾಖ್ಯಾನಗಳು:
1) ಯೋಗ: ಚಿತ್ತ ವೃತ್ತಿ ನಿರೋಧಃ (ಪತಂಜಲಿ ಋಷಿಗಳ 196 ಸೂತ್ರಗಳ 2 ನೇ ಅಧ್ಯಾಯದಲ್ಲಿ) ಚಿತ್ತದ ವೃತ್ತಿಗಳನ್ನು (ಬಯಕೆಗಳನ್ನು) ಸಂಪೂರ್ಣ ತಡೆ ಹಿಡಿದು ಸರ್ವಥಾ ವಿರೋಧಿಸಿ, ನಿಲ್ಲಿಸಿ, ಏಕಾಗ್ರತೆ ಸಾಧಿಸುವುದೇ ಯೋಗ. ಮನಸ್ಸಿನಲ್ಲಿ ಬರುವ ಎಲ್ಲಾ ಯೋಚನೆಗಳು. ಕಲ್ಪನೆಗಳು. ಭಾವನೆಗಳು, ಇತ್ಯಾದಿಗಳನ್ನು ಸಂಪೂರ್ಣ ಲಯವಾಗಿಸಿ ಮನಸ್ಸು ಶಾಂತ ಸ್ಥಿತಿಗೆ ಹೋಗುವುದೇ ಯೋಗ. ಮುಂದೆ ಭಗವಂತನ ದರ್ಶನಕ್ಕೆ ಮನಸ್ಸನ್ನು ಸಿದ್ಧಗೊಳಿಸುವ ಪೂರ್ವಭಾವಿ ಅಭ್ಯಾಸವೇ ಯೋಗಾಭ್ಯಾಸದ ಮುಖ್ಯ ಉದ್ದೇಶವಾಗಿದೆ. ಲೌಕಿಕ ಜ್ಞಾನಾರ್ಜನೆಗೆ, ವಿದ್ಯಾರ್ಥಿಗಳಿಗೆ ಏಕಾಗ್ರತೆ ಅಗತ್ಯ
2) ತಾಂ ಯೋಗಮಿತಿ ಮನ್ಯಂತೇ ಸ್ಥಿರಮಿಂದ್ರಿಯಧಾರಣಾಮ್ _ ಪಂಚೇಂದ್ರಿಯಗಳು ಮತ್ತು ಮನಸ್ಸಿನ ಸ್ಥಿರತೆ ಸಾಧಿಸಿ, ಸಮಾಧಿ ಸ್ಥಿತಿಯಲ್ಲಿ ಇರುವುದೇ ಯೋಗ.
3) “ಅಭ್ಯಾಸೇನತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ” (ಭ -6-35) ಅಭ್ಯಾಸದಿಂದಲೂ, ವೈರಾಗ್ಯದಿಂದಲೂ ಮನಸ್ಸನ್ನು ನಿಗ್ರಹಿಸಬಹುದು.
4) ಸಾಧಿಸಲಾಗದ್ದನ್ನು ಸಾಧಿಸುವುದೇ “ಯೋಗ”, ಸಾಧಿಸಿ ಪಡೆದದ್ದನ್ನು ಉಳಿಸಿಕೊಳ್ಳುವುದೇ ಕ್ಷೇಮ. (“ಯೋಗ ಕ್ಷೇಮವಹಾಮ್ಯಹಂ’-ಗೀತೆ)
5) ಯೋಗಃ ಕರ್ಮಸು ಕೌಶಲಂ’-(2-50 ಭಗವದ್ಗೀತೆ) ಕೌಶಲ ಪೂರ್ಣವಾದ ಕೆಲಸವೇ ಯೋಗ
6) “ಸಮತ್ವಂ ಯೋಗ ಉಚ್ಯತೇ’ (2-48 ಭಗವದ್ಗೀತೆ) ಮನಸ್ಸಿನ ಸಮಸ್ಥಿತಿಯನ್ನು ಸಾಧಿಸುವುದೇ ಯೋಗ.
7) ನೋವು ಮತ್ತು ದುಃಖಗಳ ಸ್ಪರ್ಶದಿಂದ ಬಿಡುಗಡೆಯಾಗುವುದೇ ಯೋಗ (ಭ-6)
8) ಜೀವಾತ್ಮ ಪರಮಾತ್ಮ ಐಕ್ಯಾ ಅವಸ್ಥಾ ಯೋಗ’ ಅಂದರೆ ಜೀವಾತ್ಮನನ್ನು ಪರಮಾತ್ಮನಲ್ಲಿ ಸೇರಿಸುವ ಪ್ರಕ್ರಿಯೆಯೇ ಯೋಗ ಎಂದು ಶಾಂಡಿಲ್ಯ ಉಪನಿಷತ್ತು ತಿಳಿಸಿದೆ.
9) “ಮನಃ ಪ್ರಶಮನೋಪಾಯ: ಯೋಗ ಇತ್ಯಬಿಧೀಯತೇ” ವಸಿಷ್ಠ ಮಹರ್ಷಿಗಳು ತಮ್ಮ ಯೋಗಾವಸಿಷ್ಠ ಗ್ರಂಥದಲ್ಲಿ ತಿಳಿಸಿರುವಂತೆ, “ಮನಸ್ಸನ್ನು ಪ್ರಶಾಂತಗೊಳಿಸುವ ಕ್ರಮಬದ್ಧ ಉಪಾಯವೇ ಯೋಗ
10) ಮನಸ್ಸನ್ನು ಪ್ರಶಾಂತತೆಯಲ್ಲಿ ನೆಲೆಗೊಳಿಸಿ ಉನ್ನತ ಸ್ಥಿತಿಗೆ ಏರುವುದೇ ಯೋಗ-ಶ್ವೇತಾಶ್ವರ ಉಪನಿಷತ್ತು.
11) “ಶಾರೀರಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ ಸ್ತರಗಳೆಲ್ಲದರಲ್ಲೂ ವ್ಯಕ್ತಿಯು ಪರಿಪೂರ್ಣವಾಗಿ ವಿಕಸನಗೊಳ್ಳುವ ಪ್ರಕ್ರಿಯೆಯೇ ಯೋಗ’ ಎನ್ನುತ್ತಾರೆ- ಮಹರ್ಷಿ ಶ್ರೀ ಅರವಿಂದರು.
12) ತನ್ನ ಸಂಪೂರ್ಣ ವಿಕಾಸವನ್ನು ಒಂದು ಜನ್ಮದಲ್ಲಿ ಅಥವಾ ಕೆಲವು ತಿಂಗಳಲ್ಲಿ ಅಥವಾ ಕೆಲವು ಘಂಟೆಗಳಲ್ಲಿ ಮಾನವನು ಸಾಧಿಸಬಹುದಾದ ಸಾಧನವೇ ಯೋಗ-ಸ್ವಾಮಿ ವಿವೇಕಾನಂದರು.
13) ಮನಸ್ಸನ್ನು ಶಿಸ್ತಿಗೆ ಒಳಪಡಿಸುವುದೇ ಯೋಗ.
14) ಚಂಚಲವಾದ ಮನಸ್ಸನ್ನು ಒಂದೆಡೆ ನಿಲ್ಲಿಸುವುದೇ ಯೋಗ.
15) ಆನಂದ ಸ್ವರೂಪವನ್ನು ಪಡೆಯುವ ಸಾಧನೆಯೇ ಯೋಗ.
16) ಶರೀರದ ಮನಸ್ಸಿನ ಮತ್ತು ಆತ್ಮದ ಸರ್ವ ಶಕ್ತಿಗಳನ್ನು ಭಗವಂತನೊಡನೆ ಸಂಯೋಜಿಸುವುದೇ ಕ್ಷೇಮ. (“ಯೋಗ ಕ್ಷೇಮವಹಾಮ್ಯಹಂ’-ಗೀತೆ)
17) ಶರೀರದ ಮನಸ್ಸಿನ ಮತ್ತು ಆತ್ಮದ ಸರ್ವ ಶಕ್ತಿಗಳನ್ನು ಭಗವಂತನೊಡನೆ ಸಂಯೋಜಿಸುವುದೇ ಯೋಗ’.-ಮಹಾತ್ಮ ಗಾಂಧೀಜಿ
18) ಯೋಗದ ವಿಶಾಲವಾದ ಅರ್ಥ-ಸಂಕುಚಿತವಾದ ಅಹಂಕಾರ ತುಂಬಿದ ವ್ಯಕ್ತಿತ್ವವನ್ನು ವಿಶಾಲಗೊಳಿಸಿ ಉನ್ನತ ಸ್ಥಿತಿಗೆ ತರುವುದು.

ಒಟ್ಟಿನಲ್ಲಿ ಹೇಳುವುದಾದರೆ ಯೋಗಾನುಷ್ಠಾನದಿಂದ ಅಶುದ್ಧಿ. ಕ್ಷಯವಾಗಿ, ಜ್ಞಾನ ದೀಪ್ತಿಗೊಂಡು, ವಿವೇಕ ಖ್ಯಾತಿ ಉಂಟಾಗುತ್ತದೆ.
ಮಾನಸಿಕ ಶಾಂತಿ, ದೈಹಿಕ ಆರೋಗ್ಯ ಕಾಪಾಡುವ ಯೋಗಕ್ಕೆ ಭಾರತೀಯ ಸಂಪ್ರದಾಯದಲ್ಲಿ ವಿಶಿಷ್ಟ ಸ್ಥಾನವಿದೆ.

ಸುಯೋಗ: ಭಾಗ-1: ಯೋಗ ಶಾಸ್ತ್ರ ಮತ್ತು ಯೋಗದ ವ್ಯಾಖ್ಯಾನ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಯೋಗ ಚಕ್ರಗಳು ಮತ್ತು ವರ್ಣ ಚಿಕಿತ್ಸೆ: ವಿಶೇಷ ಉಪನ್ಯಾಸ

Upayuktha

ಸುಯೋಗ: ಭಾಗ-1: ಯೋಗ ಶಾಸ್ತ್ರ ಮತ್ತು ಯೋಗದ ವ್ಯಾಖ್ಯಾನ

Upayuktha

ಶಾರದಾ ಆಯುರ್‌ಧಾಮದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬೆಳಗ್ಗೆ 7ರಿಂದ 8ರ ವರೆಗೆ

Upayuktha