ಯೋಗ- ವ್ಯಾಯಾಮ ಲೈಫ್‌ ಸ್ಟೈಲ್- ಆರೋಗ್ಯ

ಸುಯೋಗ: ತಾಡಾಸನ (ನಿಲುವು ಸರಿಪಡಿಸುವ ಆಸನ ತಾಡಾಸನ)

ಯೋಗದಿಂದ ರೋಗ ದೂರ; ಬನ್ನಿ ಮಾಡೋಣ ಯೋಗಾಭ್ಯಾಸ

ಯೋಗಗುರು, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗಾಭ್ಯಾಸದ ಸಾಪ್ತಾಹಿಕ ಅಂಕಣ

ತಾಡಾಸನ (ನಿಲುವು ಸರಿಪಡಿಸುವ ಆಸನ ತಾಡಾಸನ)

ತಾಡ ಎಂದರೆ ತಾಳೆಯ ಮರ ಎನ್ನಲಾಗಿದೆ. ಇದೊಂದು ನಿಲುವು ಸರಿಪಡಿಸುವ ಆಸನವಾಗಿದೆ. ನೆಟ್ಟಗೆ ನೇರವಾಗಿ ಅಲುಗಾಡದೆ ದೇಹವನ್ನು ನಿಲ್ಲಿಸುವ ಭಂಗಿಯಾಗಿದೆ.

ಅಭ್ಯಾಸ ಕ್ರಮ: ಜಮಖಾನ ಹಾಸಿದ ನೆಲದ ಮೇಲೆ ಎರಡು ಪಾಧಗಳ ಹಿಮ್ಮಡಿ ಮತ್ತು ಹೆಬ್ಬೆರಳು ಪರಸ್ಪರ ತಾಗುವಂತೆ ಜೋಡಿಸಿ ನೇರವಾಗಿ ನಿಲ್ಲಿ. ಮಂಡಿ ಬಿಗಿ ಮಾಡಿ ಹೊಟ್ಟೆಯನ್ನು ಹಿಂದಕ್ಕೆಳೆದು ಎದೆಯನ್ನು ಮುಂದೆ ಮಾಡಿ ದೇಹದ ಎಲ್ಲಾ ಭಾರವನ್ನೂ ಎರಡೂ ಕಾಲುಗಳಿಗೆ ಸಮನಾಗಿ ಹಂಚಿ. ಅನಂತರ ಉಸಿರನ್ನು ತೆಗೆದುಕೊಳ್ಳುತ್ತಾ ಎರಡು ಕೈಗಳನ್ನು ಶಿರಸ್ಸಿನ ಮೇಲಕ್ಕೆತ್ತಿ ಜೋಡಿಸಿ.

ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸುತ್ತಾ, ಆ ಮೇಲೆ ಉಸಿರನ್ನು, ಎರಡು ಕೈಗಳನ್ನು ಕೆಳಗಿಳಿಸಿ, ಈ ರೀತಿ ಮೂರು ಬಾರಿ ಅಭ್ಯಾಸ ಮಾಡಿ.

ಪ್ರಯೋಜನ:
ಭಂಗಿಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಬೆನ್ನು ಮೂಳೆಯನ್ನು ಹೆಚ್ಚು ಚುರುಕುಗೊಳಿಸುವ ಮೂಲಕ ಸಮತೋಲನವನ್ನು ಸುಧಾರಿಸುತ್ತದೆ. ಕಣಕಾಲುಗಳು, ತೊಡೆಗಳು ಮತ್ತು ಕೀಲುಗಳ ನಮ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಅಭ್ಯಾಸ ಮಾಡುವುದು ಸುಲಭ. ಬೆಳೆಯುವ ಮಕ್ಕಳಿಗೆ ಎತ್ತರವಾಗಲು ಸಹಕಾರಿಯಾಗುತ್ತದೆ.

-ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ಸುಯೋಗ-ಯೋಗಾಸನ ಮಾಲಿಕೆ 8- ಉತ್ಕಟಾಸನ (Uthkatasana)

Upayuktha

ಸೌತೆಕಾಯಿ, ಕುಂಬಳಕಾಯಿ ವೆರೈಟಿ ದೋಸೆ

Upayuktha

ನಂತೂರು ಶ್ರೀ ಭಾರತೀ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಚಾರ್ಮಾಡಿಯಲ್ಲಿ ಶ್ರಮದಾನ

Upayuktha