ಯೋಗ- ವ್ಯಾಯಾಮ ಲೈಫ್‌ ಸ್ಟೈಲ್- ಆರೋಗ್ಯ

ಸುಯೋಗ- ಯೋಗಾಭ್ಯಾಸ ಮಾಲಿಕೆ- 14: ಸಮತೋಲನ ಮತ್ತು ಶಕ್ತಿ ನಿರ್ಮಾಣದ ಭಂಗಿ ವೀರಭದ್ರಾಸನ -3

ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗಾಸನ ಮಾಲಿಕೆ
ಸಮತೋಲನ ಸ್ಥಿತಿ ಕಾಪಾಡುವಂತಹ ವೀರಭದ್ರಾಸನದಿಂದ ಕಿಬ್ಬೊಟ್ಟೆಗೆ ಸಾಕಷ್ಟು ವ್ಯಾಯಾಮ ದೊರೆಯುತ್ತದೆ

ಒಂಟಿ ಕಾಲಿನಲ್ಲಿ ದೇಹವನ್ನು ನಿಲ್ಲಿಸಿ ಪಾರ್ಶ್ವಕ್ಕೆ (Sideward) ಬಾಗಿಸುವ ಭಂಗಿ. ವೀರಭದ್ರಾಸನದಲ್ಲಿ ಮೂರು ಪ್ರಕಾರ ಆಸನಗಳಿವೆ. ಹಿಂದಿನ ಸಂಚಿಕೆಯಲ್ಲಿ ಎರಡು ಪ್ರಕಾರಗಳನ್ನು ಗಮನಿಸಿದ್ದೇವೆ. ವೀರಭದ್ರಾಸನ-3 ಒಂದು ಕಾಲಿನ ಆಧಾರದಲ್ಲಿ ಅಭ್ಯಾಸ ಮಾಡುವುದು ಆಗಿದೆ. ಆರಂಭಿಕರಿಗೆ ತುಂಬಾ ಸವಾಲಿನದ್ದಾಗಿದೆ. ಅರಂಭದಲ್ಲಿ ಈ ಆಸನ ಅಭ್ಯಾಸ ಮಾಡಲು ಕಷ್ಟವಾಗುತ್ತದೆ. ಸತತ ಅಭ್ಯಾಸದಿಂದ ಮಾತ್ರ ಈ ಆಸನ ಕೈವಶವಾಗುತ್ತದೆ. ಇಲ್ಲಿ ದೇಹ ಮತ್ತು ಮನಸ್ಸಿನ ಸಮತೋಲನ ಸ್ಥಿತಿ ಬಹಳ ಅಗತ್ಯ. ಶಿಸ್ತು, ಸತತ ಪ್ರಯತ್ನ ಹಾಗೂ ದೃಢ ನಂಬಿಕೆಯಿಂದ ಆಸನವನ್ನು ಅಭ್ಯಸಿಸಬೇಕು.

ಅಭ್ಯಾಸ ಕ್ರಮ: ಮೊದಲು ತಾಡಾಸನದಲ್ಲಿ ನೆಲೆಸಿ ಮೂರರಿಂದ ಮೂರುವರೆ ಅಡಿಯಷ್ಟು ಕಾಲುಗಳನ್ನು ಅಗಲಿಸಿ ನಿಲ್ಲಿ. ಆಮೇಲೆ ಎರಡೂ ಕೈಗಳನ್ನು ಜೋಡಿಸಿ ಉಸಿರನ್ನು ಬಿಡುತ್ತಾ ನಿಧಾನವಾಗಿ ಎಡಕಾಲಿನಲ್ಲಿ ನಿಂತುಕೊಂಡು ದೇಹವನ್ನು ಮುಂದಕ್ಕೆ ತನ್ನಿ. ಬಲಗಾಲನ್ನು ಹಿಂದಕ್ಕೆ ನೇರವಾಗಿ ಚಾಚಿ. ಈ ಸ್ಥಿತಿಯಲ್ಲಿ ಸಾಮಾನ್ಯ ಉಸಿರಾಟ ಮಾಡಿಕೊಂಡು ಇಪ್ಪತ್ತರಿಂದ ಮೂವತ್ತು ಸೆಕೆಂಡುಗಳ ಕಾಲ ನಿಲ್ಲಿ. ಪುನಃ ಇನ್ನೊಂದು ಬದಿಯಿಂದ ಅಭ್ಯಾಸ ಮಾಡಿ. ಅನಂತರ ವಿಶ್ರಾಂತಿ.

ಉಪಯೋಗಗಳು: ಸಮತೋಲನ ಸ್ಥಿತಿ ಕಾಪಾಡುವಂತಹ ವೀರಭದ್ರಾಸನದಿಂದ ಕಿಬ್ಬೊಟ್ಟೆಗೆ ಸಾಕಷ್ಟು ವ್ಯಾಯಾಮ ದೊರೆಯುತ್ತದೆ. ಕಾಲುಗಳ ಮಾಂಸಖಂಡಗಳು ಪಳಗುತ್ತವೆ. ಓಟದ ಪಂದ್ಯಗಳಲ್ಲಿ ಭಾಗವಹಿಸುವವರಿಗೆ ಈ ಆಸನ ಬಹಳ ಸಹಕಾರಿ. ಬೆನ್ನಿಗೆ ವಿಶೇಷವಾದ ವ್ಯಾಯಾಮ ದೊರೆಯುತ್ತದೆ.

ವಿ.ಸೂ: ಈ ಭಂಗಿಯಲ್ಲಿ ಮೊಣಕಾಲನ್ನು ಬಾಗಿಸಬಾರದು. ತೀವ್ರ ರಕ್ತದೊತ್ತಡ ಇದ್ದವರು ಈ ಆಸನ ಅಭ್ಯಸಿಸುವುದು ಬೇಡ. ಗುರುವಿನ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ.

-‘ಯೋಗರತ್ನ’ ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್‌ಪೆಕ್ಟರ್
ಅಂತರರಾಷ್ಟ್ರೀಯ ಯೋಗ ತೀರ್ಪುಗಾರರು
“ಪಾರಿಜಾತ”, ಮನೆ ಸಂಖ್ಯೆ 2-72:5
ಬಿಷಪ್ ಕಂಪೌಂಡು, ಯೆಯ್ಯಾಡಿ ಪದವು
ಕೊಂಚಾಡಿ ಪೋಸ್ಟ್, ಮಂಗಳೂರು -575 008
9448394987

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಮೌಂಟ್‌ ಕಾರ್ಮೆಲ್‌ ಶಾಲೆಯಲ್ಲಿ ಶಿಕ್ಷಕರಿಗಾಗಿ ಯೋಗ, ಪ್ರಾಣಾಯಾಮ, ಧ್ಯಾನ ತರಬೇತಿ

Upayuktha

ಸುಯೋಗ- ಯೋಗಾಭ್ಯಾಸ ಮಾಲಿಕೆ 17-ಅರ್ಧ ಚಂದ್ರಾಸನ (Ardha Chandrasana)

Upayuktha

ಸುಯೋಗ-ಯೋಗಾಸನ ಮಾಲಿಕೆ 8- ಉತ್ಕಟಾಸನ (Uthkatasana)

Upayuktha