ಯೋಗ- ವ್ಯಾಯಾಮ ಲೈಫ್‌ ಸ್ಟೈಲ್- ಆರೋಗ್ಯ

ಸುಯೋಗ- ಯೋಗಾಭ್ಯಾಸ ಮಾಲಿಕೆ-15- ಉತ್ಥಿತ ಪಾರ್ಶ್ವಕೋಣಾಸನ (Uthitha Parshwakonasana)

ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗಾಸನ ಮಾಲಿಕೆ
ಕಾಲಿನ ನರಗಳ ಸೆಳೆತ ನಿಯಂತ್ರಣಕ್ಕೆ ಉತ್ಥಿತ ಪಾರ್ಶ್ವಕೋಣಾಸನ ಉತ್ತಮವಾಗಿದೆ.

ಈ ಭಂಗಿಯಲ್ಲಿ ದೇಹವನ್ನು ಪಾರ್ಶ್ವವಾಗಿ ಬಾಗಿಸುವುದಾಗಿದೆ.

ಅಭ್ಯಾಸ ಕ್ರಮ:
ಪ್ರಥಮವಾಗಿ ತಾಡಾಸನದ ಭಂಗಿಯಲ್ಲಿ ನಿಲ್ಲಬೇಕು. ಆಮೇಲೆ ಕಾಲುಗಳನ್ನು ನಾಲ್ಕು ಅಡಿಗಳಷ್ಟು ಅಗಲಿಸಿ. ಕೈಗಳು ನೇರವಾಗಿಸಿ. ಆಮೇಲೆ ಬಲಕಾಲನ್ನು ಬಲಬದಿಗೆ ತೊಂಬತ್ತು ಡಿಗ್ರಿಗಳಷ್ಟು ತಿರುಗಿಸಿ. ನಂತರ ಉಸಿರನ್ನು ಬಿಡುತ್ತಾ ಬಲಮಂಡಿಯನ್ನು ಮುಂದಕ್ಕೆ ಬಾಗಿಸಿ. ಎಡಕಾಲು ಹಿಂದಕ್ಕೆ ಇರಲಿ. ಅನಂತರ ಬಲಕೈಯನ್ನು ಬಲಕಾಲಿನ ಕಿರುಬೆರಳಿನ ಪಕ್ಕದಲ್ಲಿ ಊರಿ. ಎಡಕೈಯನ್ನು ಎಡಕಿವಿಯ ಮೇಲೆ ತಂದು, ಕೈಯನ್ನು ನೇರ ಮಾಡಿ ಸುಮಾರು 20 ಸೆಕೆಂಡುಗಳ ಕಾಲ ಉಸಿರಾಟ ನಡೆಸುತ್ತಾ ಇದ್ದು ಅನಂತರ ವಿಶ್ರಮಿಸಿ. ಎಡಬದಿಯಲ್ಲಿಯೂ ಇದೇ ರೀತಿ ಅಭ್ಯಾಸ ಮಾಡಿರಿ. ಅನಂತರ ವಿಶ್ರಾಂತಿ.

ಉಪಯೋಗಗಳು: ಉತ್ಥಿತ ಪಾರ್ಶ್ವಕೋಣಾಸನವನ್ನು ಅಭ್ಯಾಸ ಮಾಡುವುದರಿಂದ ಕಾಲಿನ ನರಗಳ ಸೆಳೆತ, ಮಂಡಿನೋವು ಹಾಗೂ ವಾತ ಇತ್ಯಾದಿಗಳು ನಿಯಂತ್ರಣವಾಗುತ್ತದೆ. ಮಲಬದ್ಧತೆಯ ನಿಯಂತ್ರಣಕ್ಕೆ ತುಂಬಾ ಸಹಕಾರಿಯಾಗುತ್ತದೆ. ಜೀರ್ಣ ಶಕ್ತಿಯು ಹೆಚ್ಚುತ್ತದೆ.

-ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ,
ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್‌ಪೆಕ್ಟರ್, ಅಂತರರಾಷ್ಟೀಯ ಯೋಗ ತೀರ್ಪುಗಾರರು,
“ಪಾರಿಜಾತ”, ಮನೆ ಸಂಖ್ಯೆ 2-72:5, ಬಿಷಪ್ ಕಂಪೌಂಡು,
ಕೊಂಚಾಡಿ, ಯೆಯ್ಯಾಡಿ ಪದವು,
ಮಂಗಳೂರು-575 008
ಮೊಬೈಲ್: 9448394987

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಸುಯೋಗ- ಯೋಗಾಸನ ಮಾಲಿಕೆ 9- ತ್ರಿಕೋಣಾಸನ (Thrikonasana)

Upayuktha

ಯೋಗ ಚಕ್ರಗಳು ಮತ್ತು ವರ್ಣ ಚಿಕಿತ್ಸೆ: ವಿಶೇಷ ಉಪನ್ಯಾಸ

Upayuktha

ಸುಯೋಗ: ಪ್ರಸ್ತಾವನೆ (ಭಾಗ 2)- ಯೋಗದ ವ್ಯಾಖ್ಯಾನಗಳು

Upayuktha