ಯೋಗ- ವ್ಯಾಯಾಮ ಲೈಫ್‌ ಸ್ಟೈಲ್- ಆರೋಗ್ಯ

ಸುಯೋಗ- ಯೋಗಾಭ್ಯಾಸ ಮಾಲಿಕೆ 19: ಗರುಡಾಸನ (Garudasana)

ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗಾಸನ ಮಾಲಿಕೆ
ಕಾಲಿನ ಸೆಳೆತ ಹಾಗೂ ನೋವನ್ನು ಪರಿಹರಿಸಲು ಗರುಡಾಸನ ಸಹಕಾರಿಯಾಗುತ್ತದೆ

ಈ ಆಸನದಲ್ಲಿ ಇಡೀ ದೇಹದ ತೂಕವು ಕೇವಲ ಒಂದು ಕಾಲಿನ ಮೇಲೆ ಸಮತೋಲನವಾಗಿರುತ್ತದೆ. ಈ ಆಸನಕ್ಕೆ ಗರುಡ ಪಕ್ಷಿಯ ಹೆಸರನ್ನು ಇಡಲಾಗಿದೆ.

ಅಭ್ಯಾಸ ಕ್ರಮ:
ಪ್ರಥಮವಾಗಿ ತಾಡಾಸನದಲ್ಲಿ ನೆಲೆಸಿ. ಆನಂತರ ಬಲಮಂಡಿಯನ್ನು ಬಾಗಿಸಿ ಎಡಕಾಲನ್ನು ಬಲಮಂಡಿಯ ಹಿಂಭಾಗಕ್ಕೆ ತನ್ನಿ. ಬಳ್ಳಿ ಮರವನ್ನು ಸುತ್ತುವಂತೆ. ಆಮೇಲೆ ಮೊಣಕೈಗಳನ್ನು ಪರಸ್ಪರ ಹೆಣೆದು ಎದೆಯ ಮಟ್ಟಕ್ಕೆ ತನ್ನಿ. ಈ ಸ್ಥಿತಿಯಲ್ಲಿ ಇಪ್ಪತ್ತು ಸೆಕೆಂಡು ಸಮ ಉಸಿರಾಟ. ಹಾಗೆ ಇನ್ನೊಂದು ಬದಿಯೂ ಅಭ್ಯಾಸ ಮಾಡಿ.

ಉಪಯೋಗಗಳು: ಇದರಲ್ಲಿ ಮುಖ್ಯವಾಗಿ ಕಾಲಿನ ಸೆಳೆತ ಹಾಗೂ ನೋವನ್ನು ಪರಿಹರಿಸಲು ಗರುಡಾಸನ ಸಹಕಾರಿಯಾಗುತ್ತದೆ. ತೊಡೆಗಳ ಭಾಗಕ್ಕೆ ಉತ್ತಮವಾದ ವ್ಯಾಯಾಮ ದೊರೆತು ಸೆಳೆತ (Cramps) ಬಾರದಂತೆ ತಡೆಯಲು ಸಹಕಾರಿ. ತೋಳುಗಳ ಮತ್ತು ಭುಜಗಳ ಪೆಡಸುತನ (Stiffness) ನಿಯಂತ್ರಣವಾಗುತ್ತದೆ.

ವಿಸೂ: ಗರ್ಭಿಣಿ ಸ್ತ್ರೀಯರು ಆಸನ ಮಾಡುವುದು ಬೇಡ. ಭುಜ, ಮೊಣಕಾಲು, ಪಾದದ ಗಾಯ ಇದ್ದವರು, ಬೊಜ್ಜಿನ ಸಮಸ್ಯೆ ಇದ್ದವರು ಅಧಿಕ ತಲೆನೋವು, ಅಧಿಕ ಯಾ ಕಡಿಮೆ ರಕ್ತದೊತ್ತಡ, ಅಸ್ತಮಾ ತೊಂದರೆ ಇದ್ದವರು ಈ ಆಸನ ಅಭ್ಯಾಸ ಮಾಡುವುದು ಬೇಡ.

-ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ,
ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್‌ಪೆಕ್ಟರ್, ಅಂತರರಾಷ್ಟ್ರೀಯ ಯೋಗ ತೀರ್ಪುಗಾರರು,
‘ಪಾರಿಜಾತ’, ಮನೆ ಸಂಖ್ಯೆ 2-72:5, ಬಿಷಪ್ ಕಂಪೌಂಡು,
(ಪಿ.ಓ) ಕೊಂಚಾಡಿ, ಯೆಯ್ಯಾಡಿ ಪದವು,
ಮಂಗಳೂರು-575 008
ಮೊಬೈಲ್ ನಂಬ್ರ: 9448394987

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ವಿವೇಕಾನಂದ ಎನ್‍ಎಸ್‍ಎಸ್‍ನಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

Upayuktha

ಸುಯೋಗ-ಯೋಗಾಸನ ಮಾಲಿಕೆ-5: ಉತ್ಥಾನಾಸನ (Uthanasana)

Upayuktha

ಅಷ್ಟಾಂಗ ಯೋಗ ಸಾಧನಾ ಮಾರ್ಗ- (ಲೌಕಿಕತೆಯೂ ಆಧ್ಯಾತ್ಮಿಕತೆಯಾಗುವ ಪರಿ) ಭಾಗ- 2

Upayuktha