ಯೋಗ- ವ್ಯಾಯಾಮ ಲೈಫ್‌ ಸ್ಟೈಲ್- ಆರೋಗ್ಯ

ಸುಯೋಗ-ಯೋಗಾಸನ ಮಾಲಿಕೆ 7: ಕಟಿ ಚಕ್ರಾಸನ (Kati Chakrasana)

ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗಾಸನ ಮಾಲಿಕೆ
ಬೆನ್ನು ಮೂಳೆಯು ಬಲಗೊಳ್ಳುತ್ತದೆ. ಸೊಂಟಕ್ಕೆ ಉತ್ತಮ ತಿರುಚುವಿಕೆಯ ವ್ಯಾಯಾಮ ದೊರಕುತ್ತದೆ

ಕಟಿ, ಎಂದರೆ ಸೊಂಟ ಚಕ್ರ ಎಂದರೆ ಉರುಟು ಯಾ ತಿರುಗಿಸುವುದು ಈ ಆಸನದಲ್ಲಿ ಸೊಂಟವನ್ನು ತಿರುಗಿಸುವುದು. (ಸಾಧ್ಯವಾದಷ್ಟು). ಬೆನ್ನು ಹುರಿಗೆ ತಿರಿಗಿಸುವ ಆಸನ ಅಭ್ಯಾಸ ಮಾಡಿದ್ದಾಗ ಸ್ನಾಯುಗಳಿಗೆ ಉತ್ತಮ ವ್ಯಾಮಾಮ ಸಿಗುತ್ತದೆ. ಬೆನ್ನು ಹುರಿಯ ನರಗಳಿಗೆ ಚೈತನ್ಯ ದೊರಕುತ್ತದೆ.

ಅಭ್ಯಾಸ ಕ್ರಮ:
ಪ್ರಥಮವಾಗಿ ಜಮಖಾನ ಹಾಸಿದ ನೆಲದ ಮೇಲೆ ತಾಡಾಸನದಲ್ಲಿ ನಿಲ್ಲಿ. ಅನಂತರ ಕಾಲುಗಳಲ್ಲಿ ಸ್ವಲ್ಪ ಅಂತರವಿರಿಸಿ. (ಸುಮಾರು ಎರಡು ಅಡಿ)
ಆಮೇಲೆ ಬಲ ಕೈಯನ್ನು ಸೊಂಟಕ್ಕೆ ಸುತ್ತಿ ಬಳಸಿ. ಎಡ ಕೈಯನ್ನು ಭುಜದ ಮೇಲೆ ಇಡಿ. ಎಡ ಕೈಯನ್ನು ಭುಜದ ಮೇಲೆ ಇಡಿ. ಅನಂತರ ಉಸಿರನ್ನು ಬಿಡುತ್ತಾ ಎಡ ಬದಿಗೆ ದೇಹವನ್ನು ತಿರುಗಿಸಿ. ಈ ಸ್ಥಿತಿಯಲ್ಲಿ 5 ರಿಂದ 10 ಸಾಮಾನ್ಯ ಉಸಿರಾಟ ನಡೆಸಿ. ಇಲ್ಲಿ ಭುಜಗಳು ಸಮಾನಾಂತರವಾಗಿರಬೇಕು. ಕಾಲಿನ ಪಾದ ಮೇಲಕ್ಕೆ ಬರಬಾರದು. ಈ ಆಸನ ಅಭ್ಯಾಸ ಮಾಡುವಾಗ ದೇಹವನ್ನು ಬಿಗಿ ಗೊಳಿಸ ಬಾರದು. ಹಾಗೇ ಈ ಆಸನವನ್ನು ಇನ್ನೊಂದು ಬದಿಯಲ್ಲಿಯೂ ಅಭ್ಯಾಸ ಮಾಡಿ. ಸುಮಾರು 3 ರಿಂದ 4 ಬಾರಿ ಅಭ್ಯಾಸ ಮಾಡಬಹುದು.

ಪ್ರಯೋಜನಗಳು:
ಬೆನ್ನು ಮೂಳೆಯು ಬಲಗೊಳ್ಳುತ್ತದೆ. ಸೊಂಟಕ್ಕೆ ಉತ್ತಮ ತಿರುಚುವಿಕೆಯ ವ್ಯಾಯಾಮ ದೊರಕುತ್ತದೆ. ಸೊಂಟನೋವು, ಬೆನ್ನು ನೋವು ನಿಯಂತ್ರಣಕ್ಕೆ ಈ ಆಸನ ತುಂಬಾ ಸಹಕಾರಿಯಾಗಿದೆ. ಸೊಂಟದ ಕೊಬ್ಬು ಕರಗುತ್ತದೆ ಕುತ್ತಿಗೆ, ಹೆಗಲುಗಳು ಬಲಿಷ್ಠಗೊಳ್ಳತ್ತದೆ. ಕರುಳಿನ ದೋಷ ನಿವಾರಣೆಗೆ ಸಹಕಾರಿ ಅಜೀರ್ಣ ತೊಂದರೆ ನಿವಾರಿಸುವಲ್ಲಿ ಈ ಆಸನ ಉಪಯುಕ್ತವಾಗಿದೆ.

ಅಸ್ತಮಾ ಪೀಡಿತರಿಗೆ ಈ ಆಸನ ಸಹಾಯವಾಗುತ್ತದೆ. ಮಧುಮೇಹದ ನಿಯಂತ್ರಣಕ್ಕೂ ಈ ಆಸನ ಉಪಕಾರಿಯಾಗಿದೆ. ಆದರೆ ತೀವ್ರ ಬೆನ್ನು-ಸೊಂಟ ನೋವು ಇದ್ದವರು ಅಭ್ಯಾಸ ಮಾಡುವುದು ಬೇಡ. ಗರ್ಭಿಣಿ ಸ್ತ್ರೀಯರು ಈ ಆಸನ ಅಭ್ಯಾಸ ಮಾಡಬಾರದು.

-ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ
2-72/5, ಪಾರಿಜಾತ
ಬಿಷಪ್ ಕಂಪೌಂಡ್, ಕೊಂಚಾಡಿ ಅಂಚೆ,
ಯೆಯ್ಯಾಡಿ ಪದವು, ಮಂಗಳೂರು-575008.
ಮೊಬೈಲ್ : 9448394987

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಹಲ್ಲಿಗೂ ಬಂತು ಹಚ್ಚೆ: ಫ್ಯಾಷನ್ನಿನ ಹೊಸ ರೂಪ

Upayuktha

ಯೋಗ ಚಕ್ರಗಳು ಮತ್ತು ವರ್ಣ ಚಿಕಿತ್ಸೆ: ವಿಶೇಷ ಉಪನ್ಯಾಸ

Upayuktha

ಲಾಕ್‌ಡೌನ್: ಒಂದು ವಾರ ಕಳೆಯಿತು, ಇನ್ನೂ 2 ವಾರ ಇದೆ; ಏನಪ್ಪಾ ಮಾಡೋದು…?

Upayuktha