ಯೋಗ- ವ್ಯಾಯಾಮ ಲೈಫ್‌ ಸ್ಟೈಲ್- ಆರೋಗ್ಯ

ಸುಯೋಗ-ಯೋಗಾಸನ ಮಾಲಿಕೆ 8- ಉತ್ಕಟಾಸನ (Uthkatasana)

ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗಾಸನ ಮಾಲಿಕೆ
ಕಾಲುಗಳ ಸಾಮಾನ್ಯ ನ್ಯೂನತೆ ಸರಿಪಡಿಸಲು ಸಹಾಯವಾಗುತ್ತದೆ, ಕಾಲಿನ ಮಾಂಸಖಂಡಗಳು ಬಲಿಷ್ಠವಾಗುತ್ತವೆ.

ಉತ್ಕಟವೆಂದರೆ ಬಲವತ್ತರವಾಗಿ ಕುರ್ಚಿಯಲ್ಲಿ ಕುಳಿತಂತೆ ತೋರುವ ಭಂಗಿಯಾಗಿದೆ. (Sitting Without Chair)

ಅಭ್ಯಾಸ ಕ್ರಮ:
ತಾಡಾಸನದಲ್ಲಿ ಇದ್ದು ಉಸಿರನ್ನು ತೆಗೆದುಕೊಂಡು ಕೈಗಳನ್ನು ತಲೆಯ ಮೇಲೆ ನೇರವಾಗಿ ಎತ್ತಿ ಹಿಡಿದು ಅಂಗೈಗಳೆರಡನ್ನು ಜೋಡಿಸುತ್ತಾ ಮೊಣಕೈಗಳನ್ನು ನೇರಮಾಡಿ ಎಳೆದು ಕೊಳ್ಳಿ. ಉಸಿರನ್ನು ಬಿಡುತ್ತಾ ಮಂಡಿಗಳನ್ನು ಬಾಗಿಸಿ ಅರ್ಧ ಕುಳಿತುಕೊಳ್ಳುವ ಭಂಗಿಯಾಗಬೇಕು. ಕಾಲ್ಪನಿಕ ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ಮಂಡಿಗಳನ್ನು ಬಗ್ಗಿಸುತ್ತಾ ಎದೆ ಬಾಗವನ್ನು ತುಸು ಮುಂದಕ್ಕೆ ಬಾಗಿಸಿ. ಈಗ ಶರೀರದ ಹೆಚ್ಚಿನ ಭಾರವೆಲ್ಲ ಪಾದದ ಮುಂಭಾಗದಲ್ಲಿರುತ್ತದೆ. ದೃಷ್ಟಿ ನೇರ, ತಲೆ ನೇರವಾಗಿರಲಿ. (ಚಿತ್ರದಲ್ಲಿರುವಂತೆ) ಸಾಮಾನ್ಯ 1/2 ನಿಮಿಷ ಸಮ ಉಸಿರಾಟದೊಂದಿಗೆ ಈ ಸ್ಥಿತಿಯಲ್ಲಿದ್ದು ನಂತರ 2 ನಿಮಿಷ ವಿಶ್ರಾಂತಿ.

ಉಪಯೋಗಗಳು:
ಉತ್ಕಟಾಸನ ಅಭ್ಯಾಸ ಮಾಡುವುದರಿಂದ ಕಾಲುಗಳ ಸಾಮಾನ್ಯ ನ್ಯೂನತೆ ಸರಿಪಡಿಸಲು ಸಹಾಯವಾಗುತ್ತದೆ, ಕಾಲಿನ ಮಾಂಸಖಂಡಗಳು ಬಲಿಷ್ಠವಾಗುತ್ತವೆ. ಭುಜಗಳ ಬಿಗಿತ ನಿವಾರಣೆಯಾಗಿ, ಎದೆ, ಬೆನ್ನು, ಕಿಬ್ಬೊಟ್ಟೆಗೆ ಮತ್ತು ಸೊಂಟಕ್ಕೆ ಮೃದುವಾದ ವ್ಯಾಯಾಮ ದೊರಕುತ್ತದೆ. ವಾಕಿಂಗ್‍ನ ಉಪಯೋಗ ಈ ಆಸನದಲ್ಲಿ ದೊರಕುತ್ತದೆ. ಕಚೇರಿಗಳಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಿಗೆ ಈ ಆಸನದಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು.

ಗಮನಿಸಿ: ತೀವ್ರ ಮಂಡಿ ನೋವು ಇದ್ದವರು ಈ ಆಸನ ಅಭ್ಯಾಸ ನಡೆಸುವುದು ಬೇಡ.

-ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ
2-72/5, ಪಾರಿಜಾತ
ಬಿಷಪ್ ಕಂಪೌಂಡ್, ಕೊಂಚಾಡಿ ಅಂಚೆ,
ಯೆಯ್ಯಾಡಿ ಪದವು, ಮಂಗಳೂರು-575008.
ಮೊಬೈಲ್ : 9448394987

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸುಯೋಗ: ಪ್ರಸ್ತಾವನೆ- ಭಾಗ-3: ಅಷ್ಟಾಂಗ ಯೋಗ

Upayuktha

ಯೋಗ ಚಕ್ರಗಳು ಮತ್ತು ವರ್ಣ ಚಿಕಿತ್ಸೆ: ವಿಶೇಷ ಉಪನ್ಯಾಸ

Upayuktha

ಶಾರದಾ ಆಯುರ್‌ಧಾಮದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬೆಳಗ್ಗೆ 7ರಿಂದ 8ರ ವರೆಗೆ

Upayuktha