ನಗರ ಸ್ಥಳೀಯ

ಉಳ್ಳಾಲ ಬೀಚ್‍ನಲ್ಲಿ ಯೋಗ ಮತ್ತು ಸ್ವಚ್ಚತಾ ಅಭಿಯಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಉಳ್ಳಾಲ ಘಟಕ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರ ರಕ್ಷಣಾ ಪಡೆಯ ಸಂಯುಕ್ತ ಆಶ್ರಯದಲ್ಲಿ ಇಂದು ಉಳ್ಳಾಲ ಬೀಚ್‍ನ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮತ್ತು ಪ್ರಾಣಾಯಾಮ, ಯೋಗ ಶಿಬಿರ ಕಾರ್ಯಕ್ರಮವು ನಡೆಯಿತು.

ಉಳ್ಳಾಲ ಕಡಲತೀರದಲ್ಲಿ ಬೆಳಗ್ಗೆ 7.00 ರಿಂದ 8.30 ರವರೆಗೆ ಸಂಪನ್ಮೂಲ ವ್ಯಕ್ತಿಯಾದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಇವರ ನೇತೃತ್ವದಲ್ಲಿ ಪ್ರಾಣಾಯಾಮ ಮತ್ತು ಯೋಗ ಶಿಬಿರ ಕಾರ್ಯಕ್ರಮ ನಡೆಯಿತು.

ಬೆಳಗ್ಗೆ 9.00 ರಿಂದ 10.00 ರವರೆಗೆ ಸ್ವಚ್ಛತಾ ಅಭಿಯಾನವು ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆಯ ಚೀಫ್‍ ವಾರ್ಡನ್ ಡಾ|| ಮುರಲೀಮೋಹನ್ ಚೂಂತಾರು ಅವರ ನೇತೃತ್ವದಲ್ಲಿ ಸುಮಾರು 35 ಮಂದಿ ಈ ಶಿಬಿರದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಗೃಹರಕ್ಷಕರಾದ ಸುನಿಲ್ ಕುಮಾರ್, ದಿವಾಕರ್, ಸುನಿಲ್, ದುಶ್ಯಂತ್ ರೈ ಹಾಗೂ ಪೌರರಕ್ಷಣಾ ತಂಡದ ನಿತಿನ್, ಸಂತೋಷ್, ಅಂಜನ್ ಮತ್ತು ಪೌರರಕ್ಷಣಾ ಕಾರ್ಯಕರ್ತರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

‘ಕರಾವಳಿಯಲ್ಲಿ ಯಕ್ಷಗಾನದಿಂದ ಕನ್ನಡದ ಅಸ್ಮಿತೆ’: ಕಲ್ಕೂರ

Upayuktha

ಪುಂಜಾಲಕಟ್ಟೆ ಸ.ಪ್ರ.ದ. ಕಾಲೇಜಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ನಾಟಕ, ಉಪನ್ಯಾಸ ಡಿ.19ಕ್ಕೆ

Upayuktha

‘ಇಂಪ್ರಿಂಟ್-2020’ ರಾಷ್ಟ್ರ ಮಟ್ಟದ ವಿಜ್ಞಾನ ಉತ್ಸವ: ಆಳ್ವಾಸ್ ವಿದ್ಯಾರ್ಥಿಗಳಿಗೆ ಚಾಂಪಿಯನ್ ಪಟ್ಟ

Upayuktha

Leave a Comment