ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಮನುಷ್ಯರ ನಡುವೆ ಸಿಂಹದಂತಿದ್ದ ವ್ಯಕ್ತಿ ಸ್ವಾಮಿ ವಿವೇಕಾನಂದರು: ಡಾ. ರೋಹಿಣಾಕ್ಷ ಶಿರ್ಲಾಲು

ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಎನ್ಎಸ್‌ಎಸ್ ಘಟಕದಿಂದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

ಉಜಿರೆ: “ಸ್ವಾಮಿ ವಿವೇಕಾನಂದರು ವಿಶ್ವದ ಯುವಕರ ಸ್ಫೂರ್ತಿ. ಬಾಲಗಂಗಾಧರ ತಿಲಕ್, ಮಹಾತ್ಮಾ ಗಾಂಧಿ ಮುಂತಾದ ಸ್ವಾತಂತ್ರ್ಯ ಸೇನಾನಿಗಳು ಸ್ವಾಮಿ ವಿವೇಕಾನಂದರಿಂದ ಪ್ರೇರಿತರಾದವರು. ಭಾರತದ ಸಾಂಸ್ಕೃತಿಕ ಹಿರಿಮೆಯನ್ನು ಅರಿತು ಆಧ್ಯಾತ್ಮಿಕ ಆಳವನ್ನು ತಿಳಿದವರು. ವಿಶ್ವದ ಮನುಷ್ಯರ ನಡುವೆ ಸಿಂಹದಂತಿದ್ದ ವ್ಯಕ್ತಿ ವಿವೇಕಾನಂದರು” ಎಂದು ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿದ್ಯಾಲಯದ ಜಾನಪದ ಶಾಸ್ತ್ರ ಮತ್ತು ಬುಡಕಟ್ಟು ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಡಾ.ರೋಹಿಣಾಕ್ಷ ಶಿರ್ಲಾಲು ಹೇಳಿದರು.

ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆಯಂದು ಎಸ್.ಡಿ.ಎಂ ಕಾಲೇಜಿನ ಎನ್.ಎಸ್.ಎಸ್ ಘಟಕ ವರ್ಚುವಲ್ ತಂತ್ರಜ್ಞಾನದ ಮೂಲಕ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಇವರು ಸ್ವಯಂ ಸೇವಕರನ್ನುದ್ದೇಶಿಸಿ ಮಾತನಾಡಿದರು.

“ಸ್ವಾಮಿ ವಿವೇಕಾನಂದರು ಸಾಮಾಜಿಕ ನೇತಾರ. ಸಂಸ್ಕೃತಿ, ಪರಂಪರೆ, ವೇದಗಳ ಸಾರ. ಅವರ ಜೀವನ ಶೈಲಿಯೇ ಅವರ ಬದುಕಿನ ನೆಲೆ. ಮಾನವನಲ್ಲಿರುವ ದಿವ್ಯತ್ವವನ್ನು ಪ್ರಕಟಪಡಿಸುವ ಶಿಕ್ಷಣವೇ ನಿಜವಾದ ಶಿಕ್ಷಣ. ಎಂಬುದು ಸ್ವಾಮಿ ವಿವೇಕಾನಂದರ ಶಿಕ್ಷಣದ ಕುರಿತಾಗಿನ ಚಿಂತನೆಯಾಗಿತ್ತು. ಇಂದಿನ ಯುವ ಜನತೆ ಅವರನ್ನು ಮಾದರಿಯಾಗಿಟ್ಟುಕೊಂಡು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕು. ಸ್ವಾಮಿ ವಿವೇಕಾನಂದರ ಸಂದೇಶವನ್ನು ಪಾಲಿಸಿ, ಅದನ್ನು ಎಲ್ಲೆಡೆ ಪಸರಿಸುವ ಕೆಲಸ ಮಾಡಬೇಕು.” ಎಂದು ನುಡಿದರು.

“ಸ್ವಾಮಿ ವಿವೇಕಾನಂದರದು ಕಾಲಾತೀತವಾದ ವ್ಯಕ್ತಿತ್ವ. ಮಾತು, ಯೋಚನೆ, ಕೃತಿಗಳ ನಡುವೆ ಅಂತರವಿಲ್ಲದಾಗ ಮನುಷ್ಯರು ಮಹಾತ್ಮರೆನಿಸಿಕೊಳ್ಳುತ್ತಾರೆ, ಎಂಬ ಮಾತಿಗೆ ನಿದರ್ಶನ. ಇಂದು ಅವರು ವ್ಯಕ್ತಿಯಾಗಿ ಇಲ್ಲದಿದ್ದರೂ ವ್ಯಕ್ತಿತ್ವವಾಗಿ ಯುವಜನರ ಎದೆಯಲ್ಲಿ ನೆಲೆಸಿದ್ದಾರೆ. ದೇಶ ಕಟ್ಟಲು ಅವರ ಆದರ್ಶಗಳು ಸ್ಪೂರ್ತಿಯಾಗಲಿ.” ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಸತೀಶ್ಚಂದ್ರ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಎನ್ಎಸ್ಎಸ್ ಯೋಜನಾಧಿಕಾರಿಗಳಾದ ಡಾ. ಕೆ.ಎಸ್ ಲಕ್ಷ್ಮೀನಾರಾಯಣ್, ದೀಪಾ.ಆರ್.ಪಿ ಹಾಗೂ ಇತರೆ ಉಪನ್ಯಾಸಕರು ಉಪಸ್ಥಿತರಿದ್ದರು.

ಸ್ವಯಂ ಸೇವಕಿ ವಿನುತಾ ನಿರೂಪಿಸಿ, ಸ್ವಾಗತಿಸಿದರು.ಅರ್ಚನಾ ಅತಿಥಿ ಪರಿಚಯ ಮಾಡಿದರು. ಸುರಕ್ಷಾ ವಂದಿಸಿದರು.

ವರದಿ: ಇಂಚರ.ಜಿ.ಜಿ
ದ್ವಿತೀಯ ಪತ್ರಿಕೋದ್ಯಮ ವಿಭಾಗ
ಎಸ್‌ಡಿ‌ಎಂ ಕಾಲೇಜು ಉಜಿರೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ತಣ್ಣೀರುಬಾವಿ ಬೀಚ್‌ನಲ್ಲಿ ಕಡಲ ತೀರ ಸ್ವಚ್ಛತೆ, ಯೋಗ ಶಿಬಿರ

Upayuktha

‘ಅಮೃತ ಪ್ರಕಾಶ’ ವತಿಯಿಂದ 29ನೇ ಕೃತಿ- ಹನಿಗವನ ಸಂಕಲನ ‘ತುಡಿತ’ ಬಿಡುಗಡೆ

Upayuktha

ಆಳ್ವಾಸ್ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಂದ ಮಂಗಳೂರು ಎಪಿಎಂಸಿ ಕ್ಷೇತ್ರ ಭೇಟಿ

Upayuktha