ಕ್ಷೇತ್ರಗಳ ವಿಶೇಷ ಗ್ರಾಮಾಂತರ ಸ್ಥಳೀಯ

ಉಡುಪಿಯಲ್ಲಿ ಸ್ವರ್ಣಾರತಿ ಅಪೂರ್ವ ಕಾರ್ಯಕ್ರಮ; ಸ್ವರ್ಣೆಗೆ ಆರತಿ ಬೆಳಗಿದ ಪೇಜಾವರ ಶ್ರೀಗಳು

ಉಡುಪಿ: ಮಂಗಳವಾರ ಉಡುಪಿಯ ಪೆರಂಪಳ್ಳಿ ಸಮೀಪ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದ ಬಳಿಯ ಕೃಷ್ಣಾಂಗಾರಕ ಸ್ನಾನಘಟ್ಟದ ಜೀವನದಿ ಸುವರ್ಣೆಯ ತೀರದಲ್ಲಿ ಅಪೂರ್ವ ಕಾರ್ಯಕ್ರಮ ನಡೆಯಿತು.

ಸ್ವರ್ಣೆಯ ರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಘಟಕದ ಚಿಂತನೆಯೊಂದಿಗೆ ನಡೆದ ಸ್ವರ್ಣಾರತಿ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿಶೇಷ ಆರತಿಗಳನ್ನು ಬೆಳಗಿ ಸ್ವರ್ಣೆಯ ರಕ್ಷಣೆಗೆ ಕಂಕಣಬದ್ಧರಾಗುವಂತೆ ಉಡುಪಿಯ ಸಮಸ್ತ ಜನತೆಗೆ ಕರೆ ನೀಡಿದರು.‌

ಶಾಸಕ ರಘುಪತಿ ಭಟ್ ನಗರಸಭಾದ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ದೇವಳದ ವ್ಯವಸ್ಥಾಪಕ ಕೃಷ್ಣಮೂರ್ತಿ ಶಿವತ್ತಾಯ, ಅರ್ಚಕ ನವೀನ್ ಶಿವತ್ತಾಯ, ಇಂಜಿನಿಯರ್ ರಮೇಶ್ ರಾವ್ ಎಂ ರಘುರಾಮಾಚಾರ್ಯ, ನಗರಸಭಾಸದಸ್ಯರು ಹಾಗೂ ನೂರಾರು ನಾಗರಿಕರು ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು, ಪ್ರಭಾಕರ ಭಟ್, ಪ್ರಶಾಂತ್ ಭಟ್ ಶಶಾಂಕ್ ಶಿವತ್ತಾಯ, ವಾಸುದೇವ ಭಟ್, ನಾಗರಾಜ ಶಿವತ್ತಾಯ, ಹರಿಕೃಷ್ಣ ಶಿವತ್ತಾಯ, ಶಂಕರ್ ಕುಲಾಲ್, ಗಣಪತಿ ಭಟ್, ಶಾಮ್ ಕುಡ್ವ, ಮೊದಲಾದವರು ವಿಶಿಷ್ಟ ಕಾರ್ಯಕ್ರಮ ಸಂಯೋಜಿಸುವಲ್ಲಿ ಸಹಕರಿಸಿದರು.

ಸ್ಥಳೀಯ ಭಜನಾ ಮಂಡಳಿಯ ಸದಸ್ಯರ ಭಜನೆ, ಯುವಕರ ಚಂಡೆವಾದನ, ತೇಲುವ ತೆಪ್ಪದಲ್ಲಿ ವಿದುಷಿ ಪವನಾ ಬಿ ಆಚಾರ್ಯರ ವೀಣಾವಾದನ, ನೂರಾರು ಸಾಲು ದೀಪಗಳು ಕಾರ್ಯಕ್ರಮದ ಆಕರ್ಷಣೆಗಳಾಗಿತ್ತು. ತಾಯಿ ಭಾರತಿಯ ಭಾವಚಿತ್ರಕ್ಕೆ ಎಲ್ಲರೂ ಪುಷ್ಪಾರ್ಚನೆಗೈದರು.

ಮುಂಜಾನೆಯಿಂದಲೇ ನೂರಾರು ಮಂದಿ ಭಕ್ತರು ಹುಬ್ಬಳ್ಳಿ ಬೆಂಗ್ಳೂರು ಮೈಸೂರು ಮಂಡ್ಯ, ಚಿತ್ತೂರು (ಆಂಧ್ರ) ಕೋಲಾರ ಪ್ರದೇಶಗಳಿಂದ ಹಾಗೂ ಸ್ಥಳೀಯರು ಪವಿತ್ರ ನದೀ ಸ್ನಾನದಲ್ಲಿ ಪಾಲ್ಗೊಂಡರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸಂಸ್ಕೃತ ಸಂಭಾಷಣಾ ಶಿಬಿರ ಸಮಾರೋಪ

Upayuktha

ಕುಂಬಳೆ: ಸಿರಿಗನ್ನಡ ವೇದಿಕೆ ಆಶ್ರಯದಲ್ಲಿ ‘ಹೇಮಂತ ಸಾಹಿತ್ಯೋತ್ಸವ’ ಜ.5ಕ್ಕೆ

Upayuktha

ಮರವೂರು ಡ್ಯಾಂನಲ್ಲಿ ಈಜಲು ಹೋದ ಎಂಜಿನಿಯರ್ ಸಾವು

Upayuktha