ಅಡುಗೆ-ಆಹಾರ

ಸವಿರುಚಿ: ಹಲಸಿನ ಹಣ್ಣಿನ ಬರ್ಫಿ

ಹಲಸಿನ ಹಣ್ಣಿನ ಬರ್ಫಿ ಮಾಡೋದು ಹೇಗೆ? ಮುಂಡಾಜೆಯ ಶ್ರೀಮತಿ ವಿದ್ಯಾ ವಝೆ ಅವರು ಇಲ್ಲಿ ತಿಳಿಸಿಕೊಟ್ಟಿದ್ದಾರೆ.

ಹಲಸಿನ ಸೀಸನ್‌ನಲ್ಲಿ ಕೆಲವೊಮ್ಮೆ ಹಲಸಿನ ಕಾಯಿಗಳು ಒಟ್ಟಿಗೇ ಮಾಗಿ ಹಣ್ಣಾಗಿ ಬಿಡುತ್ತವೆ. ಅಂತಹ ಸಂದರ್ಭದಲ್ಲಿ ಹಣ್ಣಿನ ಇಡ್ಲಿ, ಹಲಸಿನ ಗಟ್ಟಿ, ಹಲಸಿನ ಅಪ್ಪ ಮುಂತಾದ ತಿನಿಸುಗಳನ್ನು ಮಾಡಿ ಕುಟುಂಬದವರಿಗೆ, ಬಂಧು-ಬಳಗದ ಜತೆ ಹಂಚಿಕೊಂಡು ತಿನ್ನುವುದು ನಮ್ಮ ಹಳ್ಳಿ ಬದುಕಿನ ವಾಡಿಕೆ.

ಆದರೆ ಕೆಲವೊಮ್ಮೆ ಇವನ್ನೆಲ್ಲಾ ಮಾಡಿ ತಿಂದು ಬೇಜಾರಾದಾಗ, ಹಲಸಿನ ಹಣ್ಣು ಹಾಳಾಗದಂತೆ ಮೌಲ್ಯವರ್ಧನೆ ಹೇಗೆ ಮಾಡಬಹುದು…? ಎಂಬ ಚಿಂತನೆ ಕಾಡುವುದು ಸಹಜ. ಮುಂಡಾಜೆಯ ವಿದ್ಯಾ ಎಸ್ ವಝೆ ಅವರು ಹಲಸಿನ ಹಣ್ಣಿನಿಂದ ಬರ್ಫಿ ಮಾಡುವುದನ್ನು ಇಲ್ಲಿ ಹೇಳಿಕೊಟ್ಟಿದ್ದಾರೆ. ಈ ಬರ್ಫಿ ಬೇಗನೆ ಹಾಳಾಗುವುದಿಲ್ಲ. ಆದ್ದರಿಂದ ಸ್ವಲ್ಪ ದಿನಗಳ ಕಾಲ ಉಳಿದರೂ ಚಿಂತೆಯಿಲ್ಲ. ಬೇಕಾದಾಗ ಸ್ವಲ್ಪ ಸ್ವಲ್ಪವೇ ಸೇವಿಸಿ, ಬಂಧು-ಬಳಗದವರ ಜತೆ ಹಂಚಿಕೊಂಡು ತಿನ್ನಬಹುದು.

ಹಲಸಿನಹಣ್ಣಿನ ಬರ್ಫಿ.
1. ಹಲಸಿನ ಹಣ್ಣಿನ ತೊಳೆ ಗಳು
2. ತುಪ್ಪ
3. ಬೆಲ್ಲ ಅಥವಾ ಸಕ್ಕರೆ
4. ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:
ಹಲಸಿನಹಣ್ಣಿನ ಸೊಳೆಗಳನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು. ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಅದಕ್ಕೆ ರುಬ್ಬಿದ ಹಿಟ್ಟನ್ನು ಸೇರಿಸಬೇಕು ಹಾಗೂ ಸ್ವಲ್ಪ ಹೊತ್ತು ಕೈಯಾಡಿಸುತ್ತಿರಬೇಕು. ಹಲಸಿನಹಣ್ಣಿನ ಹಿಟ್ಟಿನ ಗಾತ್ರದಷ್ಟು ಬೆಲ್ಲ ಅಥವಾ ಸಕ್ಕರೆಯನ್ನು ಬೆರೆಸಿ ಪಾಕವು ಗಟ್ಟಿಯಾಗುವವರೆಗೆ ಕೈಯಾಡಿಸುತ್ತಾ ಇರಬೇಕು.

ಗಟ್ಟಿಯಾಗಲು ಆರಂಭಿಸಿದಾಗ ಇದನ್ನು ಒಂದು ತಟ್ಟೆಗೆ ಸುರಿದು ಹರಡಿ ಕತ್ತರಿಸಬೇಕು. ಅತ್ಯುತ್ತಮ ರುಚಿ ಹೊಂದಿರುವ ಹಲಸಿನ ಹಣ್ಣಿನ ಬರ್ಫಿ ರೆಡಿ

– ವಿದ್ಯಾ ವಝೆ, ಮುಂಡಾಜೆ

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಸವಿರುಚಿ: ಹಲಸಿನ ಬೀಜದ ಮಿಲ್ಕ್‌ಶೇಕ್‌

Upayuktha

ಸವಿರುಚಿ: ಒಂದೆಲಗ (ಉರಗೆ) ತಂಬುಳಿ

Upayuktha

ನಾವು ಅಡುಗೆಯವರು… ತಾಯಿ ಅನ್ನಪೂರ್ಣೇಶ್ವರಿಯ ಸೇವಕರು…

Upayuktha

Leave a Comment

error: Copying Content is Prohibited !!