- ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕರಾವಳಿ- ಉತ್ತರ ಕರ್ನಾಟಕ ನಡುವೆ ನೇರ ಸಂಪರ್ಕ
- ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿದ ನೈಋತ್ಯ ರೈಲ್ವೆ; ಪ್ರಸ್ತಾವಿತ ರೈಲಿನ ಅಂದಾಜು ವೇಳಾಪಟ್ಟಿಯೂ ಪ್ರಕಟ
- ವಿಶೇಷ ಪ್ರಯಾಣ ದರಗಳು, 21 ನಿಲುಗಡೆಗಳು
ಮಂಗಳೂರು: ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನೈಋತ್ಯ ರೈಲ್ವೇ ಮಂಗಳೂರು-ವಿಜಯಪುರ ನಡುವೆ ದೈನಂದಿನ ಓಡಾಟದ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸುವ ಪ್ರಸ್ತಾವ ಮುಂದಿಟ್ಟಿದೆ. ಬಹುಕಾಲದ ಬೇಡಿಕೆಯಾಗಿದ್ದ ಈ ರೈಲಿನ ಸಂಚಾರಕ್ಕೆ ರೈಲ್ವೇ ಇಲಾಖೆ ಅನುಮೋದನೆ ನಿಡಿದ್ದು, ಜನತೆಯ ಬೇಡಿಕೆ, ಸಂಸದರು, ಜನಪ್ರತಿನಿಧಿಗಳ ಶಿಫಾರಸುಗಳಿಗೆ ಇಲಾಖೆ ಸ್ಪಂದಿಸಿದೆ.
ಮೀಟರ್ ಗೇಜ್ ಕಾಲದಲ್ಲಿ ಹುಬ್ಬಳ್ಳಿ ಸಂಪರ್ಕ ಸಮೇತ ಮೀರಜ್ ನಿಂದ ಮಂಗಳೂರು ಸಂಪರ್ಕ ಹೊಂದಿದ್ದ ರೈಲನ್ನು ಪುನರ್ ಸ್ಥಾಪಿಸಿ ಓಡಿಸುವಂತೆ ಇಟ್ಟಿದ್ದ ಬೇಡಿಕೆಗೆ ಅನುಗುಣವಾಗಿ ಇದೀಗ ದಿನಂಪ್ರತಿ ವಿಜಯಪುರ-ಹುಬ್ಬಳ್ಳಿ- ಅರಸಿಕೆರೆ-ಹಾಸನ-ಮಂಗಳೂರಿಗೆ ಎಕ್ಸ್ಪ್ರೆಸ್ ರೈಲು ವೇಳಾಪಟ್ಟಿ ಪ್ರಕಟಗೊಂಡಿದೆ.
ಈ ರೈಲಿಗೆ ವಿಶೇಷ ದರಗಳನ್ನು ನಿಗದಿಪಡಿಸಲಾಗಿದೆ. ಪ್ರಸ್ತಾವಿತ ವೇಳಾಪಟ್ಟಿಯ ಪ್ರಕಾರ, ವಿಜಯಪುರದಿಂದ ಪ್ರತಿದಿನ ಅಪರಾಹ್ನ 2:00 ಗಂಟೆಗೆ ಹೊರಡುವ ರೈಲು (ಟ್ರೈನ್ ಸಂಖ್ಯೆ- 06919) ಮರುದಿನ ಬೆಳಗ್ಗೆ 9:55ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಅದೇ ರೀತಿ ಮಂಗಳೂರಿನಿಂದ ಮಧ್ಯಾಹ್ನ 12:30ಕ್ಕೆ ಹೊರಡುವ ರೈಲು (ಟ್ರೈನ್ ಸಂಖ್ಯೆ: 06920) ಮರುದಿನ ಸಂಜೆ 5:45ಕ್ಕೆ ವಿಜಯಪುರ ತಲುಪಲಿದೆ.
ಬಿಜಾಪುರ-ಹುಬ್ಬಳ್ಳಿ-ಅರಸಿಕೆರೆ-ಹಾಸನ-ಮಂಗಳೂರು ಮಾರ್ಗವಾಗಿ ಓಡಾಟ ನಡೆಸುವ ಪ್ರಸ್ತಾವಿತ ರೈಲು 21 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ. ಪ್ರಸ್ತಾವಿತ ರೈಲು 1 ಎಸಿಸಿಡಬ್ಲ್ಯ, 1 ಎಸಿಸಿಎನ್, 4 ಜಿಎಸ್ಸಿಎನ್, 4 ಜಿಎಸ್, 2 ಸ್ಲೀಪರ್ ಸೇರಿದಂತೆ ಒಟ್ಟು 12 ಕೋಚ್ಗಳನ್ನು ಹೊಂದಿರುತ್ತದೆ.
ರೈಲಿನ ವಿವರ:
ಟ್ರೈನ್ ಸಂಖ್ಯೆ 06919/06920
ಬಿಜಾಪುರ್-ಮಂಗಳೂರು
ಡೈಲಿ ಎಕ್ಸ್ಪ್ರೆಸ್
ನಿಲ್ದಾಣಗಳು:
1. ಬಸವನ ಬಾಗೇವಾಡಿ ರೋಡ್ (BSRX)
2. ಆಲಮಟ್ಟಿ (LMT)
3. – ಬಾಗಲಕೋಟ (Bgk)
4. ಗುಳೇದಗುಡ್ಡ(GED)
5. – ಬಾದಾಮಿ (BDM)
6. ಹೊಳೆ ಆಲೂರು (HLAR)
7. ಗದಗ (GDG)
8. ನರಗುಂದ (NGR)
9. ಹುಬ್ಬಳ್ಳಿ (UBL)
10. ಹಾವೇರಿ ( HVR)
11. ರಾಣೆಬೆನ್ನೂರು (RNR)
12. ಹರಿಹರ (HRR)
13. ದಾವಣಗೆರೆ (DVG)
14. ಕಡೂರು ( DRU)
15. ಅರಸೀಕೆರೆ (ASK)
16. ಹಾಸನ ( HAS)
17. ಸಕಲೇಶಪುರ (SKLR)
18. ಸುಬ್ರಹ್ಮಣ್ಯ ರೋಡ್ (SBHR)
19. ಕಬಕ ಪುತ್ತೂರು (KBPR)
20. ಬಂಟ್ವಾಳ ( BNTL)
21. ಮಂಗಳೂರು ಜಂಕ್ಷನ್ (MAJN/MAQ)
(ಉಪಯುಕ್ತ ನ್ಯೂಸ್ ಸುದ್ದಿಜಾಲ)