ಸಂಪೂರ್ಣ ಶರಣಾಗತಿಯೇ ಗಾಯತ್ರಿ ಮಂತ್ರದ ತತ್ವ: ಶತಾವಧಾನಿ ರಾ. ಗಣೇಶ್
ಬೆಂಗಳೂರಿನ ಹವ್ಯಕ ಭವನದಲ್ಲಿ ಸಂಪನ್ನಗೊಂಡ ಗಾಯತ್ರಿ ಮಹೋತ್ಸವ ಬೆಂಗಳೂರು: ವರವನ್ನು ಬೇಡುವಾಗ, ಆ ವರದಿಂದ ಪ್ರಾಪ್ತವಾಗುವುದನ್ನು ಧರಿಸಲು, ನಿರ್ವಹಿಸಲು ನಾವು ಶಕ್ತರೇ ಎಂಬುದನ್ನು ಮೊದಲು ಆಲೋಚಿಸಬೇಕು. ನಮ್ಮ ಯೋಗ್ಯತೆಗೆ ಮೀರಿದ್ದನ್ನು ಕೇಳಬಾರದು. ಯೋಗ್ಯತೆಯನ್ನು ಮೀರಿದ...