ಒಂಬತ್ತು ದಿನಕ್ಕೆ 9 ದುರ್ಗಾ ದರ್ಶನ: ಶ್ರೀ ದುರ್ಗಾ ದೇವಸ್ಥಾನ, ಕುಂಜೂರು
ಶರನ್ನವರಾತ್ರಿ ಪುಣ್ಯಕಾಲ ಪುರಾತನ ಸತ್ಯ, ಮಣ್ಣಿನ ಮಹತ್ವಿಕೆ, ಗಾಢವಾದ ನಂಬಿಕೆ-ನಡವಳಿಕೆಗಳಿಗೆ ಆಶ್ರಯಸ್ಥಾನವಾಗಿರುವ ಶ್ರದ್ಧಾಸ್ಥಾನಗಳಲ್ಲಿ ದುರ್ಗಾ ಸನ್ನಿಧಾನಗಳು ಪ್ರಧಾನವಾಗಿವೆ. ನಮ್ಮ ಜಿಲ್ಲೆಯ ಪ್ರಸಿದ್ಧ ಶಕ್ತಿ ಉಪಾಸನಾ ದೇವಾಯತನಗಳಲ್ಲಿ ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನ...