ಕಿರುತೆರೆ- ಟಿವಿ ದೇಶ-ವಿದೇಶ

ತಮಿಳಿನ ಖ್ಯಾತ ನಟ ವಿವೇಕ್ ನಿಧನ

ಚೆನ್ನೈ: ಹೃದಯಾಘಾತಕ್ಕೀಡಾಗಿದ್ದ ತಮಿಳಿನ ಖ್ಯಾತ ನಟ ವಿವೇಕ್ ರವರು ಶನಿವಾರ ನಸುಕಿನ ಜಾವ 4.35ಕ್ಕೆ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು. 220 ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ್ದರು.

ಹೃದಯಾಘಾತದಿಂದ ಬಳಲುತ್ತಿದ್ದ ನಟ ವಿವೇಕ್ ಅವರ ಎಡ ಅಪಧಮನಿಯಲ್ಲಿ ಶೇಕಡ 100% ರಷ್ಟು ರಕ್ತ ಹೆಪ್ಪುಗಟ್ಟಿದ್ದು, ಹೃದಯಾಘಾತ ಉಂಟಾದ್ದರಿಂದ ನಿನ್ನೆ ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರು ಕೋವಿಡ್ ವ್ಯಾಕ್ಸಿನೇಷನ್ ತೆಗೆದುಕೊಂಡಿದ್ದರಿಂದ ಅದರ ಅಡ್ಡ ಪರಿಣಾಮದಿಂದ ಹೃದಯಾಘಾತ ಉಂಟಾಗಿರಬಹುದು ಎನ್ನುವ ಸಂಶಯ ಮೂಡಿದ್ದವು.

ಆದರೆ, ವೈದ್ಯರು ಈ ಸಾಧ್ಯತೆಯನ್ನು ತಳ್ಳಿ ಹಾಕಿದ್ದರು. ವೆಂಟ್ರಿಕ್ಯುಲರ್ ಫೈಬ್ರಿಲೇಷನ್ ಎಂಬ ಹೃದಯ ಸಂಬಂಧಿ ತೊಂದರೆಗೀಡಾಗಿದ್ದ ನಟ ವಿವೇಕ್ ಅವರಿಗೆ ಮೆದುಳಿಗೆ ರಕ್ತ ಪೂರೈಕೆ ಕಡಿಮೆಯಾಗಿದೆ ಎಂದು ನಿನ್ನೆ ಎಸ್​ಐಎಂಎಸ್ ವೈದ್ಯರು ತಿಳಿಸಿದ್ದರು.

 

Related posts

ಒಂದೇ ದಿನ 7.7 ಕೋಟಿ ವೀಕ್ಷಣೆಯೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ ರಾಮಾಯಣ ಧಾರಾವಾಹಿ

Upayuktha

ಬಾಲಿವುಡ್ ಖ್ಯಾತ ನಟ ಬಿಕ್ರಮ್ ಜೀತ್ ನಿಧನ

Harshitha Harish

ದುರಂತ: ದೇವಸ್ಥಾನಕ್ಕೆ ಹೊರಟ 40ಜನರಿದ್ದ ದೋಣಿ ಮುಳುಗಡೆ;12ಮಂದಿ ನಾಪತ್ತೆ

Harshitha Harish