ದೇಶ-ವಿದೇಶ

ಕೋವಿಡ್ 19 ಲಸಿಕೆ ಹಾಕಿಸಿಕೊಂಡ ತಮಿಳುನಾಡು ಆರೋಗ್ಯ ಸಚಿವ ಡಾ.ಸಿ ವಿಜಯ ಭಾಸ್ಕರ್

ಚೆನ್ನೈ: ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಶುಕ್ರವಾರ ಕೋವಿಡ್ -19 ಲಸಿಕೆ ಹಾಕಿಸಿಕೊಳ್ಳುವುದಾಗಿ ತಮಿಳುನಾಡು ಆರೋಗ್ಯ ಸಚಿವ ಡಾ.ಸಿ.ವಿಜಯಭಾಸ್ಕರ್ ಅವರು ತಿಳಿಸಿದ್ದಾರೆ.

ರಾಜ್ಯಕ್ಕೆ ಹೆಚ್ಚುವರಿಯಾಗಿ ಬಂದ 5,08,500 ಡೋಸ್ ಲಸಿಕೆಯನ್ನು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ತಾವೂ ಸಹ ಕೋವಿಡ್ ಲಸಿಕೆ ತೆಗೆದುಕೊಳ್ಳುವುದಾಗಿ ಹೇಳಿದರು.

“ಈ ಮೊದಲು ಜನರಲ್ಲಿ ಸ್ವಲ್ಪ ಭಯವಿತ್ತು ಮತ್ತು ಪೊಂಗಲ್ ಹಬ್ಬವೂ ಇತ್ತು. ಜನರ ಆತಂಕ ದೂರ ಮಾಡಲು ಹಲವು ವೈದ್ಯರು ಮತ್ತು ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಲಸಿಕೆ ತೆಗೆದುಕೊಂಡಿದ್ದಾರೆ. ನಾನು ಸಹ ಈಗ ಲಸಿಕೆ ಹಾಕಿಸಿಕೊಳ್ಳಲು ನಿರ್ಧರಿಸಿದ್ದು, ಮಂತ್ರಿಯಾಗಿ ಅಲ್ಲ. ವೈದ್ಯರಾಗಿ ಮತ್ತು ಐಎಂಎ ಸದಸ್ಯರಾಗಿ” ಎಂದು ಸಚಿವರು ಹೇಳಿದರು.

ನಾನು ಆರೋಗ್ಯ ಸಿಬ್ಬಂದಿ ಮತ್ತು ನರ್ಸ್ ಗಳಿಗೆ ಧೈರ್ಯ ಹೆಚ್ಚಿಸಲು ಲಸಿಕೆ ತೆಗೆದುಕೊಳ್ಳುತ್ತಿದ್ದೇನೆ. ಎರಡಲ್ಲಿ ವೈದ್ಯರು ನೀಡುವ ಒಂದು ಲಸಿಕೆಯನ್ನು ಹಾಕಿಸಿಕೊಳ್ಳುತ್ತೇನೆ ಎಂದು ವಿಜಯಭಾಸ್ಕರ್ ತಿಳಿಸಿದ್ದಾರೆ.

Related posts

ಮೇಘಾಲಯದ ಕಲ್ಲಿದ್ದಲು ಗಣಿಯಲ್ಲಿ ಸುರಂಗ ಕೊರೆಯುವ ಯಂತ್ರ ಕುಸಿದ ಪರಿಣಾಮ 6 ಮಂದಿ ಸಾವು

Harshitha Harish

ತಮಿಳು ಕಿರುತೆರೆ ನಟಿ ಚಿತ್ರಾ ಆತ್ಮಹತ್ಯೆ ಪ್ರಕರಣ; ಪತಿ ಹೇಮಂತ್ ಬಂಧನ

Harshitha Harish

ಅಮಿತಾಬ್ ಬಚ್ಚನ್ ಅವರ ಜೊತೆ “ಮೇಡೆ” ಚಿತ್ರದ ಕೆಲಸ ಮಾಡಲಿರುವ ಬಾಲಿವುಡ್ ನಟ ಅಜಯ್ ದೇವ್ ಗನ್

Harshitha Harish