ಚೆನ್ನೈ: ತಮಿಳು ಕಿರುತೆರೆಯ ಜನಪ್ರಿಯ ನಟಿ ಚಿತ್ರಾ ರವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ಪತಿ ಹೇಮಂತ್ ನನ್ನು ನಜರತ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ರಾತ್ರಿ ಹೇಮಂತ್ ಬಂಧಿಸಿದ್ದು, ಚಿತ್ರಾ ಹಾಗೂ ಹೇಮಂತ್ ಎರಡು ತಿಂಗಳ ಹಿಂದೆ ವಿವಾಹವಾಗಿದ್ದರು. ಚಿತ್ರಾ ರವರ ಸಾವಿಗೆ ಪತಿ ಹೇಮಂತ್ ಕಾರಣ ಎಂದು ನಟಿಯ ತಾಯಿ ಆರೋಪ ಮಾಡಿದ್ದರು.
ಪಾಂಡಿಯನ್ ಸ್ಟೋರ್ಸ್ ತಮಿಳು ಶೋ ಕಾರ್ಯಕ್ರಮ ದಲ್ಲಿ ಕಾಣಿಸಿಕೊಳ್ಳುತ್ತಿದ್ದ 29 ವರ್ಷ ದವರಾದ ವಿಜೆ ಚಿತ್ರಾ ಚೆನ್ನೈನ ನಜರಥ್ ಪೇಟ್ ನಲ್ಲಿರುವ ಹೋಟೆಲ್ ರೂಮೊಂದರಲ್ಲಿ ಡಿಸೆಂಬರ್ 9ರಂದು ಶವವಾಗಿ ಪತ್ತೆಯಾಗಿದ್ದರು.
ಅಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೋಟೆಲ್ ರೂಮಿಗೆ ಬಂದಿದ್ದರು. ಚಿತ್ರೀಕರಣ ಮುಗಿಸಿ ನೇರ ಇಲ್ಲಿಗೆ ಬಂದಿದ್ದಂತೆ ಕಾಣುತ್ತಿದ್ದು, ಪತಿ ಹೇಮಂತ್ ರವಿ ಹೋಟೆಲ್ ನಿಂದ ಹೋದ ಬಳಿಕ ನಟಿ ಚಿತ್ರಾ ಆತ್ಮಹತ್ಯೆಗೆ ಶರಣಾಗಿದ್ದರು. ಉದ್ಯಮಿ ಹೇಮಂತ್ ನನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ಪೊನ್ನೇರಿ ಜೈಲಿನಲ್ಲಿರಿಸಿದ್ದಾರೆ.