ಅಪಘಾತ- ದುರಂತ ದೇಶ-ವಿದೇಶ

ತಮಿಳುನಾಡು: ಖಾಸಗಿ ಬಸ್ಸೊಂದು ವಿದ್ಯುತ್ ತಂತಿಗೆ ತಗುಲಿ ; 5 ಮಂದಿ ಸಾವು

ತಂಜಾವೂರ್: ಖಾಸಗಿ ಬಸ್ಸೊಂದು ಹೈ ಟೆನ್ಷನ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ , ಐದು ಪ್ರಯಾಣಿಕರು ವಿದ್ಯುದಾಘಾತದಿಂದ ಮೃತಪಟ್ಟು 8 ಮಂದಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ತಂಜಾವೂರ್ ಜಿಲ್ಲೆ ತಿರುವೈಯಾರ್ ಸಮೀಪ ವರಗೂರ್ ನಲ್ಲಿ ನಡೆದಿದೆ.

50 ಕ್ಕೂ ಹೆಚ್ಚಿನ ಪ್ರಯಾಣಿಕರಿದ್ದ ಬಸ್ ಗ್ರ್ಯಾಂಡ್ ಅನೈಕಟ್‌ನಿಂದ ತಂಜಾವೂರಿಗೆ ಬರುತ್ತಿತ್ತು ಎಂದು ತಂಜಾವೂರು ಪೊಲೀಸ್ ವರಿಷ್ಠಾಧಿಕಾರಿ ದೇಶ್ ಮುಖ್ಶೇಖರ್ ಸಂಜಯ್ ಸುದ್ದಿಗಾರರಿಗೆ ತಿಳಿಸಿದರು.

ಲಾರಿಯನ್ನು ಚೇಸ್ ಮಾಡಲು ಯತ್ನಿಸಿ ಬಸ್‌ ನ ಚಾಲಕ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿರುವ ಹೈ ಟೆನ್ಷನ್ ವಿದ್ಯುತ್ ತಂತಿಗೆ ಬಸ್ ಅನ್ನು ತಗುಲಿಸಿದ್ದಾನೆ.

ಸ್ಥಳದಲ್ಲಿಯೇ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದರೆ , 10 ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡ ಪ್ರಯಾಣಿಕರನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇನ್ನಿಬ್ಬರು ಮೃತಪಟ್ಟಿದ್ದಾರೆ. ಇನ್ನುಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಬಗ್ಗೆ ಪೋಲೀಸ್ ತನಿಖೆ ಮುಂದುವರಿದಿದೆ

Related posts

ಕೊರೊನಾ ವಿರುದ್ಧ ಸಮರ: ದೇಶವ್ಯಾಪಿ ಲಾಕ್‌ಡೌನ್‌ ಮೇ 3ರ ವರೆಗೆ ವಿಸ್ತರಣೆ: ಪ್ರಧಾನಿ ಮೋದಿ ಘೋಷಣೆ

Upayuktha

ಮಹಾರಾಷ್ಟ್ರ: ಸದನದಲ್ಲಿ ಬಲ ಪರೀಕ್ಷೆಗೆ ಮೊದಲೇ ಫಡ್ನವಿಸ್‌, ಅಜಿತ್ ಪವಾರ್ ರಾಜೀನಾಮೆ

Upayuktha

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಕೊರೊನಾ ಪಾಸಿಟಿವ್

Harshitha Harish