ಕ್ಷೇತ್ರಗಳ ವಿಶೇಷ ರಾಜ್ಯ

‘ಕಡಲತಡಿಯಿಂದ ಹಿಮಗಿರಿಯ ತನಕ’: ಹರಿದ್ವಾರದಲ್ಲಿ ಲೋಕಾರ್ಪಣೆ

ತಪೋವನೀ ಮಾತಾ ಆತ್ಮಕಥೆ- ಶ್ರೀ ವಿಶ್ವೇಶತೀರ್ಥರ ಅಧ್ಯಾತ್ಮ‌‌ ಶಿಷ್ಯೆಯ ಅಧ್ಯಾತ್ಮಯಾನದ ರೋಚಕ ಕಥಾನಕ

ಹರಿದ್ವಾರ: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ಮಂತ್ರದೀಕ್ಷೆ ಪಡೆದು ಯಿಮಾಲಯದ ತಪೋವನದಲ್ಲಿ ಸುದೀರ್ಘ ವರ್ಷಗಳ ಕಾಲ ಕಠಿಣ ತಪಸ್ಸನ್ನಾಚರಿಸಿದ ಮೂಲತಃ ಉಡುಪಿಯವರೇ ಅದ ತಪೋವನೀ ಸುಭದ್ರಾ ಮಾತಾಜಿ ಅವರ ಆತ್ಮಕಥೆ ‘ಕಡಲತಡಿಯಿಂದ ಹಿಮಗಿರಿಯ ತನಕ’ ಇಂದು ಹರಿದ್ವಾರದಲ್ಲಿ ಲೋಕಾರ್ಪಣೆಗೊಂಡಿತು.

ಮೂಲತಃ ಉಡುಪಿಯವರಾಗಿದ್ದು, ಅತ್ಯಂತ ಎಳೆಯ ವಯಸ್ಸಲ್ಲೇ ಜೀವನದ ಜಂಜಾಟಗಳನ್ನೂ ಎದುರಿಸಿ, ಅಧ್ಯಾತ್ಮದ ಸೆಳೆತದಿಂದ ಆ ತರುಣ ವಯಸ್ಸಿನಲ್ಲಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ಮಂತ್ರದೀಕ್ಷೆ ಪಡೆದು ಹೇಗೋ ಹಠದಿಂದ ಹಿಮಾಲಯ ಸೇರಿ ತಪೋವನದಲ್ಲಿ ತಪಸ್ಸನ್ನಾಚರಿಸಿದವರು ಇವರು.

ಪಾಂಡವರು ಕುರುಕ್ಷೇತ್ರ ಯುದ್ಧ ನಂತರ ಇದೇ ಸ್ಥಳದಲ್ಲಿ ತಪಸ್ಸಾಚರಿಸಿದ್ದರು. ಸಮುದ್ರ ಮಟ್ಟದಿಂದ ಸುಮಾರು 4000 ಮೀಟರ್ ಎತ್ತರದ ದುರ್ಗಮ ಸ್ಥಳ ಇದಾಗಿದೆ. ಇಂತಹ ಸ್ಥಳದಲ್ಲಿ ಎಲ್ಲ ಪ್ರಾಕೃತಿಕ ಸವಾಲುಗಳನ್ನೂ ಎದುರಿಸಿ ನಿರಂತರ ಒಂಭತ್ತು ವರ್ಷಗಳ ಕಾಲ ಅತ್ಯಂತ ಭೀಕರ ಚಳಿಯಲ್ಲೂ ಏಕಾಂಗಿಯಾಗಿ ತಪಸ್ಸಾಚರಿಸಿ ಅಧ್ಯಾತ್ಮ ಸಾಧನೆಗೈದವರು ತಪೋವನೀ ಸುಭದ್ರಾ ಮಾತಾ.

ಪ್ರಾಯಶಃ ಈ ರೀತಿ ತಪಸ್ಸನ್ನಾಚರಿಸಿದ ಜಗತ್ತಿನ ಪ್ರಥಮ‌ ಮಹಿಳೆ ಇವರಾಗಿದ್ದು, ಬಳಿಕ ಹರಿದ್ವಾರದಲ್ಲೇ ಆಶ್ರಮವೊಂದನ್ನು ಸ್ಥಾಪಿಸಿ ಸಾಧು ಸಂತರು ಯಾತ್ರಿಗಳಿಗೆ ಧರ್ಮಾರ್ಥ ಊಟ ವಸತಿ ಆರೋಗ್ಯ ಸೇವೆಗಳನ್ನು ನಡೆಸಿದರು.

ಪ್ರಸ್ತುತ ಹರಿದ್ವಾರದ ರಾಮಕೃಷ್ಣಾಶ್ರಮ ಆಸ್ಪತ್ರೆಯಲ್ಲಿ ಪತಂಜಲಿ ಯೋಗಪೀಠದ ಆಚಾರ್ಯ ಬಾಲಕೃಷ್ಣ ಅವರ ವಿಶೇಷ ಮುತುವರ್ಜಿಯಲ್ಲಿ ಅನೇಕ ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ತೊಂಭತ್ತಕ್ಕೂ ಅಧಿಕ ವರ್ಷದ, ಸಾರ್ಥಕ‌ ಅಧ್ಯಾತ್ಮ ಬದುಕು ಸವೆಸಿದ ತಪೋವನೀ ಮಾತಾ (ಸುಭದ್ರಾ ಮಾತಾಜಿ) ಯವ ಆತ್ಮಕಥೆಯ ಕನ್ನಡ ಅವತರಣಿಕೆ ಭಾನುವಾರ ಹರಿದ್ವಾದಲ್ಲಿ ಲೋಕಾರ್ಪಣೆಗೊಂಡಿತು.

ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಚಾರ್ಯ ಬಾಲಕೃಷ್ಣ ಅವರು ಮಾತಾಜಿಯವರ ಸಮ್ಮುಖದಲ್ಲಿ ಜಂಟಿಯಾಗಿ ಕೃತಿ ಬಿಡುಗಡೆಗೊಳಿಸಿದರು.

ಮೂಲ ಹಿಂದಿಯಲ್ಲಿರುವ ಕೃತಿಯನ್ನು ನಿವೃತ್ತ ಉಪನ್ಯಾಸಕ, ಚಿಂತಕ ಡಾ ಜಿ ಭಾಸ್ಕರ ಮಯ್ಯರು ಅತ್ಯಂತ ಸುಂದರವಾಗಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಕನ್ನಡದ ಜನ ಅದರಲ್ಲುಯ ಉಡುಪಿಯ ಜನತೆಗೆ ಅತ್ಯಂತ ಹೆಮ್ಮೆ ತರಬಲ್ಲ ಸಾಧಕಿ ಸುಭದ್ರಾ ಮಾತಾಜಿಯವರಾಗಿದ್ದಾರೆ. ಅಧ್ತಾತ್ಮ ಸಾಧನೆಯ ತುಡಿತವಿರುವ ಮಂದಿಗೆ ಮತ್ತು ಸಾಹಸಿ ಬುದುಕಿನ ರೋಚಕತೆಯಲ್ಲಿ ಆಸಕ್ತಿ ಇರುವ ಜನರಿಗೆ ಸುಭದ್ರಾ ಮಾತಾಜಿಯವರು ಮಾದರಿಯಾಗಬಲ್ಲರು.

ರಾಮಕೃಷ್ಣ ಆಶ್ರಮ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಧಿಯಾಧಿಪಾನಂದ ಉಪಸ್ಥಿತರಿದ್ದು ಕಾರ್ಯಕ್ರಮದ ಬಗ್ಗೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದರು.

ತಪೋವನೀ ಸುಭದ್ರಾ ಮಾತಾ ಧರ್ಮಾರ್ಥ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಮತ್ತು ಮಾತಾಜಿಯವರೊಡನೆ ಸುದೀರ್ಘ ಒಡನಾಟ ಹೊಂದಿ ಶುಶ್ರೂಷೆ ಮಾಡುತ್ತಿರುವ ಬಹಾದ್ದೂರ್ ಸಿಂಗ್ ವರ್ಮಾ ಶ್ರೀಗಳ ಆಪ್ತಕಾರ್ಯದರ್ಶಿಗಳಾದ ವಿಷ್ಣು ಆಚಾರ್ಯ, ಅನಂತ ಜಿ ಎ, ಕೃಷ್ಣ ಭಟ್, ಹರಿದ್ವಾರ ಪೇಜಾವರ ಶಾಖಾ ಮಠದ ವ್ಯವಸ್ಥಾಪಕ ಮನೋಜ್, ಅನೂಪ್ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಉಪಸ್ಥಿತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿದ್ದರು. ರಾಷ್ಟ್ರೀಯ ಮಹಿಳಾ ಆಯೋಗದ ಪರವಾಗಿ ಸದಸ್ಯೆ ಶಾಮಲಾ ಕುಂದರ್ ಮಾತಾಜಿಯವರಿಗೆ ಗೌರವ ಅರ್ಪಿಸಿದರು.

ಜೀವನಪೂರ್ತಿ ಉಡುಪಿ ಕೃಷ್ಣ, ಪೇಜಾವರ ಶ್ರೀ ಸ್ಮರಣೆ: ತನ್ನ ಜೀವನದ ಎಲ್ಲ ಕಷ್ಟ ಸವಾಲು ಅಧ್ಯಾತ್ಮ ಸುಖ- ಹೀಗೆ ಪ್ರತಿಯೊಂದು ಹಂತದಲ್ಲೂ ಮಾತಾಜಿ ಸ್ಮರಿಸಿದ್ದು, ತನ್ನ ಈ ಪರಿಯ ಸಾಧನೆಯ ಗುಟ್ಟೇನೆಂದು ಹಿಮಾಲಯ ನೂರಾರು ಸಾಧು ಸಂತರು ಹಾಗೂ ಎಲ್ಲರಲ್ಲೂ ಮಾತಾಜಿ ನೀಡಿದ್ದು ಒಂದೇ ಉತ್ತರ.
”ನನ್ನ ಸ್ವಾಮಿ ಉಡುಪಿ ಕೃಷ್ಣ ನನ್ನ ಗುರು ಪೇಜಾವರ ಸ್ವಾಮೀಜಿ!!! ಆದ್ದರಿಂದ ನನಗೆ ಯಾವುದೇ ಭಯ ದುಃಖ ಆತಂಕ ಇಲ್ಲ”

-ಜಿ. ವಾಸುದೇವ ಭಟ್ ಪೆರಂಪಳ್ಳಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

‘ಧರ್ಮಯಾನ’- ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಭಿನಂದನಾ ಗ್ರಂಥ ಸಮರ್ಪಣೆ

Upayuktha

ಕೊರೊನಾ ಸವಾಲು: ಕನ್ನಡದ 8 ಪ್ರಮುಖ ಪತ್ರಿಕೆಗಳಲ್ಲಿ ಒಂದೇ ಸಂಪಾದಕೀಯ

Upayuktha

ಜೆ.ಪಿ ನಡ್ಡಾ, ಬಿ.ಎಲ್ ಸಂತೋಷ್ ಭೇಟಿ ಮಾಡಿದ ನಳಿನ್ ಕಟೀಲು

Upayuktha