ಅಡುಗೆ-ಆಹಾರ ಲೈಫ್‌ ಸ್ಟೈಲ್- ಆರೋಗ್ಯ

ಸೌತೆಕಾಯಿ, ಕುಂಬಳಕಾಯಿ ವೆರೈಟಿ ದೋಸೆ

ದೋಸೆ, ಇಡ್ಲಿ ಮುಂತಾದ ಸಾಂಪ್ರದಾಯಿಕ ತಿಂಡಿಗಳು ಕನ್ನಡಿಗರ ಆಹಾರ ಪದ್ಧತಿಯಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಪ್ರತಿದಿನ ನಾನಾ ವೆರೈಟಿ ರುಚಿಕರ ದೋಸೆಗಳನ್ನು ಮಾಡುತ್ತ ಉದರ ಪೋಷಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಜೀವನ ವಿಧಾನವೇ ಆಗಿದೆ. ಇಂದಿನ ರೆಸಿಪಿಯಲ್ಲಿ ಸಾಂಬಾರ್‌ ಸೌತೆಕಾಯಿ ದೋಸೆ, ಬೂದುಗುಂಬಳ ಕಾಯಿ ದೋಸೆ, ಮುಳ್ಳುಸೌತೆ ದೋಸೆಗಳ ಬಗ್ಗೆ ತಿಳಿಯೋಣ.

1. ಸಾಂಬಾರ್ ಸೌತೆ ದೋಸೆ
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ 2 ಕಪ್, ಹದವಾಗಿ ಕತ್ತರಿಸಿದ ಸಾಂಬಾರ್ ಸೌತೆ ಹೋಳು 2 ಕಪ್, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿ: ಅರ್ಧ ಗಂಟೆ ಕಾಲ ಅಕ್ಕಿ ನೀರಿನಲ್ಲಿ ನೆನೆಹಾಕಿ.
ಅಕ್ಕಿ, ಸೌತೆ ಹೋಳು, ಉಪ್ಪು ಸೇರಿಸಿ ಅರೆಯಿರಿ. ನೀರುದೋಸೆ ಹದಕ್ಕೆ ಹಿಟ್ಟು ತಯಾರಿಸಿ ಕಾದ ತವಾದ ಮೇಲೆ ಹುಯ್ಯಿರಿ.

 

2. ಬೂದು ಕುಂಬಳಕಾಯಿ ದೋಸೆ
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ 2 ಕಪ್, ಹದವಾಗಿ ಕತ್ತರಿಸಿದ ಬೂದು ಕುಂಬಳಕಾಯಿ ಹೋಳು 2 ಕಪ್, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿ: ಅರ್ಧ ಗಂಟೆ ಕಾಲ ಅಕ್ಕಿ ನೀರಿನಲ್ಲಿ ನೆನೆಹಾಕಿ.
ಬೂದು ಕುಂಬಳಕಾಯಿ ಹೋಳು, ಅಕ್ಕಿ, ಉಪ್ಪು ಸೇರಿಸಿ ಅರೆಯಿರಿ, ಹಿಟ್ಟು ಸ್ವಲ್ಪ ದಪ್ಪಕ್ಕೆ (ಉದ್ದಿನ ದೋಸೆ ಹಿಟ್ಟಿನಂತೆ) ಇರಲಿ. ಕಾದ ತವಾದ ಮೇಲೆ ಹುಯ್ಯಿರಿ.

ಬಾಯಲ್ಲಿ ನೀರೂರಿಸುವ ಬಾಳೆಹಣ್ಣು, ಬಾಳೆಕಾಯಿ ದೋಸೆಗಳು

3 ಮುಳ್ಳುಸೌತೆ ದೋಸೆ
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ 2 ಕಪ್, ಮುಳ್ಳುಸೌತೆ ಹೋಳು ಎರಡೂವರೆ ಕಪ್, ತೆಂಗಿನ ಕಾಯಿ ತುರಿ ಅರ್ಧ ಕಪ್, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿ: ಬೆಳ್ತಿಗೆ ಅಕ್ಕಿಯನ್ನು ಅರ್ಧ ಗಂಟೆ ಕಾಲ ನೀರಿನಲ್ಲಿ ನೆನೆಹಾಕಿ.
ಅಕ್ಕಿ, ಮುಳ್ಳುಸೌತೆ ಹೋಳು, ತೆಂಗಿನ ತುರಿ, ಉಪ್ಪು ಸೇರಿಸಿ ಚೆನ್ನಾಗಿ ಅರೆಯಿರಿ. ಮುಳ್ಳುಸೌತೆಯಲ್ಲಿ ನೀರು ಇರುವುದರಿಂದ ಅರೆಯುವಾಗ ನೀರು ಸೇರಿಸುವುದು ಬೇಡ.
ತೆಳ್ಳಗಿನ ಹಿಟ್ಟು (ನೀರು ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪ ಇರಲಿ) ತಯಾರಿಸಿ ಕಾದ ತವಾದ ಮೇಲೆ ಹುಯ್ಯಿರಿ.

-ವಿನಾಯಕ

Related posts

ಯೋಗ: ಎಲ್ಲರಿಗೂ ‘ಉಪಯುಕ್ತ’ವಾದ ಪ್ರಾಚೀನ ಭಾರತದ ವಿದ್ಯೆ

Upayuktha

ಸವಿರುಚಿ: ಬಸಳೆ ಸೊಪ್ಪಿನ ತಂಬುಳಿ

Upayuktha

ವಿಶ್ವ ಅಲ್ಜೀಮರ್ಸ್ ಜಾಗೃತಿ ದಿನ ಸೆ.21- ಆಲ್ಜೀಮರ್ಸ್ ಎಂಬ ಅರಳು ಮರುಳು ರೋಗ

Upayuktha