ಕಾಸರಗೋಡು: ಕೋವಿಡ್ 19 ಬಾಧೆ ಪ್ರಾರಂಭವಾಗಿ ಜನಜೀವನ ಸ್ತಬ್ದವಾಗಿದ್ದ ದಿನಗಳು. ಕಾಸರಗೋಡು ಜಿಲ್ಲೆಯಂತೂ ಹೊರಸಂಪರ್ಕವಿಲ್ಲದೆ ಅನಾಥವಾಗಿತ್ತು. ಪ್ರತಿದಿನ ಎಂಬಂತೆ ಮಂಗಳೂರು ಆಸ್ಪತ್ರೆಗಳ ಸಂಪರ್ಕ ಇಲ್ಲದೆ ರೋಗಿಗಳು ಸಾವನ್ನಪ್ಪುತ್ತಿದ್ದರು. ತಮ್ಮ ಜಿಲ್ಲೆಯ ವೈದ್ಯಕೀಯ ಸೌಲಭ್ಯದ ಕೊರತೆಯನ್ನು ಮನಗಂಡ ವ್ಯಕ್ತಿಯೋರ್ವರು ಇದರ ಪರಿಹಾರಕ್ಕಾಗಿ ನೇರವಾಗಿ ಟಾಟಾ ಕಂಪೆನಿಯ ಮುಖ್ಯಸ್ಥರಿಗೆ ಟ್ವೀಟ್ ಮಾಡಿ ಜಿಲ್ಲೆಯ ಸಂಕಷ್ಟವನ್ನು ಟಾಟಾರವರಿಗೆ ಮನವರಿಕೆ ಮಾಡುತ್ತಾರೆ. ತಕ್ಷಣ ಈ ಮನವಿಗೆ ಸ್ಪಂದಿಸಿದ ಟಾಟಾರವರು ಕೆಲವೇ ದಿನಗಳಲ್ಲಿ ಕಾಸರಗೋಡಿಗೆ ಒಂದು ಸುಸಜ್ಜಿತ ಆಸ್ಪತ್ರೆಯನ್ನು ಕಟ್ಟಿಸಿಕೊಡುವ ಭರವಸೆ ನೀಡುತ್ತಾರೆ.
ನುಡಿದಂತೆ ನಡೆದ ಟಾಟಾ ನೇತೃತ್ವದಲ್ಲಿ ಇದೀಗ ಆಸ್ಪತ್ರೆ ಸಿದ್ಧವಾಗಿ ಇಂದು ಸರಕಾರಕ್ಕೆ ಹಸ್ತಾಂತರಗೊಂಡಿದೆ. ಈ ಮಹೋನ್ನತ ಕಾರ್ಯಕ್ಕೆ ತೆರೆಯ ಮರೆಯಲ್ಲಿ ಕಾರಣರಾದವರೇ ರಾಜಗೋಪಾಲ ಕೈಪಂಗಳ. ಆದರೆ ಇಂದು ಅವರನ್ನು ಯಾರೂ ನೆನಪಿಸಿಕೊಳ್ಳುವಂತೆ ಕಾಣುತ್ತಿಲ್ಲ. ಎಲ್ಲವನ್ನೂ ಸಂತೃಪ್ತ ಭಾವದಿಂದ ನೋಡುತ್ತಿರುವ ರಾಜಗೋಪಾಲ ಅವರಿಗೆ ಅದರ ನಿರೀಕ್ಷೆಯೂ ಇಲ್ಲ. ಚರಿತ್ರಾರ್ಹ ಕಾರ್ಯವೊಂದಕ್ಕೆ ಕಾರಣರಾದ ರಾಜಗೋಪಾಲ ಕೈಪ್ಪಂಗಳ ಅವರಿಗೆ ನಮ್ಮೆಲ್ಲರ ಹೃದಯ ತುಂಬಿದ ಕೃತಜ್ಞತೆಗಳು.
ಕಾಸರಗೋಡಿನ ಜನತೆಗೆ ಈ ಸೌಲಭ್ಯ ದೊರಕಲು ಮೂಲ ಪ್ರೇರಣೆಯಾದ ಅಥವಾ ಬೇಡಿಕೆಯನ್ನಿಟ್ಟ ರಾಜಗೋಪಾಲ ಕೈಪಂಗಳ ಅವರನ್ನು ಉಪಯುಕ್ತ ನ್ಯೂಸ್ ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ….
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.