ಕ್ಯಾಂಪಸ್ ಸುದ್ದಿ ಲೇಖನಗಳು

ಕಣ್ಣೀರೆಂಬ ಸ್ಫೂರ್ತಿ ಜಲ…

ಅದೇನೆಂದು ಹೇಳಲಿ… ಅಮ್ಮನ ಹೊಟ್ಟೆಯಿಂದ ಹೊರಬಂದು ಜಗತ್ತಿಗೆ ಕಾಲಿಟ್ಟಾಗ ಮೊದಲು ಪರಿಚಯ ಆದದ್ದೇ ನೀನು. ಆನಂತರ ಬೆಳೀತಾ ಬೆಳೀತಾ ನೀನು ಬಂದರೆ ಸಾಕು ಅಪ್ಪ ನನಗಾಗಿ ಅದೇನನ್ನೂ ಮಾಡಲು ತಯಾರಿರುತ್ತಿದ್ದರು. ಪ್ರತಿ ಸಲ ನಿನ್ನ ಪ್ರವೇಶ ಆದಾಗ ಅಮ್ಮ ಮಾತ್ರ ಯಾವಾಗಲೂ ಬೈಯ್ಯೋರು. ಅದೇನೆ ಆದರೂ ಮನದ ಭಾವನೆ ಭಾವುಕವಾಗಿ ಹೊರ ಬರುವುದು ಮಾತ್ರ ನಿನ್ನ ಜೊತೆಯೇ.

ಎಲ್ಲರ ಜೀವನದಲ್ಲಿ ನೀನು ಒಂಥರಾ ಆಪ್ತ ಗೆಳೆಯ. ದುಃಖವಾದಾಗ ನಿನ್ನನ್ನು”ಅಳು” ಮತ್ತು ಖುಷಿಯಾದಾಗ ನಿನ್ನನ್ನು “ಆನಂದಬಾಷ್ಪ” ಎಂಬ ಎರಡು ಹೆಸರಲ್ಲಿ ಜನ ಕರೀತಾರೆ. ಅಂತೂ ನೀನು ಮನದ ಭಾವನೆಯ ಪ್ರತಿರೂಪ. ಅಷ್ಟೇ ಏಕೆ ನಿನ್ನಿಂದಾಗಿಯೇ ಕೆಲವರು “ಅಳುಮುಂಜಿ” ಎಂಬ ಹಣೆಪಟ್ಟಿಯನ್ನು ಧರಿಸಿಕೊಂಡಿರುತ್ತಾರೆ. ಆದರೆ ಒಂದಂತೂ ಸತ್ಯ ಕಾರಣವಿಲ್ಲದೆ , ಮನ ಬೇಸರ ಪಡದೆ ನೀನಂತೂ ಖಂಡಿತ ಕಣ್ಣಿಂದ ಆಗಮಿಸಲು ಸಾಧ್ಯವಿಲ್ಲ ಅಲ್ಲವೇ?

ಬಾಲ್ಯದಲ್ಲಿ ಎಲ್ಲರ ಎದುರು ಅತ್ತು ಗೋಗರೆಯುತ್ತಿದ್ದೆವು. ರಂಪಾಟ ಮಾಡುತ್ತಿದ್ದೆವು. ಬಾಲ್ಯ ಕಳೆದು ಯೌವನ ಬಂತು ನೋಡಿ. ಪರದೆಯ ಹಿಂದೆ ಅತ್ತು ಮುಂದೆ ನಗಲು ಪ್ರಾರಂಭಿಸಿದ್ದೇವೆ. ಬೆಳೀತಾ ಬೆಳೀತಾ ಮನಸ್ಸು ದೃಢವಾಗುತ್ತೆ. ಆಗ ಈ ಅಳು ಬಾರದು ಅನ್ನುತ್ತಾರೆ ಕೆಲ ದೃಢಮನಸ್ಕರು. ಆದರೆ ಕೆಲವೊಮ್ಮೆ ಸಣ್ಣ ಸಣ್ಣ ವಿಷಯಕ್ಕೂ ಅಳು ಒತ್ತರಿಸಿ ಬರುತ್ತದೆ. ಗೆಳೆಯ ದೂರಾದನೆಂಬ ಅಳು, ಸಿಗಬೇಕಾದ ಪ್ರೀತಿ ಸಿಗುತ್ತಿಲ್ಲ ಎಂಬ ಅಳು, ಭಾವನೆಗೆ ಮೋಸವಾಯಿತೆಂಬ ಅಳು, ಕಷ್ಟ ಪಟ್ಟರೂ ಅದು ಸಿಗಲಿಲ್ಲ ಅನ್ನೋ ಅಳು…

ಹೇ ಕಣ್ಣೀರ ಹನಿಯೇ ಜೀವನದಲ್ಲಿ ಕಷ್ಟದ ಮೇಲೆ ಕಷ್ಟ ಬಂದಾಗ, ನಾ ದೊಪ್ಪೆಂದು ನೆಲಕ್ಕೆ ಕುಸಿದಾಗ ಗೆಳೆಯನಾಗಿ ಕೈ ಹಿಡಿದದ್ದು. ಅಳು ಎಲ್ಲರ ಪಾಲಿಗೆ ದೌರ್ಬಲ್ಯವೇ ಆಗಬೇಕೆಂದಿಲ್ಲ. ಮನಸ್ಸಿಗೆ ನೆಮ್ಮದಿ ನೀಡುವ, ಮನಸ್ಸಿಗೆ ಸ್ಫೂರ್ತಿ ನೀಡುವ ಒಂದು ಅದ್ಭುತ ಚೈತನ್ಯವೂ ಆಗಬಹುದಲ್ಲವೇ……?

-ಅರ್ಪಿತಾ ಕುಂದರ್
ಎಂಸಿಜೆ ವಿದ್ಯಾರ್ಥಿನಿ
ವಿವೇಕಾನಂದ ಕಾಲೇಜು, ಪುತ್ತೂರು

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಪತ್ರಕರ್ತನಿಗೆ ಬೇಕು ಬಹುಮುಖಿ ಚಿಂತನೆ: ಡಾ. ಗಣೇಶ್ ಅಮೀನ್‍ಗಡ

Upayuktha

ಇಂದು (ಆ.13) ವಿಶ್ವ ಎಡಚರ ದಿನ- ಇವರಿಗೆಲ್ಲ ‘ಎಡವೇ ಬಲ’

Upayuktha

ಮಧುಮೇಹಿಗಳ ವಿಲನ್- ಗ್ಲೈಕೋಸಿಲೇಟೆಡ್ ಹಿಮೋಗ್ಲೋಬಿನ್

Upayuktha

Leave a Comment

error: Copying Content is Prohibited !!