ಕಿರುತೆರೆ- ಟಿವಿ ದೇಶ-ವಿದೇಶ ನಿಧನ ಸುದ್ದಿ

ತೆಲುಗು ಹಾಗೂ ತಮಿಳು ಚಿತ್ರರಂಗದ ಖ್ಯಾತ ತಂತ್ರಜ್ಞ , ಸಂಕಲನಕಾರ ಕೋಲ ಭಾಸ್ಕರ್ ನಿಧನ

ಹೈದರಾಬಾದ್ : ದಕ್ಷಿಣ ಚಿತ್ರರಂಗದ ಖ್ಯಾತ ತಂತ್ರಜ್ಞ, ಸಂಕಲನಕಾರ ಕೋಲ ಭಾಸ್ಕರ್ (55) ವರ್ಷದವರಾಗಿದ್ದು ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂಬ ಮಾಹಿತಿ ದೊರಕಿದೆ.

ತೆಲುಗು ಮತ್ತು ತಮಿಳಿನ ಹಲವು ಚಿತ್ರಗಳಲ್ಲಿ ಸಂಕಲನಕಾರನಾಗಿ ಕಾರ್ಯನಿರ್ವಹಿಸಿದ್ದ ಭಾಸ್ಕರ್ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಹಲವು ಸಮಯದಿಂದ ಗಂಟಲು ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಕೋಲ ಭಾಸ್ಕರ್ ರವರು ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯಲ್ಲಿ ಮೃತಪಟ್ಟರು ಎಂದು ತಿಳಿದು ಬಂದಿದೆ. ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ.

ಪವರ್ ಸ್ಟಾರ್ ಪವನ್ ಕಲ್ಯಾಣ್ ನಟಿಸಿದ್ದ ಸೂಪರ್ ಹಿಟ್ ಚಿತ್ರ ‘ಖುಷಿ’ ಚಿತ್ರಕ್ಕೆ ಸಂಕಲನಕಾರ ಭಾಸ್ಕರ್, 7ಜಿ ಬೃಂದಾವನ ಕಾಲೋನಿ, ಆಡವಾರಿ ಮಾಟಲಕೂ ಅರ್ಥಾಲೇ ವೇರೆಲೆ, ಕಂಡೇನ್ ಕಾದಲೈ ಸೇರಿದಂತೆ ಹಲವು ಚಿತ್ರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಭಾಸ್ಕರ್ ಅವರ ಏಕೈಕ ಮಗ ಕೋಲ ಬಾಲಕೃಷ್ಣ ಸಹ ತೆಲುಗು ಇಂಡಸ್ಟ್ರಿಯಲ್ಲಿ ಹೀರೋ ಆಗಿ ಪರಿಚಯವಾಗಿದ್ದರು. ‘7 ಜಿ ಬೃಂದಾವನ ಕಾಲೋನಿ’ ನಿರ್ದೇಶಕ ತಯಾರಿಸಿದ್ದ ‘ನನ್ನ ವದುಲಿ ನುವ್ವು ಪೋಲೆವುಲೆ’ ದ್ವಿಭಾಷ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು.

 

Related posts

ನಾನು ಜಾತ್ಯತೀತ ವ್ಯಕ್ತಿ, ರಾಮ ಮಂದಿರಕ್ಕೆ ದೇಣಿಗೆ ನೀಡುತ್ತೇನೆ: ರಾಬರ್ಟ್​ ವಾದ್ರಾ

Sushmitha Jain

ಬೆಳಗಾವಿಯ ಮೊದಲ ಕನ್ನಡ ಮಹಾಪೌರ ಸಿದ್ದನ ಗೌಡ ಪಾಟೀಲ ನಿಧನ

Harshitha Harish

ನಮ್ಮದು ಪ್ರಜಾಪ್ರಭುತ್ವ ದೇಶ, ರೈತರ ಪರ ದನಿ ಎತ್ತುವ ಸ್ವಾತಂತ್ರ್ಯ ಕೂಡಾ ದಿಶಾಗೆ ಇಲ್ಲವೇ..?: ದಿಶಾ ಬೆನ್ನಿಗೆ ನಿಂತ ಸ್ಯಾಂಡಲ್‌ವುಡ್ ಪದ್ಮಾವತಿ

Sushmitha Jain