ಹೈದರಾಬಾದ್ : ಖ್ಯಾತ ತೆಲುಗು ಚಲನಚಿತ್ರ ನಿರ್ಮಾಪಕ ಮತ್ತು ವಿತರಕ ವಿ. ದೋರೆಸ್ವಾಮಿ ರಾಜು ಹೃದಯಾಘಾತ ದಿಂದ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
ಟಾಲಿವುಡ್ ನಲ್ಲಿ ರಾಯಲ್ ಸೀಮೆ ರಾಜು ಎಂದೇ ಖ್ಯಾತಿ ಗಳಿಸಿದ್ದ ದೊರೆಸ್ವಾಮಿ ರಾಜು ವಿತರಕರಾಗಿ ಚಿತ್ರೋದ್ಯಮಕ್ಕೆ ಕಾಲಿಟ್ಟರು.
ವಿಜಯ ಮಾರುತಿ ಕ್ರಿಯೇಟಿವ್ಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾಗಿ ಹಲವು ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಅಲ್ಲದೆ ವಿಎಂಸಿ ಫಿಲ್ಮ್ಸ್ ಡಿಸ್ಟ್ರಿಬ್ಯೂಷನ್ ಸಂಸ್ಥೆಯ ಸ್ಥಾಪಕರೂ ಆಗಿದ್ದ ದೊರೆಸ್ವಾಮಿ ರಾಜು 700 ಕ್ಕೂ ಹೆಚ್ಚು ಚಲನಚಿತ್ರಗಳ ವಿತರಣೆ ಮಾಡಿದ್ದರು.
ದೊರೆಸ್ವಾಮಿ ರಾಜು ಅವರ ನಿಧನಕ್ಕೆ ತೆಲುಗು ಚಿತ್ರೋದ್ಯಮದ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.