ಕತೆ-ಕವನಗಳು

ಮೂಕ ಹೆಣ್ಣು

 

ಬಯಸಿದ ಆಸೆಯಂತೆ

ಕನಸ ಹೊತ್ತ ಮಗಳ ಬದುಕು ಬಂಗಾರವಾಗಲು

ಮದುವೆಯೆಂಬ ನಾಂದಿ ಹಾಡಿ ಹುರಿದುಂಬಿಸುವರು ಬಂಧುಗಳು

ಎಲ್ಲೊ ಇದ್ದ ಮನಕೆ
ರಭಸದ ಅಲೆಯಂತೆ
ಚಿಗುರಿದ ಆಸೆಗೆ
ಬಲೆ ಬೀಸಿದಂತೆ
ಭಾಸವಾಯಿತು ಮೂಕ ವಿಸ್ಮಯದಂತೆ

ತಂದೆತಾಯಿಯ ಪ್ರೀತಿಯಂತೆ
ಕೊರಳ ಅರ್ಪಿಸುವಳು ಬೇರೊಂದು ಮನಕೆ
ಕಷ್ಟವೋ ಸುಖವೋ ಎಂಬಂತೆ
ದಾರಿಯಾಗಿಹಳು ಜೀವನಕೆ

ಸಂತೋಷದ ರಸದಂತೆ
ಹೊಸ ಚಿಗುರ ಪಡೆದಿಹರು
ಬಂಧುಗಳ ಸಂತೋಷದಂತೆ
ತನ್ನ ಜೀವನ ಸುಖವಾಗಿಸಿಹರು

ಮಕ್ಕಳೊಡನೆ ಕಳೆದಿಹರು
ಮೋಜು ಮಸ್ತಿನಂತೆ
ದಾರಿ ದೀಪವಾಗುವರು
ಬಾಳಬೆಳಗುವಂತೆ

ತವರ ಮನೆಯು ನೆರವಾಗುವುದು
ನೊಂದ ಮನವ ಮರೆಯಲು
ಯಜಮಾನನ ಮನೆಯೂ
ತಾಯಿಯ ಪ್ರೀತಿಯ ನೀಡಲಾರವು
ನೋವನುಂಗಿ ನಗುತಿಹಳು ಮೂಕ ಪಶುವಿನಂತೆ!!

☝ಪ್ರಜ್ಞಾ ಕುಲಾಲ್ ಕಾವು

Related posts

ಕತೆ: ಹೂವು ತಿಳಿಸಿದ ಜೀವನದ ಸತ್ಯ…!

Upayuktha

*ಚೆಂದದ ಮಗು*

Harshitha Harish

*ಯಾಕೆ ಈ ಥರ*

Harshitha Harish