ಅಪಘಾತ- ದುರಂತ ರಾಜ್ಯ

ಮಾವುತನನ್ನೇ ಕೊಂದ ಮೈಸೂರು ಮೃಗಾಲಯದ ಆನೆ

 

 

ಮೈಸೂರು : ವಿಶ್ವವಿಖ್ಯಾತ ಮೈಸೂರು ಮೃಗಾಲಯದಲ್ಲಿ ಆನೆಯೊಂದು ತನ್ನನ್ನು ನೋಡಿಕೊಳ್ಳುವ ಮಾವುತನನ್ನೇ ತುಳಿದು ಸಾಯಿಸಿರುವ ಘಟನೆ ಶುಕ್ರವಾರ (ಆ. 07) ರಾತ್ರಿ ಸಂಭವಿಸಿದೆ.

ಹರೀಶ್ ಎಂಬ ಮಾವುತ ತಾನು ಸಲಹುತ್ತಿದ್ದ  ಆನೆ ದಾಳಿಯಿಂದಲೇ ದುರಂತ ಸಾವನ್ನಪ್ಪಿದ್ದಾರೆ. ಕಳೆದ ಐದು ದಿನಗಳಿಂದ ರಜೆ ಮೇಲೆ ತೆರಳಿದ್ದ ಹರೀಶ್ ಇವತ್ತು ಕೆಲಸಕ್ಕೆ ಹಾಜರಾಗಿದ್ದರು. ಎಂದಿನಂತೆ ಆನೆಯ ಮೈದಡವಿ ಹುಲ್ಲು ಹಾಕುವ ಸಂದರ್ಭದಲ್ಲಿ ಆತನನ್ನು ಸೊಂಡಿಲಿನಿಂದ ಎತ್ತಿ ಕೆಳಕ್ಕೆ ಹಾಕಿ ಹೊಸಕಿದೆ.

ಇದರಿಂದ ಗೊಂದಲಕ್ಕೆ ಒಳಗಾದ ಇತರೆ ಸಿಬ್ಬಂದಿ ಕೂಡಲೇ ಹರೀಶನನ್ನು ಆನೆಯಿಂದ ಬಿಡಿಸಿಕೊಂಡು ತಕ್ಷಣವೇ ಗೋಪಾಲಗೌಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರಾದರೂ ಫಲಕಾರಿಯಾಗದೆ ಹರೀಶ್ ಸಾವನ್ನಪ್ಪಿದರು ಎಂದು ಮೃಗಾಲಯದ ಮೂಲಗಳು ತಿಳಿಸಿವೆ. ಪ್ರಕರಣ ಕುರಿತು ನಜರ್ ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾನ್ಯ ರೀತಿಯಲ್ಲಿ ಮಾವುತನನ್ನು ಆನೆ ಬಹಳ ಪ್ರೀತಿಯಿಂದ ನೋಡುತ್ತದೆ. ಜೊತೆಗೆ ಆನೆಗೆ ಮದ ಬಂದಾಗ ಮಾತ್ರ ಈ ರೀತಿ ದಾಳಿಗೆ ಆನೆ ಮುಂದಾಗುತ್ತದೆ. ಆದರೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ಕೊಡುವ ಮೈಸೂರು ಮೃಗಾಲಯದಲ್ಲಿ ಘಟನೆ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಘಟನೆಯ ಪರಿಣಾಮ ಮೃಗಾಲಯದ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದು ಹೆಚ್ಚಿನ ವಿವರಗಳು ಗೊತ್ತಾಗಬೇಕಾಗಿದೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಸೈಬರ್ ಕಳ್ಳರಿಂದ ಹೊಸ ವಂಚನೆ ತಂತ್ರ: ಬ್ಯಾಂಕ್‌ ಇಎಂಐ ಮುಂದೂಡಿಕೆ ಸೋಗಿನಲ್ಲಿ ಒಟಿಪಿ ಪಡೆದು ವಂಚಿಸುವ ಹುನ್ನಾರ ಬಯಲಿಗೆ

Upayuktha

ಜೆಡಿಎಸ್ ಶಾಸಕ ಸತ್ಯನಾರಾಯಣ ನಿಧನ

Harshitha Harish

ಸ್ಪೇಸ್​​​​​​​ನಲ್ಲಿ ರಿಲೀಸ್ ಆಯ್ತು ‘ಹಾಸ್ಟೆಲ್ ಹುಡುಗರು’ ಟೀಸರ್: ಪ್ರಮೋಷನ್ ಕ್ರಿಯೆಟಿವಿಟಿ ನೋಟಿ ಕಿಚ್ಚ ಫುಲ್ ಫಿದಾ

Sushmitha Jain