ದೇಶ-ವಿದೇಶ ನಿಧನ ಸುದ್ದಿ

ಸುಧೀರ್ಘ ಕಾಲ ಬಹ್ರೈನ್‌ ಪ್ರಧಾನಿಯಾಗಿದ್ದ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ನಿಧನ

ಬಹ್ರೇನ್: ಹೆಚ್ಚು ಕಾಲ ಬಹ್ರೇನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಪ್ರಧಾನಿ ಖಲೀಫಾ ಬಿನ್​ ಸಲ್ಮಾನ್​ ಅಲ್​ ಖಲೀಫಾ (84) ನಿಧನರಾಗಿದ್ದಾರೆ ಎಂದು ಬಹ್ರೇನ್  ರಾಯಲ್ ಕೋರ್ಟ್ ಮಾಹಿತಿ ನೀಡಿದೆ.

ಕೋವಿಡ್ ಕಾರಣದಿಂದಾಗಿ ತುಂಬಾ ಹತ್ತಿರದ ಆಪ್ತವಲಯದವರ ಸಮ್ಮುಖದಲ್ಲಷ್ಟೇ ಅಂತ್ಯಕ್ರಿಯೆ ನಡೆಯಲಿದೆ.

1970 ರಿಂದ ಬಹ್ರೇನ್ ಗೆ ಸೇವೆ ಸಲ್ಲಿಸಿದ್ದ ಖಲೀಫಾ ಬಿನ್​ ಸಲ್ಮಾನ್​ ಅಲ್​ ಖಲೀಫಾ ಆಗಸ್ಟ್ 15, 1971 ರಂದು ಬಹ್ರೇನ್ ಸ್ವಾತಂತ್ರ್ಯಗೊಂಡಾಗಿನಿಂದ ಅಲ್ಲಿನ ಪ್ರಧಾನಿಯಾಗಿದ್ದರು.

ಅವರು ವಿಶ್ವದ ಯಾವುದೇ ಸರ್ಕಾರದಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿ ಎನಿಸಿದ್ದಾರೆ.

ಖಲೀಫಾ ಅವರ ನಿಧನಕ್ಕೆ ಬಹ್ರೇನ್​ ದೊರೆ ಹಮೀದ್​ ಬಿನ್​​  ಸಂತಾಪ ಸೂಚಿಸಿದ್ದು ದೇಶಾದ್ಯಂತ ಒಂದು ವಾರಗಳ ಕಾಲ ಶೋಕಾಚರಣೆ ಘೊಷಿಸಿದ್ದಾರೆ.

ಖಲೀಫಾ ನಿಧನಕ್ಕೆ ಇಸ್ರೇಲ್​ ಪ್ರಧಾನಿ ಸೇರಿದಂತೆ ವಿಶ್ವದ ನಾನಾ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

 

Related posts

ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ: 1 ಕೋಟಿಗೂ ಅಧಿಕ ಮೊತ್ತದ ಹಣ ಸಂಗ್ರಹಿಸಿ ದೇಣಿಗೆ ನೀಡಿದ ಎಸ್​​​ಸಿಡಿಸಿಸಿ ಬ್ಯಾಂಕ್ ಮತ್ತು ನವೋದಯ ಸ್ವ-ಸಹಾಯ ಸಂಘ

Sushmitha Jain

173 ಕರಾವಳಿ ಮತ್ತು ಗಡಿ ಜಿಲ್ಲೆಗಳಲ್ಲಿ ಎನ್‌ಸಿಸಿ ವಿಸ್ತರಣೆ: ಪ್ರಧಾನಿ ಮೋದಿ ಪ್ರಕಟ

Upayuktha News Network

ಮುಕೇಶ್ ಅಂಬಾನಿ ನಿವಾಸದ ಬಳಿ ಕಾರಿನಲ್ಲಿ ಜಿಲೆಟಿನ್ ಪತ್ತೆ

Harshitha Harish