ರಾಜ್ಯ

ನಾಡಹಬ್ಬ ದಸರಾ ಜಂಬೂ ಸವಾರಿ ಮುಕ್ತಾಯ

ಮೈಸೂರು: ಈ ಬಾರಿಯ ಐತಿಹಾಸಿಕ ಜಂಬೂ ಸವಾರಿ ಸರಳವಾಗಿ ಆಚರಣೆ ಮಾಡಿ ಇದೀಗ ಮುಕ್ತಾಯಗೊಂಡಿದೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸೋಮವಾರ ನಾಡ ದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವ ವಿಖ್ಯಾತ ಮೈಸೂರು ನಾಡ ಹಬ್ಬವಾದ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಚಾಲನೆ ನೀಡಿದ್ದರು.

ಹಾಗೆಯೇ ಅರಮನೆ ಆವರಣದಲ್ಲಿ ಸೀಮಿತಗೊಂಡ ಜಂಬೂ ಸವಾರಿಯಲ್ಲಿ ಅಭಿಮನ್ಯು ಮೊದಲ ಬಾರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿದಾಗ ವಿಜಯ ಕಾವೇರಿ, ಗೋಪಿ ಆನೆಗಳು ಜೊತೆಗೆ ಸಾಥ್ ನೀಡಿದ್ದವು.

ಹಾಗೂ ಬಲರಾಮ ದ್ವಾರದ ಬಳಿ ಸಂಜೆ 4.17 ವೇಳೆಗೆ ಜಂಬೂ ಸವಾರಿ ಮೆರವಣಿಗೆ ಕೊನೆಗೊಂಡಿತು.

ಅದರಲ್ಲಿ ಎರಡು ಸ್ತಬ್ಧಚಿತ್ರಗಳು ಮಾತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಅಲ್ಲಿ ನೆರೆದಿದ್ದ ವೀಕ್ಷಕರು ಖುಷಿ ಪಟ್ಟರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಬೆಂಗಳೂರು: ಜಿಲೆಟಿನ್ ಸ್ಫೋಟ ; ಐವರು ಸಾವು

Harshitha Harish

ಸಿದ್ದರಾಮಯ್ಯ ಒಬ್ಬ ಡಕೋಟಾ ರಾಜಕಾರಣಿ: ಮತ್ತೆ ಸಿದ್ದುವನ್ನು ಟೀಕಿಸಿದ ಈಶ್ವರಪ್ಪ

Sushmitha Jain

ಆಸ್ಪತ್ರೆಗಳಲ್ಲಿ ಗುತ್ತಿಗೆ ಸಿಬ್ಬಂದಿಯ ಅವಧಿ 6 ತಿಂಗಳು ವಿಸ್ತರಣೆ

Harshitha Harish